ಬೆಂಗಳೂರು: ಡಿಸೆಂಬರ್ 12 ರಂದು ಕಳವು ಆಗಿದ್ದ 8 ಕೋಟಿ ಮೌಲ್ಯದ ಶ್ವಾನ ಕೊನೆಗೂ ಮಾಲೀಕ ಮನೆ ಸೇರಿದೆ.
ಚೀನಾ ದೇಶದ ಅಲಕ್ಕನ್ ಮಾಲಾಮೂಟ್ ತಳಿಯ ಶ್ವಾನ ಡಿಸೆಂಬರ್ 12 ರಂದು ಶ್ರೀನಗರದ ಮನೆಯಲ್ಲಿ ಕಟ್ಟಿ ಹಾಕಿದ್ದಾಗ ಯಾರೋ ಕದ್ದುಕೊಂಡು ಹೋಗಿದ್ದಾರೆ. ಕಳ್ಳನನ್ನು ಹುಡುಕಿ ನಾಯಿಯನ್ನು ವಾಪಸ್ ತಂದು ಕೊಟ್ಟರೆ ಒಂದು ಲಕ್ಷ ಬಹುಮಾನ ನೀಡುವುದಾಗಿ ನಾಯಿ ಮಾಲೀಕ ಸತೀಶ್ ಹೇಳಿದ್ದರು. ಇದರ ಜೊತೆಗೆ ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ದೂರು ಕೂಡ ನೀಡಿದ್ದರು.
Advertisement
Advertisement
ಈಗ ಈ ದುಬಾರಿ ಶ್ವಾನ ಮರಳಿ ಮಾಲೀಕರಿಗೆ ಸಿಕ್ಕಿದ್ದು, ನಾಯಿ ಕದ್ದವರೇ ಭಾನುವಾರ ಸಂಜೆ ಮನೆಯ ಬಳಿ ಬಿಟ್ಟು ಹೋಗಿದ್ದಾರೆ ಎಂದು ಮಾಲೀಕ ಸತೀಶ್ ಅವರು ಹೇಳಿದ್ದಾರೆ. ಯಾರೋ ಪರಿಚಯಸ್ಥರೇ ನಾಯಿಯನ್ನು ಕದ್ದುಕೊಂಡು ಹೋಗಿ ಅದು ದೊಡ್ಡಮಟ್ಟದಲ್ಲಿ ಸುದ್ದಿಯಾಗಿ ವಾಪಸ್ ತಂದು ಬಿಟ್ಟು ಹೋಗಿದ್ದಾರೆ ಎಂದು ಸತೀಶ್ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಪರಿಚಿತನಾಗಿದ್ದ ಆಟೋಚಾಲಕನೇ ಕದ್ದೊಯ್ದು ವಾಪಸ್ ಬಿಟ್ಟು ಹೋಗಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ.
Advertisement
ಈ ನಾಯಿ ಅಲಕ್ಸನ್ ಮ್ಯಾಲಮ್ಯೂಟ್ ಎಂಬ ಜಾತಿಗೆ ಸೇರಿದ್ದಾಗಿದೆ. ಕೆಂಪು ಮತ್ತು ಬಿಳಿ ಬಣ್ಣವನ್ನು ಶ್ವಾನ ಹೊಂದಿದೆ. ಇದರ ವಯಸ್ಸು 3 ವರ್ಷವಾಗಿದ್ದು, ಹಸ್ಕಿ ನಾಯಿಯನ್ನು ಹೋಲುತ್ತದೆ. 8 ಕೋಟಿ ರೂಪಾಯಿ ಬೆಲೆ ಬಾಳುತ್ತಿದ್ದು, ಈ ನಾಯಿಯನ್ನ ಹುಡುಕಿ ಕೊಟ್ಟವರಿಗೆ 1 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಸತೀಶ್ ಘೋಷಿಸಿದ್ದರು.