ಬೆಂಗಳೂರು: ಫ್ಲೈಟ್‌ನಲ್ಲಿ (Flight) ಪ್ರೀತಿಯ ಶ್ವಾನವನ್ನು (Dog) ಪೈಲೆಟ್ ಬಿಡದಿದ್ದಕ್ಕೆ ಬೆಂಗಳೂರಿನ (Bengaluru) ವ್ಯಕ್ತಿಯೊಬ್ಬ 4 ಲಕ್ಷ ರೂ. ಟ್ರಿಪ್‌ನ್ನು ಕ್ಯಾನ್ಸಲ್ ಮಾಡಿಕೊಂಡಿದ್ದಾನೆ.
ಬೆಂಗಳೂರಿನ ವರ್ತೂರಿನ ನಿವಾಸಿ ಸಚಿನ್ ಶೆಣೈ ಟ್ರಿಪ್ ಕ್ಯಾನ್ಸಲ್ ಮಾಡಿಕೊಂಡ ವ್ಯಕ್ತಿ. ಬೆಂಗಳೂರಿನಲ್ಲಿ ಐಟಿ ಕಂಪನಿಯ HR ಆಗಿ ಕೆಲಸ ಮಾಡುತ್ತಿದ್ದ ಸಚಿನ್ ನಾಯಿಯೊಂದನ್ನು ಪ್ರೀತಿಯಿಂದ ಸಾಕಿಕೊಂಡಿದ್ದ. ಆತನ ಕುಟುಂಬಸ್ಥರು ಇಯರ್ ಎಂಡ್ ಟ್ರಿಪ್‌ಗಾಗಿ 12 ದಿನದ ಪ್ಲ್ಯಾನ್ ಮಾಡಿಕೊಂಡಿದ್ದರು. ಈ ವೇಳೆ ಸಚಿನ್ ತನ್ನ ಸಾಕು ನಾಯಿಯನ್ನು ಜೊತೆಗೆ ಕರೆದೊಯ್ಯುವ ಪ್ಲ್ಯಾನ್ ಮಾಡಿಕೊಂಡಿದ್ದ. ಹೀಗೆ ಪ್ಲ್ಯಾನ್ ಮಾಡಿದ್ದ ಸಚಿನ್ ಕುಟುಂಬ 4 ಲಕ್ಷ ಖರ್ಚು ಮಾಡಿ ಬೆಂಗಳೂರು ಟು ಅಮೃತಸರಕ್ಕೆ ಹೋಗಬೇಕೆಂದುಕೊಂಡಿದ್ದರು. ಇದಕ್ಕಾಗಿ ಅಮೃತಸರದಲ್ಲಿ ಹೋಟೆಲ್, ಕ್ಯಾಬ್ ಬುಕ್ ಮಾಡಿಕೊಂಡಿದ್ದರು.
Advertisement
Advertisement
ಮೂರು ತಿಂಗಳ ಹಿಂದೆ ಫ್ಲೈಟ್ ಬುಕ್ ಆಗಿತ್ತು. ಜೊತೆಗೆ ನಾಯಿಗಾಗಿ ಬೋರ್ಡಿಂಗ್ ಪಾಸ್ ಪಿಟ್ ಟು ಫ್ಲೈ ಸರ್ಟಿಫಿಕೇಟ್ ಕೂಡ ತೆಗೆದುಕೊಂಡಿದ್ದರು. ಆದರೆ ಇನ್ನೇನೂ ಪ್ಲೈಟ್ ಹತ್ತಬೇಕು ಅನ್ನುವಷ್ಟರಲ್ಲಿ ನಾಯಿಯ ಗೂಡು ಸರಿಯಾಗಿಲ್ಲ ಎನ್ನುವ ಕಾರಣಕ್ಕೆ ಪೈಲೆಟ್ ನಿರಾಕರಿಸಿದ್ದಾರೆ. ಅದೆಷ್ಟು ಮನವೊಲಿಸಿದರೂ ಪೈಲೆಟ್ ನಾಯಿಯನ್ನು ಹತ್ತಿಸಿಕೊಳ್ಳಲು ತಯಾರಿರಲಿಲ್ಲ. ನಾಯಿಯನ್ನು ಬಿಟ್ಟು ಬಂದರೆ ಮಾತ್ರ ನೀವು ದೆಹಲಿಗೆ ಹೋಗಬಹುದು ಎಂದಿದ್ದಾರೆ. ಇದರಿಂದ ಸಿಟ್ಟಿಗೆದ್ದ ಸಚಿನ್ ಎಲ್ಲ ರೂಲ್ಸ್ ಪಾಲನೆ ಮಾಡಿ, ಹಣ ಕಟ್ಟಿದ ಮೇಲೆ ಪೈಲೆಟ್ ಕಿರಿಕಿರಿ ಮಾಡಿದ ಬಗ್ಗೆ ಅಸಮಾಧಾನ ತೋರಿಸಿದ್ದಾನೆ. ಅಷ್ಟೇ ಅಲ್ಲದೇ ಇಡೀ ಟ್ರಿಪ್ ಕ್ಯಾನ್ಸಲ್ ಮಾಡಿಕೊಂಡು ಏರ್‌ಪೋರ್ಟ್‌ನಿಂದ ಸಚಿನ್ ಕುಟುಂಬ ವಾಪಸಾಗಿದೆ. ಇದನ್ನೂ ಓದಿ: MES ಪುಂಡರನ್ನು ಹದ್ದುಬಸ್ತಿನಲ್ಲಿ ಇಡುವುದು ನಮಗೆ ಗೊತ್ತಿದೆ : ಬೊಮ್ಮಾಯಿ
Advertisement
Airindia is #antipet #arrogantpilot D K Chopra. #pilotisnotgod #shampetpolicyhttps://t.co/lEVEHbEybU…@PMOIndia @JM_Scindia @Manekagandhibjp @tv9kannada @republic @WIONews @timesofindia @TimesNow @MirrorNow pic.twitter.com/IgZNj9VzDC
— Sachin Shenoy (@SachinShenoy7) December 17, 2022
Advertisement
ಇನ್ನೂ ಘಟನೆಗೆ ಸಂಬಂಧಿಸಿ ಸಚಿನ್ ವೀಡಿಯೋವೊಂದನ್ನು ಮಾಡಿದ್ದು, ಏರ್‌ಪೋರ್ಟ್‌ನಲ್ಲಿ ನಡೆದ ಘಟನೆ ಬಗ್ಗೆ ಶೇರ್ ಮಾಡಿಕೊಂಡು, ಇದ್ಯಾವ ರೀತಿಯ ನ್ಯಾಯ ಅಂತಾ ಸಚಿನ್ ಪ್ರಶ್ನಿಸಿದ್ದಾನೆ. ಅಷ್ಟೇ ಅಲ್ಲದೇ ಶ್ವಾನವನ್ನು ಬಿಡದಿದ್ದಕ್ಕೆ 4 ಲಕ್ಷ ವೆಚ್ಚದ ಟ್ರಿಪ್‌ನ್ನು ಕ್ಯಾನ್ಸಲ್ ಮಾಡಿಕೊಳ್ಳಬೇಕಾಗಿ ಬಂತು ಎಂದು ಏರ್‌ಪೋರ್ಟ್‌ನಲ್ಲಿ ವೀಡಿಯೋ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾನೆ. ಇದನ್ನೂ ಓದಿ: ಕ್ಲಬ್, ಪಬ್‌ನಲ್ಲಿ ಮಹಿಳಾ ಸಿಬ್ಬಂದಿ ಕಡ್ಡಾಯ – ಹೊಸ ವರ್ಷಾಚರಣೆಗೆ ಪಿಂಕ್‌ಸ್ಕ್ವಾಡ್ ಸರ್ಪಗಾವಲು