ಬೆಂಗಳೂರು: ಪಬ್ಲಿಕ್ ಟಿವಿ ಆಯೋಜನೆ ಮಾಡಿದ್ದ ಡ್ರೀಮ್ಸ್ ಸ್ಕೂಲ್ ಎಕ್ಸ್‌ಪೋಗೆ ಇಂದು ತೆರೆಬಿದ್ದಿದೆ. ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಪೋಷಕರು ಅನೇಕ ಕನಸುಗಳನ್ನ ಕಟ್ಟಿಕೊಂಡಿರುತ್ತಾರೆ. ಆ ಕನಸನ್ನು ಹಿಡಿರಿಸೋ ದೃಷ್ಟಿಯಿಂದ ಪಬ್ಲಿಕ್ ಟಿವಿ ಈ ಎಜುಕೇಶನ್ ಎಕ್ಸ್‌ಪೋವನ್ನು ಆಯೋಜನೆ ಮಾಡಿತ್ತು.
ಪಬ್ಲಿಕ್ ಟಿವಿ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಸಾಮಾಜಿಕ ಕಳಕಳಿಯಿಂದ ಡ್ರೀಮ್ಸ್ ಸ್ಕೂಲ್ ಎಜುಕೇಶನ್ ಎಕ್ಸ್‌ಪೋ ಕಳೆದೆರೆಡು ದಿನದಿಂದ ಆಯೋಜಿಸತ್ತು. ಬೆಂಗಳೂರಿನ ವಿಜಯನಗರದ ಎಂಸಿ ಲೇಔಟ್‍ನಲ್ಲಿರೋ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಕ್ರೀಡಾಂಗಣದಲ್ಲಿ ನಡೆದ ಎಜುಕೇಶನ್ ಎಕ್ಸ್‌ಪೋ ಗೆ ಮೊದಲ ದಿನವೇ 1500 ಕ್ಕೂ ಹೆಚ್ಚು ಪೋಷಕರು ಎಕ್ಸ್‌ಪೋ ಆಗಮಿಸಿ ತಮ್ಮ ಮಕ್ಕಳಿಗೆ ಸೂಕ್ತವಾದ ಶಾಲೆಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ.
Advertisement
Advertisement
ಇಂದು ಸಹ ಎಕ್ಸ್‌ಪೋ ಗೆ ಪೋಷಕರಿಂದ ಭರ್ಜರಿ ರೆಸ್ಪಾನ್ಸ್ ಬಂದಿದೆ. ಬೆಳಗ್ಗೆಯಿಂದಲೇ ಪೋಷಕರು ತಮ್ಮ ಮಕ್ಕಳೊಂದಿಗೆ ಎಕ್ಸ್‌ಪೋ ಗೆ ಆಗಮಿಸಿ ತಮಗೆ ಬೇಕಾದ ಶಾಲೆಯ ಮಾಹಿತಿಗಳನ್ನ ಪಡೆದುಕೊಂಡರು. ಒಟ್ಟಾರೆಯಾಗಿ 5 ಸಾವಿರಕ್ಕೂ ಹೆಚ್ಚು ಪೋಷಕರು ಎಕ್ಸ್‌ಪೋಗೆ ಆಗಮಿಸಿದ್ರು. ಒಂದೇ ಸೂರಿನಡಿಯಲ್ಲಿ ಇಷ್ಟೊಂದು ಶಾಲೆಗಳನ್ನು ನೋಡಿ ಫುಲ್ ಖುಷಿಯಾಗಿದ್ರು ಕೆಲ ಪೋಷಕರು ತಮ್ಮಗೆ ಅನುಕೂಲವಾಗೋ ಶಾಲೆಗೆ ಮಕ್ಕಳನ್ನು ಇಲ್ಲೇ ಆಡ್ಮಿಷನ್ ಮಾಡಿಸೋ ನಿರ್ಧಾರವನ್ನು ಸಹ ಮಾಡಿದರು.
Advertisement
ಎಕ್ಸ್‌ಪೋನ ಕೊನೆಯ ದಿನವಾದ ಇಂದು ಮಕ್ಕಳಿಗೆ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನ ಆಯೋಜಿಸಿತ್ತು. ಹ್ಯಾಂಡ್ ರೈಟಿಂಗ್ ಎಕ್ಸ್ ಪರ್ಟ್ ಆಗಿರುವ ಡಾ. ರಫೀವುಲ್ಲ ಬೇಗ್ ಅವರು ಮೆಮೊರಿ ಅಂಡ್ ಹ್ಯಾಂಡ್ ರೈಟಿಂಗ್ ಬಗ್ಗೆ ಉಪನ್ಯಾಸ ಮಾಡಿದರು. ಜೊತೆಗ ಮಕ್ಕಳಲ್ಲಿ ಮೆಮೊರಿ ಪವರ್ ಹೇಗೆ ಹೆಚ್ಚಿಸಬೇಕು ಅನ್ನೋದನ್ನ ಪ್ರದರ್ಶನ ಮಾಡಿದರು.
Advertisement
ಮಕ್ಕಳ ಮೇಲೆ ಪೋಷಕರು ಒತ್ತಡ ಹಾಕುವ ಬದಲು ಮಕ್ಕಳಿಗೆ ಸುಲಭವಾಗಿ ಮೆಮೊರಿ ಪವರ್ ಹೇಗೆ ಹೆಚ್ವಿಸಿಕೊಳ್ಳೊದು ಅನ್ನೋದನ್ನು ತಿಳಿಸಿಕೊಟ್ಟರು. ಜೊತೆಗೆ ಮಕ್ಕಳಿಗಾಗಿ ಡ್ರಾಯಿಂಗ್ ಅಂಡ್ ಕ್ವೀಜ್ ಕಾಂಪಿಟೇಷನ್ ಕೂಡ ನಡೆಯಿತು. ನೂರಾರು ಮಕ್ಕಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದರು. ಡ್ರಾಯಿಂಗ್ ಅಂಡ್ ಕ್ವೀಜ್ ನಲ್ಲಿ ವೀಜೆತರಾದ ಮಕ್ಕಳಿಗೆ ರೇವಾ ಯುನಿವರ್ಸಿಟಿ ವತಿಯಿಂದ ನಗದು ಬಹುಮಾನದ ಜೊತೆಗೆ ಗಿಫ್ಟ್ ಕೂಡ ನೀಡಲಾಯಿತು.
ಎರಡು ದಿನ ನಡೆದ ಎಕ್ಸ್‌ಪೋ ಗೆ ಪೋಷಕರ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಅಭೂತ ಪೂರ್ವ ಯಶಸ್ಸು ಗಳಿಸುವಂತೆ ಮಾಡಿದ್ದಾರೆ. ಎಕ್ಸ್‌ಪೋ ನಲ್ಲಿ ಭಾಗಿಯಾಗಿದ್ದ ಶಿಕ್ಷಣ ಸಂಸ್ಥೆಗಳಿಗೆ ಹಾಗೂ ಎಕ್ಸ್‌ಪೋ ಕಾರಣಕರ್ತರಾದ ವ್ಯಕ್ತಿಗಳಿಗೆ ಪಬ್ಲಿಕ್ ಟಿವಿಯ ಸಿಇಓ ಅರುಣ್ ಕುಮಾರ್ ಮತ್ತು ಸಿಓಓ ಸಿ.ಕೆ.ಹರೀಶ್ ಕುಮಾರ್ ನೆನಪಿನ ಕಾಣಿಕೆ ನೀಡಿ ಗೌರವ ಅರ್ಪಿಸಿದರು.
ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಬೆಸ್ಟ್ ಎಜುಕೇಶನ್ ಕೊಡಬೇಕು ಎಂದು ಕನಸು ಕಾಣುತ್ತಾರೆ. ಆ ಕನಸನ್ನ ನನಸು ಮಾಡೋ ನಿಟ್ಟಿನಲ್ಲಿ ನಿಮ್ಮ ಪಬ್ಲಿಕ್ ಟಿವಿ ಸಣ್ಣ ಪ್ರಯತ್ನವನ್ನ ಮಾಡಿದೆ. ಡ್ರೀಮ್ಸ್ ಎಕ್ಸ್‌ಪೋ ಯಶಸ್ವಿಯಾಗಲು ಕಾರಣರಾದ 20ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಮತ್ತು ಪೋಷಕರಿಗೆ ಪಬ್ಲಿಕ್ ಟಿವಿ ಈ ಮೂಲಕ ಕೃತಜ್ಞತೆ ಸಲ್ಲಿಸುತ್ತದೆ.