ಬೆಂಗಳೂರು: ನರ್ಸಿಂಗ್ ಪರೀಕ್ಷೆಯಲ್ಲಿ ಪರೀಕ್ಷಾ ಮೇಲ್ವಿಚಾರಕಿಯೇ ವಿದ್ಯಾರ್ಥಿಗಳಿಗೆ ಕಾಪಿ ಮಾಡಲು ಸಹಾಯ ಮಾಡಿರುವ ಘಟನೆ ರಾಜೀವ್ ಗಾಂಧಿ ಯೂನಿವರ್ಸಿಟಿಯಲ್ಲಿ ನಡೆದಿದೆ.
ರಾಜೀವ್ ಗಾಂಧಿ ಯೂನಿವರ್ಸಿಟಿ ಸರ್ಕಾರಿ ಶ್ರುಶೂಷಕ ಕಾಲೇಜಿನಲ್ಲಿ ಅಕ್ಟೋಬರ್ 4ರಂದು ನಡೆದ ಬಿಎಸ್‍ಸಿ (ಪೋಸ್ಟ್ ಬೇಸಿಕ್) ಎಕ್ಸಾಂನಲ್ಲಿ ಮೇಲ್ವಿಚಾರಕಿಯೇ ಪರೀಕ್ಷಾ ಹಾಲ್‍ಗೆ ಪುಸ್ತಕ, ಉತ್ತರ ಪತ್ರಿಕೆ ವಿತರಣೆ ಮಾಡಿ ಸಿಕ್ಕಿಬಿದ್ದಿದ್ದಾರೆ.
Advertisement
Advertisement
ಬೆಂಗಳೂರು ಮೆಡಿಕಲ್ ಸೆಂಟರ್ ವಿಕ್ಟೋರಿಯಾದಲ್ಲಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಸರೋಜಮ್ಮ, ದುಡ್ಡು ಪಡೆದು ವಿದ್ಯಾರ್ಥಿಗಳಿಗೆ ಪರೀಕ್ಷಾ ಕೊಠಡಿಯಲ್ಲೇ ಪುಸ್ತಕ ಮತ್ತು ಉತ್ತರ ಪತ್ರಿಕೆ ಕೊಟ್ಟು ಕಾಪಿ ಮಾಡಿಸಿದ್ದಾರೆ. ನೌಕರಿಯಲ್ಲಿ ಇರೋರು ಕೆಲವೊಮ್ಮೆ ಪ್ರಮೋಶನ್, ಸರ್ಟಿಪಿಕೇಟ್‍ಗಾಗಿ ಸರ್ಕಾರಿ ಶ್ರುಶೂಷಕರ ಕಾಲೇಜಿನಲ್ಲಿ ಬಿಎಸ್‍ಸಿ ಎಕ್ಸಾಂ ಬರೆಯುತ್ತಾರೆ. ಇದನ್ನೇ ಬಂಡವಾಳವಾಗಿ ಇಟ್ಟುಕೊಂಡ ಕೆಲವರು ಇದರಿಂದ ದುಡ್ಡು ಮಾಡಲು ಹೊರಟ್ಟಿದ್ದಾರೆ.
Advertisement
Advertisement
ಈ ಹಿಂದೆ ಈ ಪರೀಕ್ಷೆಗಳಲ್ಲಿ ಅವ್ಯವಹಾರ ನಡೆದಿರೋದಕ್ಕೆ, ಪರೀಕ್ಷಾ ಹಾಲ್‍ನಲ್ಲಿ ವೆಬ್ ಸ್ಕ್ರೀನಿಂಗ್ ಹಾಕಲಾಗಿತ್ತು. ಅದನ್ನು ಕೂಡ ಆಫ್ ಮಾಡಿ ಈ ಕಳ್ಳಾಟಗಳನ್ನು ನಡೆಸಲಾಗುತ್ತಿದೆ ಎನ್ನಲಾಗಿದೆ. ಕ್ಯಾಮರಾ ಕಣ್ಣು ಗಮನಿಸುತ್ತಿದೆ ಎಂದು ಗೊತ್ತಿದ್ದರೂ ಖುಲ್ಲಾಂ ಖುಲ್ಲಾಂ ಪುಸ್ತಕಗಳನ್ನು ಎಕ್ಸಾಂ ಹಾಲ್‍ನಲ್ಲಿ ಹಂಚೋದರ ಹಿಂದೆ ದೊಡ್ಡವರ ಕೃಪಕಟಾಕ್ಷ ಇದೆ. ಇದರಲ್ಲಿ ಎಲ್ಲರಿಗೂ ಪಾಲು ಇದೆ ಎಂಬ ಆರೋಪ ಕೇಳಿ ಬಂದಿದೆ.