– ಪಬ್ಲಿಕ್ ಟಿವಿ ಸ್ಟಿಂಗ್ ಆಪರೇಷನ್‍ನಲ್ಲಿ ಬಯಲು
ಬೆಂಗಳೂರು: ಸಿಲಿಕಾನ್ ಸಿಟಿಯ ಜನರ ಅನುಕೂಲಕ್ಕಾಗಿ ಬಿಬಿಎಂಪಿ ಹಾಗೂ ಸರ್ಕಾರ ಒಂದಿಲ್ಲೊಂದು ಯೋಜನೆಗಳನ್ನ ಮಾಡುತ್ತಾನೆ ಇರುತ್ತದೆ. ಅದೇ ರೀತಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪ್ರಾರಂಭ ಮಾಡಿ ಹಲವು ವರ್ಷಗಳೇ ಕಳೆದಿದೆ. ಈ ಶುದ್ಧ ಕುಡಿಯುವ ನೀರಿನ ಶುದ್ಧತೆ ಬಗ್ಗೆ ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ ನಡೆಸಿದೆ.
Advertisement
ಹೌದು. ಜನರಿಗಾಗಿ, ಅದರಲ್ಲೂ ಬಡ ಜನರಿಗೆ ಅಂತಾನೇ ಜನನಾಯಕರು ಸರ್ಕಾರದ ಹಣದಿಂದ ವಾಟರ್ ಆರ್.ಓ ಪ್ಲಾಂಟ್‍ಗಳನ್ನ ನಿರ್ಮಾಣ ಮಾಡಿಸಿ ತಮ್ಮ ಫೋಟೋಗಳನ್ನ ಹಾಕಿಸಿ ಈ ಶುದ್ಧ ನೀರಿನ ಘಟಕವನ್ನು ನಾನೇ ಮಾಡಿಸಿದ್ದು ಎಂದು ತೊರಿಸಿಕೊಳ್ಳುತ್ತಿದ್ದಾರೆ. ಆದರೆ ಆ ನೀರು ಕುಡಿಯೋದಕ್ಕೆ ಯೋಗ್ಯವಾ ಎಂಬುದರ ಬಗ್ಗೆ ರಿಯಾಲಿಟಿ ಚೆಕ್ ಮಾಡಲು ಮುಂದಾದ ಪಬ್ಲಿಕ್ ಟಿವಿ ತಂಡಕ್ಕೆ ಫುಲ್ ಶಾಕ್ ಕಾದಿತ್ತು. ನೀರಿನ ಗುಣಮಟ್ಟ ಅಳೆಯುವ ಟಿಡಿಎಸ್ ಮಾಪಕದಲ್ಲಿ ಬಿಬಿಎಂಪಿಯ ಶುದ್ಧ ನೀರಿನ ಘಟಕದ ನೀರನ್ನು ಪರೀಕ್ಷೆ ಮಾಡಿದಾಗ ಸತ್ಯ ಬಯಲಾಗಿದೆ.
Advertisement
Advertisement
ಸ್ಥಳ: ರಾಜಾಜಿನಗರ
ಇಲ್ಲಿ ಟಿಡಿಎಸ್ ಮೀಟರ್‍ನಲ್ಲಿ ನೀರಿನ ಟಿಡಿಎಸ್ ಕೇವಲ 13 ಇರುವುದು ಕಂಡುಬಂತು. ಮಾಜಿ ಮೇಯರ್ ಪದ್ಮಾವತಿ ಅವರು ಮಾಡಿಸಿರೋ ಶುದ್ಧ ನೀರು ಕುಡಿಯುವ ಘಟಕದ ಈ ನೀರನ್ನ ಕುಡಿಯೋ ಜನರ ಪಾಡು ಆ ದೇವರ ಬಲ್ಲ ಎಂಬಂತಾಗಿದೆ.
Advertisement
ಸ್ಥಳ: ಮಹಾಲಕ್ಷ್ಮಿಲೇಔಟ್
ಮಹಾಲಕ್ಷ್ಮಿ ಲೇಔಟ್‍ನಲ್ಲಿ ಶುದ್ಧ ನೀರಿನ ಘಟಕಕ್ಕೆ ಬರವೇ ಇಲ್ಲ. ಆದರೆ ಆ ನೀರಿಗೆ ಕ್ವಾಲಿಟಿ ಮಾತ್ರ ಇಲ್ಲ. ಯಾಕಂದರೆ ಇಲ್ಲಿನ ನೀರಿನ ಟಿಡಿಎಸ್ ಪ್ರಮಾಣ 22 ಮಾತ್ರ ಇದೆ.
ಸ್ಥಳ: ಮಲ್ಲೇಶ್ವರಂ
ರಾಜ್ಯ ಬಿಜೆಪಿಯ ಕೇಂದ್ರ ಕಚೇರಿಯ ಕೂಗಳತೆಯ ದೂರದಲ್ಲಿರೋ ಶುದ್ಧ ನೀರಿನ ಘಟಕವಿದು. ಇಲ್ಲಿ ಸುತ್ತಮುತ್ತ ಬರಿ ದೇವಾಲಯಗಳೇ ಇವೆ. ಇಲ್ಲಿನ ನೀರಿನ ಕ್ವಾಲಿಟಿ ಕೇವಲ 17 ಮಾತ್ರ ಇದೆ.
ಹೀಗೆ ಪಬ್ಲಿಕ್ ಟಿವಿ ಎಲ್ಲೆಲ್ಲಿ ರಿಯಾಲಿಟಿ ಚೆಕ್ ನಡೆಸಿದೆಯೋ ಅಲ್ಲೆಲ್ಲ ನೀರು ಶುದ್ಧವಾಗಿಯೇ ಇಲ್ಲ. ಇದು ಬರೀ ಸ್ಯಾಂಪಲ್ ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲಿ ಈ ರೀತಿಯ ಶುದ್ಧ ನೀರಿನ ಘಟಕಗಳು ಇವೆ. ಸರಿಯಾದ ನಿರ್ವಹಣೆ ಇಲ್ಲದ ಕಾರಣ ಇಲ್ಲಿ ನೀರು ಶುದ್ಧೀಕರಣವಾಗುತ್ತಿಲ್ಲ. ಬಹುತೇಕ ಬೆಂಗಳೂರಿನ ಜನರು ಕುಡಿಯೋಕೆ ಈ ನೀರನ್ನೇ ಬಳಸುತ್ತಾರೆ.
ಟಿಡಿಎಸ್ ಪ್ರಮಾಣ 0 ಇದ್ರೇ ಅದನ್ನ ಡಿಸ್ಟಿಲ್ ವಾಟರ್ ಅಂತಾರೇ. ಅಂದರೆ ಆ ನೀರನ್ನ ಬ್ಯಾಟರಿಗಳಿಗೆ ಬಳಸುತ್ತಾರೆ ಎನ್ನಲಾಗುತ್ತಿದೆ. ಇನ್ನೂ 50ಕ್ಕಿಂತ ಕಡಿಮೆ ಇರೋ ನೀರನ್ನ ಕುಡಿಯೋದರಿಂದ ಕೆಮ್ಮು, ನೆಗಡಿ, ಅಸಿಡಿಟಿ, ಬೋನ್ಸ್ ವೀಕ್, ವೀಪರೀತ ತಲೆನೋವು, ಜ್ವರ, ಸುಸ್ತು, ನಿಶಕ್ತಿ, ವಾಂತಿಯಾಗುತ್ತದೆ. ಹೀಗೆ ಈ ನೀರನ್ನ ಕುಡಿಯೋದ್ರಿಂದ ಅನೇಕ ರೋಗಗಳಿಗೆ ನಾವೇ ಆಹ್ವಾನ ನೀಡಿದಂತಾಗುತ್ತದೆ.
ಟಿಡಿಎಸ್ ಎಂದರೇನು?
ಕುಡಿಯುವ ನೀರಿನ ಗುಣಮಟ್ಟವನ್ನ ಅಳತೆ ಮಾಡಲು ಟಿಡಿಎಸ್(ಟೋಟಲ್ ಡಿಸ್ಲಾಡ್ ಸಾಲಿಡ್) ಉಪಕರಣವನ್ನ ಬಳಕೆ ಮಾಡಲಾಗುತ್ತದೆ. ನಾವು ಕುಡಿಯುವ ನೀರಿನ ಗುಣಮಟ್ಟದಲ್ಲಿ ಟಿಡಿಎಸ್ ಪ್ರಮಾಣ ಕನಿಷ್ಠ 50 ಗರಿಷ್ಠ 100 ಇರಬೇಕು. ಈ ಪ್ರಮಾಣ ಟಿಡಿಎಸ್ ಇರುವ ನೀರು ಕುಡಿಯಲು ಯೋಗ್ಯವಾದ ನೀರಾಗಿದೆ.
ಸರಿಯಾದ ನಿರ್ವಹಣೆಯಾಗ್ತಿಲ್ಲ:
ಬಿಬಿಎಂಪಿ ಅವರು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ, ಕೇವಲ 500 ರೂ. ನಲ್ಲಿ ಟಿಡಿಎಸ್ ಪ್ರಮಾಣವನ್ನ ಸರಿಯಾಗಿ ಮಾಡುವ ಶುದ್ಧೀಕರಣ ಉಪಕರಣವನ್ನ ಆಳವಡಿಸಬಹುದು. ಆದರೆ ಬಿಬಿಎಂಪಿಯವರು ಆ ಕೆಲಸ ಮಾಡುತ್ತಿಲ್ಲ. ಟಿಡಿಎಸ್ ಪ್ರಮಾಣ 10 ಕ್ಕಿಂತ ಕಡಿಮೆ ಇರೋ ಆರ್‍ಓ ಪ್ಲಾಂಟ್ ಗಳು ತುಂಬಾ ಇದೆ. ತಮ್ಮ ಫೋಟೋ ಹಾಕಿಸಿಕೊಂಡು ಪ್ರಚಾರ ಪಡೆಯೋ ನಾಯಕರು ನೀರಿನ ಗುಣಮಟ್ಟವನ್ನ ಉನ್ನತಿ ಮಾಡೋ ಕೆಲಸ ಮಾಡಬೇಕು. ಕೋಟ್ಯಂತ ರೂ. ವೆಚ್ಚದಲ್ಲಿ ಶುದ್ಧ ನೀರಿನ ಘಟಕಗಳನ್ನ ತೆರೆಯಲಾಗಿದೆ. ಆದರೆ ಸರಿಯಾದ ನಿರ್ವಹಣೆ ಆಗುತ್ತಿಲ್ಲ ಎಂದು ವಾಟರ್ ಎಕ್ಸ್ ಪರ್ಟ್ ಲೋಕೇಶ್ ಹಾಗೂ ಖಾಸಗಿ ವಾಟರ್ ಪ್ಲಾಂಟ್‍ನ ಜಯರಾಜ್ ನಾಯ್ಡು ಹೇಳುತ್ತಾರೆ.
ಒಟ್ಟಿನಲ್ಲಿ ಇನ್ನು ಮುಂದಾದರೂ ಬಿಬಿಎಂಪಿಯ ನೂತನ ಮೇಯರ್ ಹಾಗೂ ಕಮಿಷನರ್ ಸೂಕ್ತ ಕ್ರಮ ಕೈಗೊಂಡು ಜನರ ಹಿತ ಕಾಪಡುತ್ತಾರಾ ಎಂಬುದನ್ನು ಕಾದು ನೋಡಬೇಕು.
https://www.youtube.com/watch?v=HGSERFF2lSI