Bengaluru City
ಬೆಂಗಳೂರು ಡಾನ್ ಹತ್ಯೆಗೆ ಸುಪಾರಿ?

ಬೆಂಗಳೂರು: ಸಿಲಿಕಾನ್ ಸಿಟಿಯ ಡಾನ್ ತೌಸಿಫ್ ಹತ್ಯೆ ಮಾಡಲು ಮುಂಬೈ ಶಾರ್ಪ್ ಶೂಟರ್ಸ್ ಕಣ್ಣು ಹಾಕಿದ್ದಾರೆ.
ತೌಸಿಫ್ ಹತ್ಯೆಗೆ ಭೂಗತ ಜಗತ್ತಿನ ದೊರೆ ರಶೀದ್ ಮಲಬಾರಿ ಸುಪಾರಿ ಕೊಟ್ಟಿದ್ದಾನೆ. ಜೈಲಲ್ಲಿದ್ದಾಗ ರಶೀದ್ ಮಲಬಾರಿ ಮತ್ತು ತೌಸಿಫ್ ನಡುವೆ ವಾಗ್ವಾದ ನಡೆದಿತ್ತು. ಏನು ಬೆಂಗಳೂರು ಡಾನ್ ಆಗಲು ಹೊರಟಿದ್ಯಾ ಅಂತ ತೌಸಿಫ್‍ಗೆ ಮಲಬಾರಿ ಗದರಿದ್ದನು. ಈ ವೇಳೆ ತೌಸಿಫ್, ನನಗೆ ತಾಕತ್ ಇದೆ. ಡಾನ್ ಆಗಿಯೇ ಆಗ್ತೀನಿ, ನೀನ್ಯಾರು ಎಂದಿದ್ದನಂತೆ. ಈ ನಡುವೆ ಎದುರಾಳಿಗಳನ್ನ ಮುಗಿಸಿ ಮುಸ್ಲಿಂ ಡಾನ್ ಆಗಲು ತೌಸಿಫ್ ಹೊರಟಿದ್ದನು ಎನ್ನಲಾಗಿದೆ.
ಇದಕ್ಕಾಗಿ ರೌಡಿ ಡೈನಾಮಿಕ್ ಖಲೀಲ್‍ನನ್ನ ಮುಗಿಸಲು ತೌಸಿಫ್ ಪ್ಲಾನ್ ಮಾಡಿದ್ದನು. ಇತ್ತ ರಶೀದ್ ಮಲಬಾರ್ ಕಡೆಯ ಶಾರ್ಪ್ ಶೂಟರ್‍ಗಳು ತೌಸಿಫ್ ಹತ್ಯೆಗೆ ಪ್ಲಾನ್ ಮಾಡುತ್ತಿದ್ದರು. ಇದೀಗ ಈ ಬಗ್ಗೆ ಪಕ್ಕಾ ಮಾಹಿತಿಯ ಮೇಲೆ ತೌಸಿಫ್ ಹಾಗೂ ಸಹಚರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಸಿಲಿಕಾನ್ ಸಿಟಿಯಲ್ಲಿ ನಡೆಯಬಹುದಾದ ಬಹುದೊಡ್ಡ ಅವಘಡವನ್ನು ಸಿಸಿಬಿ ಪೊಲೀಸರು ತಪ್ಪಿಸಿದಂತಾಗಿದೆ.
