– ಐದು ದಿನಗಳ ಕಾಲ ಪ್ರತಿಯೊಬ್ಬರ ರೂಂಗೆ ಹೋಗಿ ಮಗು ಅಳು
– ಹಾಲಿಗಾಗಿ ರೋಧಿಸಿ 9 ತಿಂಗಳ ಮಗು ದಾರುಣ ಸಾವು
ಬೆಂಗಳೂರು: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡರೆ, 9 ತಿಂಗಳ ಕಂದಮ್ಮ ಹಾಲಿಗಾಗಿ ರೋಧಿಸಿ ಸಾವನ್ನಪ್ಪಿದೆ. ಆದರೆ ಅದೃಷ್ಟವಶಾತ್ ಎಂಬಂತೆ ಐದು ದಿನಗಳ ಕಾಲ ಅನ್ನ, ನೀರಿಲ್ಲದೆ ಎರಡೂವರೆ ವರ್ಷದ ಮಗು ಪ್ರಣಾಪಾಯದಿಂದ ಪಾರಾಗಿದೆ.
Advertisement
ತಿಗಳರಪಾಳ್ಯದಲ್ಲಿ ವಾಸವಿದ್ದ ಶಾಸಕ ಪತ್ರಿಕೆ ಸಂಪಾದಕ ಶಂಕರ್ ಕುಟುಂಬದ ಐದು ಮಂದಿ ಅಕಾಲಿಕ ಸಾವು ಕಂಡಿದ್ದಾರೆ. ಶಂಕರ್ ಪತ್ನಿ ಭಾರತಿ(50), ಮಗಳು ಸಿಂಚನ(33), 2ನೇ ಮಗಳು ಸಿಂಧುರಾಣಿ (30), ಮಗ ಮಧುಸಾಗರ್(27) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 9 ತಿಂಗಳ ಮಗು ಹಾಲಿಗಾಗಿ ರೋಧಿಸಿ ಪ್ರಾಣ ಬಿಟ್ಟಿದೆ. ಘಟನೆಯಲ್ಲಿ ಸಿಂಚನಾಳ ಎರಡೂವರೆ ವರ್ಷದ ಮಗಳು ಪ್ರೇಕ್ಷ ಐದು ದಿನಗಳ ಕಾಲ ಅನ್ನ, ನೀರು ಇಲ್ಲದಿದ್ದರೂ ಬದುಕುಳಿದಿದ್ದಾಳೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಒಂದೇ ಕುಟುಂಬದ ಐವರು ಸಾವು- ಆತ್ಮಹತ್ಯೆಗೂ ಮುನ್ನ ಪುಟ್ಟ ಕಂದಮ್ಮನ ಕೊಂದ್ರು!
Advertisement
Advertisement
ಎರಡೂವರೆ ವರ್ಷದ ಪ್ರೇಕ್ಷ ಪ್ರತಿಯೊಬ್ಬರ ರೂಂ ಬಳಿ ಹೋಗಿ ಅತ್ತಿದ್ದಾಳೆ. ಐದು ದಿನಗಳ ಕಾಲ ಅನ್ನ, ನೀರಿಲ್ಲದೆ ಕಾಲ ಕಳೆದಿದ್ದಾಳೆ. ಕತ್ತಲಲ್ಲಿ, ಎಲ್ಲರ ಮೃತದೇಹಗಳ ಬಳಿ ಹೋಗಿ ಅತ್ತಿದ್ದಾಳೆ. ಅಮ್ಮ ಸಿಂಚನಾಳ ಮೃತದೇಹದ ಬಳಿ ಕುಳಿತು ಪ್ರೇಕ್ಷ ಅತ್ತಿದ್ದಾಳೆ. ಮೃತದೇಹಗಳಿಂದ ಹುಳುಗಳು ಹೊರಬಂದು, ಕೆಟ್ಟ ವಾಸನೆ ಬರಲು ಆರಂಭಿಸಿದೆ. ಒಂದು ಕಡೆ ವಾಸನೆ, ಮತ್ತೊಂದು ಕಡೆ ಮೃತದೇಹದಿಂದ ಹುಳುಗಳು ಹೊರ ಬರುತ್ತಿವೆ. ಇದೆಲ್ಲದರ ಮಧ್ಯೆ ಪ್ರೇಕ್ಷ ಐದು ದಿನ ಅನ್ನ, ನೀರು ಇಲ್ಲದೆ ಕಾಲ ಕಳೆದಿದ್ದಾಳೆ. ಹೊಟ್ಟೆ ಹಸಿವು, ಅನ್ನವಿಲ್ಲ, ನೀರಿಲ್ಲದೆ ಭಯದಲ್ಲೇ ಐದು ದಿನಗಳ ಕಾಲ ಹೋರಾಟ ನಡೆಸಿ ಬದುಕುಳಿದಿದ್ದಾಳೆ.
Advertisement
ಹಾಲಿಗಾಗಿ ರೋಧಿಸಿ ಪ್ರಾಣ ಬಿಟ್ಟ ಮಗು
ಮಲಗಿದ್ದ ಮಂಚದ ಮೇಲೆಯೇ ಏನೂ ಅರಿಯದ 9 ತಿಂಗಳ ಕಂದಮ್ಮನ ಧಾರುಣವಾಗಿ ಸಾವನ್ನಪ್ಪಿದೆ. ಸಾಯುವ ಮೊದಲು ಸಿಂಧುರಾಣಿ ಮಗುವಿಗೆ ಹಾಲುಣಿಸಿದ್ದಾಳೆ. ಹಾಲುಣಿಸಿ, ಮಗುವನ್ನು ಮಲಗಿಸಿದ್ದಾಳೆ. ಮತ್ತೊಂದು ಮಗು ಪ್ರೇಕ್ಷಾಳಿಗೆ ಊಟ ತಿನ್ನಿಸಿ ಮಲಗಿಸಿದ್ದಾರೆ. ಮಕ್ಕಳು ಮಲಗಿದ ಮೇಲೆ ಅಮ್ಮ ಭಾರತಿ, ಮಕ್ಕಳಾದ ಸಿಂಚನ, ಸಿಂಧುರಾಣಿ ಹಾಗೂ ಮಧು ಸಾಗರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಲ್ಲರೂ ಪ್ರತ್ಯೇಕ ರೂಮ್ ಗಳಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದನ್ನೂ ಓದಿ: ಪಬ್ಲಿಕ್ ಟಿವಿ ವಿದ್ಯಾಪೀಠಕ್ಕೆ ಇಂದು ಚಾಲನೆ – ಇಂದಿನ ಕಾರ್ಯಕ್ರಮಗಳು ಏನು?
ನಿದ್ದೆಯಿಂದ ಎದ್ದ ಒಂಭತ್ತು ತಿಂಗಳ ಗಂಡು ಮಗು ಅಳುವುದಕ್ಕೆ ಶುರು ಮಾಡಿದೆ. ಹಸಿವಿನಿಂದ ಮಗು ಸಾಕಷ್ಟು ಹೊತ್ತು ಅತ್ತಿದೆ. ಮತ್ತೊಂದು ಮಗು ಪ್ರೇಕ್ಷ ಕೂಡ ನಿದ್ದೆಯಿಂದ ಎದ್ದು ಅಳುವುದಕ್ಕೆ ಶುರು ಮಾಡಿದೆ. ಬಂಗಲೆ ಸೌಂಡ್ ಪ್ರೂಫ್ ಇದ್ದ ಕಾರಣ ಮಕ್ಕಳ ಆಕ್ರಂದನ ಯಾರಿಗೂ ಕೇಳಿಸಿಲ್ಲ. 9 ತಿಂಗಳ ಹಸುಗೂಸು ಹಾಲಿಲ್ಲದೆ ಅತ್ತು ಅತ್ತು ಪ್ರಾಣ ಬಿಟ್ಟಿದೆ. ಎಚ್ಚರವಾದಾಗ ಅಳುವುದು, ಮಲಗಿದ್ದ ಜಾಗದಲ್ಲೆ ಮಲಗುವುದು ಮಾಡಿದೆ. ಕೊನೆಗೆ ಹಸಿವು ತಾಳಲಾರದೆ ಕಂದಮ್ಮ ಪ್ರಾಣ ಬಿಟ್ಟಿದೆ.