– ಆಫರ್ ಅಂತ ಕ್ಲಿಕ್ ಮಾಡಿದ್ರೆ ನಿಮ್ಮ ಅಕೌಂಟ್ ಆಗುತ್ತೆ ಖಾಲಿ
ಬೆಂಗಳೂರು: ಸ್ವಲ್ಪ ಯಾಮಾರಿದ್ರೇ ಏನ್ ಆಗುತ್ತೆ ಅನ್ನೊಕೆ ಇದು ಉದಾಹರಣೆ. ರವೀಶ್ ಅನ್ನೊ ಸಾಫ್ಟ್ ವೇರ್ ಕನ್ಸಲ್ಟೆಂಟ್ ಆಗಿ ಕೆಲಸ ಮಾಡೋ ವ್ಯಕ್ತಿ ಫೇಕ್ ವೆಬ್‍ಸೈಟ್ ಇಂದು ಮೋಸ ಹೋಗಿದ್ದಾರೆ. ಕಳೆದ ಡಿಸೆಂಬರ್ 27 ರ ನೈಟ್ ಆನ್‍ಲೈನ್ ಅಲ್ಲಿ ಬ್ರೌಸ್ ಮಾಡಿದ್ದಾರೆ.
ಫ್ಲಿಪ್ ಕಾರ್ಟ್, ಅಮೇಜನ್ ಅಲ್ಲಿ ಬ್ರೌಸ್ ಮಾಡೋವಾಗ ಸಡನ್ ಆಗಿ ಒಂದು ನೋಟಿಫಿಕೇಷನ್ ಬಂದಿದೆ. ಅದೂ ಸಾವಿರಾರು ರೂಪಾಯಿಗಳ ಬೆಲೆಯ ವಸ್ತುಗಳನ್ನ ಎರಡು ಮೂರು ಸಾವಿರಕ್ಕೆ ಆಫರ್ ಅಂತ ಬಂದಿದೆ. ಇದೇನೋ ಫೆಸ್ಟಿವಲ್ ಅಥವಾ ನ್ಯೂ ಇಯರ್ ಸೇಲ್ ಅಂತ ಸುಮಾರು 21 ಸಾವಿರ ಬೆಲೆಯ ವಸ್ತುಗಳನ್ನ ಓಕೆ ಮಾಡಿದ್ದಾರೆ. ಯಾವಾಗ ಕ್ಲಿಕ್ ಮಾಡಿದ್ರೋ ಇವರ ಅಕೌಂಟಿನಲ್ಲಿದ್ದ ಹಣ ಗಾಯಾಬ್ ಆಗಿದೆ.
Advertisement
Advertisement
20 ಸಾವಿರ ಬೆಲೆಯ ವಸ್ತು 3-4 ಸಾವಿರಕ್ಕೆ, ಅದೂ 5 ನಿಮಿಷದ ಆಫರ್ ಅಂದಾಗ ನಾನು ಯಾಮಾರಿದೆ. ಸಾಫ್ಟ್‍ವೇರ್ ಕನ್ಸಲ್ಟೆಂಟ್ ಆದ ನಾನು ಈ ರೀತಿ ಮೋಸಕ್ಕೆ ಒಳಗಾಗಿದ್ದೇನೆ. ಆನ್‍ಲೈನ್ ಬಗ್ಗೆ ಅಲ್ಪ ಸ್ವಲ್ಪ ಗೊತ್ತಿರುವ ನಾನೇ ಈ ರೀತಿ ಮೋಸ ಹೋಗಿದ್ದೇನೆ. ಸಾಮಾನ್ಯ ಜನ ಇನ್ನೆಷ್ಟು ಮೋಸ ಹೋಗಬಹುದು ಎಂದು ಸೈಬರ್ ಕ್ರೈಮ್ ಗೆ ಕಂಪ್ಲೆಂಟ್ ಕೊಟ್ಟಿದ್ದಾರೆ.
Advertisement
ಉತ್ತರ ಭಾರತದಿಂದ ಈ ರೀತಿ ಅಮೇಜಾನ್, ಫ್ಲೀಪ್ ಕಾರ್ಟ್ ಅನ್ನೊ ಫೇಕ್ ವೆಬ್ ಸೈಟ್ ಗಳ ಮೂಲಕ ಇವರ ಹಣವನ್ನ ಲಪಟಾಯಿಸಿದ್ದಾರೆ. ನನಗಾದ ಪರಿಸ್ಥಿತಿಯಂತೆ ಯಾರೂ ಹಣ ಕಳೆದುಕೊಳ್ಳಬೇಡಿ ಅಂತ ಪಬ್ಲಿಕ್ ಟಿವಿ ಜೊತೆಗೆ ಮೋಸ ಆಗಿದ್ದನ್ನು ಹೇಳಿಕೊಂಡಿದ್ದಾರೆ.
Advertisement
ಇತ್ತೀಚೆಗೆ ಈ ರೀತಿಯ ಮೋಸದ ಪ್ರಕರಣಗಳು ಹೆಚ್ಚಾಗುತ್ತಲಿವೆ. ಇದನ್ನು ಸೈಬರ್ ಕ್ರೈಮ್ ಪೊಲೀಸರು ಬೇಧಿಸಿ ಆನ್‍ಲೈನ್ ಕಳ್ಳರ ವಿರುದ್ಧ ಕ್ರಮ ಜರುಗಿಸದ ಹೊರತು ಹೊಸ ಹೊಸ ದಾರಿಗಳನ್ನು ಹುಡುಕಿ ಅಮಾಯಕರ ಹಣವನ್ನು ಲಪಟಾಯಿಸುತ್ತಾರೆ. ಕೂಡಲೇ ಈ ಬಗ್ಗೆ ಕಾರ್ಯಪ್ರವೃತ್ತರಾಗಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.