ಬೆಂಗಳೂರು: ಪಾಕಿಸ್ತಾನದ ಮಗುವಿಗೆ (Baby) ಬೆಂಗಳೂರಿನ (Bengaluru) ನಾರಾಯಣ ಹೆಲ್ತ್ ಸಿಟಿ ವೈದ್ಯರು (Doctor) ಮರುಜೀವವನ್ನು ನೀಡುವ ಮೂಲಕ ಆತಂಕದಲ್ಲಿದ್ದ ತಾಯಿಯ ನೋವಿಗೆ ಮುಲಾಮು ಹಚ್ಚುವ ಕೆಲಸ ಮಾಡಿದ್ದಾರೆ.
ಪಾಕಿಸ್ತಾನದ (Pakistan) ಮಗು ಅಮೈರಾ(2)ಗೆ ಎಂಪಿಎಸ್ ಎನ್ನುವ ವಿಚಿತ್ರ ಕಾಯಿಲೆ ಕಾಡಿತ್ತು. ಕಣ್ಣು ಮೆದುಳು ಅಂಗಗಳ ಕಾರ್ಯನಿರ್ವಹಣೆಯ ಮೇಲೆ ಇದ್ರಿಂದ ಪರಿಣಾಮ ಬೀರುತ್ತಿದೆ. ಅಮೈರಾ ತಂದೆ, ತಾಯಿ ಪಾಕಿಸ್ತಾನ ಸೇರಿದಂತೆ ಭಾರತದ ಬೇರೆ ಭಾಗದ ಆಸ್ಪತ್ರೆ ಸಂಪರ್ಕಿಸಿದ್ದಾರೆ. ಆದರೆ, ಮಗುವಿನ ಜೀವಕ್ಕೆ ಎಲ್ಲೂ ಗ್ಯಾರಂಟಿ ಕೊಟ್ಟಿಲ್ಲ. ಕೊನೆಗೆ ಬೆಂಗಳೂರು ನಾರಾಯಣ ಹೆಲ್ತ್ ಸಿಟಿಯಲ್ಲಿ ಅಮೈರಾಗೆ ಆಕೆಯ ತಂದೆಯಿಂದ ಮೂಳೆ ಮಜ್ಜೆ ಕಸಿಯ ಮೂಲಕ ಟ್ರೀಟ್‍ಮೆಂಟ್ ಕೊಡಲಾಗಿದ್ದು, ಅಮೈರಾ ಚೇತರಿಸಿಕೊಂಡಿದ್ದಾಳೆ. ತನ್ನ ಮಗಳ ಬದುಕಿಗೆ ಹೊಸ ಜೀವ ಕೊಟ್ಟ ವೈದ್ಯರಿಗೆ ಅಮೈರಾ ತಾಯಿ ಧನ್ಯವಾದ ಹೇಳಿದರು. ಇದನ್ನೂ ಓದಿ: ವಾಹನ ಸವಾರರೇ ಎಚ್ಚರ – ಸೀಟ್ ಬೆಲ್ಟ್ ಧರಿಸದಿದ್ರೆ ಇನ್ಮುಂದೆ ದುಪ್ಪಟ್ಟು ದಂಡ
Advertisement
Advertisement
ವೈದ್ಯರು ಕೂಡ ಅಮೈರಾ ಚೇತರಿಕೆಯ ಬಗ್ಗೆ ಖುಷಿಯಾಗಿದ್ದಾರೆ. ಈ ಬಗ್ಗೆ ಡಾ. ದೇವಿಶೆಟ್ಟಿ ಮಾತನಾಡಿ, ಪಾಕಿಸ್ತಾನದ ಅನೇಕ ರೋಗಿಗಳು ಉತ್ತಮ ಚಿಕಿತ್ಸೆಗಾಗಿ ಭಾರತಕ್ಕೆ ಅದ್ರಲ್ಲೂ ಬೆಂಗಳೂರಿಗೆ ಬರುತ್ತಿದ್ದಾರೆ ಎಂದ ಅವರು, ಪಾಕಿಸ್ತಾನದಲ್ಲಿ ಕೆಲ ವೈದ್ಯರು ಭಾರತದಲ್ಲಿ ನುರಿತ ವೈದ್ಯರಿಂದ ಟ್ರೈನಿಂಗ್ ಕೂಡ ಪಡೆದುಕೊಳ್ಳುತ್ತಿದ್ದಾರೆ. ಹೆಚ್ಚು ವೈದ್ಯರು ತೊಡಗಿಕೊಂಡು ನಾವು ಪಾಕಿಸ್ತಾನದ ವೈದ್ಯರಿಗೆ ಟ್ರೈನಿಂಗ್ ನೀಡಲು ಸಿದ್ಧ ಎಂದು ಹೇಳಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಭಾರೀ ಮಳೆ – ಎಲ್ಲೆಲ್ಲಿ ಏನಾಗಿದೆ? ಅತಿ ಹೆಚ್ಚು ಮಳೆ ಎಲ್ಲಿಯಾಗಿದೆ?