ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸಿಲಿಕಾನ್ ಸಿಟಿಯಲ್ಲಿ ಅಗ್ನಿ ಅವಘಡ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿರುತ್ತವೆ. ಇಂದು ಕೂಡ ಬೆಂಗಳೂರಿನಲ್ಲಿರುವ ಖಾಸಗಿ ಕಂಪನಿಯ ಕಟ್ಟಡವೊಂದರಲ್ಲಿ ಅಗ್ನಿ ಅವಘಡವೊಂದು (Fire Accident in Private Company, Bengaluru) ಸಂಭವಿಸಿದೆ.
ಆರ್ ಟಿ ನಗರ ರಸ್ತೆಯಲ್ಲಿರೋ ಮಿರಾಕಲ್ ಡ್ರಿಂಕ್ಸ್ ಕಂಪನಿಯ ಕಟ್ಟಡದಲ್ಲಿ ಈ ಅವಘಡ ಸಂಭವಿಸಿದೆ. ಘಟನೆಯಲ್ಲಿ ಹೊಗೆ, ಬೆಂಕಿಯ ಮಧ್ಯೆ ಸಿಲುಕಿದ್ದ ಯುವಕನೊಬ್ಬ ಅಸ್ವಸ್ಥಗೊಂಡಿದ್ದಾನೆ. ಕೂಡಲೇ ಆತನನ್ನು ಪೊಲೀಸ್ ವಾಹನದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗುತ್ತಿದೆ.
Advertisement
Advertisement
ಅಗ್ನಿ ಅವಘಡ ಸಂಭವಿಸುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವಲ್ಲಿ ನಿರತರಾದರು. ರಕ್ಷಣಾ ಕಾರ್ಯ ಮುಂದುವರಿದಿದೆ. ದಟ್ಟವಾದ ಹೊಗೆ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಸ್ಮೋಕ್ ಎಕ್ಸಾಸ್ಟರ್ (ಹೊಗೆ ಹೊರ ಎಳೆಯುವ ಯಂತ್ರ) ಅಳವಡಿಕೆ ಮಾಡಲಾಗುತ್ತಿದೆ. ಇದನ್ನೂ ಓದಿ: ಸಲೂನ್‌ನಲ್ಲಿ ಜನರಿಗೆ ಕ್ಷೌರ ಮಾಡಿ ಮತಯಾಚನೆ- ಗಮನ ಸೆಳೆದ ಅಭ್ಯರ್ಥಿಯ ಚುನಾವಣಾ ಪ್ರಚಾರ
Advertisement
Advertisement
IDS next business solutions pvt ltd ಮತ್ತು ಮಿರಾಕಲ್ ಡ್ರಿಂಕ್ಸ್ ಕಂಪನಿ ಈ ಎರಡು ಕಂಪನಿಗಳು ವೆಡ್ ಎಲಿಕ್ಸಿರ್ ಗ್ಲೋಬಲ್ ಪ್ರೈ.ಲಿ. ಕಟ್ಟಡದಲ್ಲಿ ಇದ್ದವು. ಈ ಕಟ್ಟಡದಲ್ಲಿ ಸುಮಾರು 60 ಕ್ಕೂ ಹೆಚ್ಚು ಸಿಬ್ಬಂದಿ ಇದ್ದರು. ನೆಲ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ಸಿಬ್ಬಂದಿ ಟೆರೆಸ್ ಗೆ ಓಡಿ ಹೋಗಿದ್ದಾರೆ. ಇನ್ನು ಸಿಬ್ಬಂದಿ ಜೀವ ಉಳಿಸಿಕೊಳ್ಳಲು ಪರದಾಡ್ತಿದ್ದ ದೃಶ್ಯಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ದಟ್ಟ ಹೊಗೆಯ ಮಧ್ಯೆ ಸಿಬ್ಬಂದಿ ಮರದಿಂದ, ಬಿಲ್ಡಿಂಗ್ ಟೆರಸ್ ಗೆ ಏಣಿ ಇಟ್ಟು ಈ ಏಣಿಯ ಮೂಲಕ ಇಳಿದಿದ್ದಾರೆ.