– ಬೆಂಗ್ಳೂರನ್ನ ಸರಿ ಮಾಡದೋರು, ರಾಜ್ಯವನ್ನು ಹೇಗೆ ಸರಿ ಮಾಡ್ತಾರೆ?
ಬೆಂಗಳೂರು: ಭಾರೀ ಮಳೆಯಿಂದ (Rain) ಬೆಂಗಳೂರಿನ (Bengaluru) ಹಲವೆಡೆ ನಾನಾ ಅವಾಂತರಗಳಾಗಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ತಲೆ ತಗ್ಗಿಸುವಂತಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ (C.T Ravi) ಬೇಸರ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ (Chikkamagaluru) ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ರಾಜ್ಯ-ದೇಶದ ಬೊಕ್ಕಸಕ್ಕೆ ಬೆಂಗಳೂರಿಗರಿಂದ ದೊಡ್ಡ ಪ್ರಮಾಣದ ಹಣ ಬರುತ್ತದೆ. ಆದರೆ, ಬೆಂಗಳೂರಿಗರ ಬದುಕನ್ನ ನಾವು ಮುಳುಗಿಸುತ್ತಿದ್ದೇವೆ. ಕೆಂಪೇಗೌಡರ ಕಾಲ ಹಾಗೂ ಮದ್ಯದಲ್ಲಿ ಪ್ಲ್ಯಾನಡ್ ಬೆಂಗಳೂರು ಇತ್ತು. ಈಗ ಅನ್ ಪ್ಲ್ಯಾನಡ್ ಬೆಂಗಳೂರಾಗಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: Bengauru Rains Photo Gallery – ಮತ್ತೆ ಮಳೆಯಾಗಿದೆ…!
ಕಂದಾಯ ನಿವೇಶನ, ಲೂಟಿ ಹೊಡೆಯಲು ರಾಜಕಾಲುವೆ, ಕೆರೆಗಳನ್ನೇ ನುಂಗಿರೋದು, ರಾಜಕಾಲುವೆ ಒತ್ತುವರಿ ಕೂಡ ದಂಧೆಯಾಗಿದೆ. ಇದೇನಾ ಬ್ರಾಂಡ್ ಬೆಂಗಳೂರು? ಪ್ರತಿವರ್ಷ ಸಾವಿರಾರು ಕೋಟಿ ರೂ. ಹಣ ಹಾಕ್ತೀವಿ, ಈ ಹಣ ಎಲ್ಲಿ ಹೋಗ್ತಿದೆ? ಎಂದು ಪ್ರಶ್ನಿಸಿದ್ದಾರೆ.
ರಾಜ್ಯದ ಆದಾಯದಲ್ಲಿ 70% ಬೆಂಗಳೂರಿಂದ ಬರುತ್ತದೆ. ಇದು ಇವರಿಗೆ ಕರೆಯೋ ಹಸುವಾಗಿದೆ, ಕರೆಯುತ್ತಲೇ ಇರಬೇಕು. ಬೆಂಗಳೂರನ್ನು ಸರಿ ಮಾಡದೋರು, ರಾಜ್ಯವನ್ನು ಹೇಗೆ ಸರಿ ಮಾಡ್ತಾರೆ? ಈ ಸರ್ಕಾರ ಬ್ರಾಂಡ್ ಬೆಂಗಳೂರು ಅನ್ನುತ್ತೆ, ಇದೇನಾ ಬ್ರಾಂಡ್ ಬೆಂಗಳೂರು ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಮತ್ತೆ ಮಳೆ ಕಾಟ – KSRTC ಮೇಲೆ ಉರುಳಿಬಿದ್ದ ಮರ