ಬೆಂಗಳೂರು: ಡಾ. ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ನಿಗಮ (ಲಿಡ್ಕರ್) ಕುಶಲಕರ್ಮಿಗಳು ತಯಾರಿಸಿದ ಕರಕುಶಲ ಉತ್ಪನ್ನಗಳು ಮತ್ತು ಅಪ್ಪಟ ಚರ್ಮದಿಂದ ತಯಾರಿಸಿದ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳವು ಮಾರ್ಚ್ 30 ರವರೆಗೆ ವಸಂತ ನಗರದ ಲಿಡ್ಕರ್ ಭವನದಲ್ಲಿ ನಡೆಯಲಿದ್ದು, ಶೇ. 50 ರವರೆಗೆ ರಿಯಾಯಿತಿ ದರದಲ್ಲಿ ಮಾರಾಟವಾಗುತ್ತಿವೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಮೇಳದಲ್ಲಿ ಭಾಗವಹಿಸಿ, ಉತ್ಪನ್ನಗಳನ್ನು ಖರೀದಿಸಿ ಕರಕುಶಲಕರ್ಮಿಗಳಿಗೆ ಪ್ರೋತ್ಸಾಹ ನೀಡುವಂತೆ ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಅವರು ಮನವಿ ಮಾಡಿದರು.
Advertisement
ಈ ಪ್ರದರ್ಶನ ಮೇಳಕ್ಕೆ ಇಂದು ಉಪಮುಖ್ಯಮಂತ್ರಿ ಭೇಟಿ ನೀಡಿ, ವಿವಿಧ ಮಾದರಿಯ ಉತ್ಪನ್ನಗಳನ್ನು ವೀಕ್ಷಿಸಿ, ಕರಕುಶಲ ಕರ್ಮಿಗಳೊಂದಿಗೆ ಸಂವಾದ ನಡೆಸಿದರು. ವಸ್ತು ಪ್ರದರ್ಶನದಲ್ಲಿ ಬೆಳಗಾವಿ, ಮೈಸೂರು, ಬೆಂಗಳೂರು, ಗದಗ ಮತ್ತು ರಾಜ್ಯದ ಇತರೆ ಜಿಲ್ಲೆಗಳಿಂದ ಕುಶಲಕರ್ಮಿಗಳು ತಯಾರು ಮಾಡಿರುವ ಫೂಟ್ ವೇರ್ ಶೇ.20 ರಿಂದ 50 ರವರೆಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.
Advertisement
ನಿಗಮವು ಪ್ರತಿನಿತ್ಯ ಒಂದು ಲಕ್ಷ ರೂ. ವಹಿವಾಟು ಮಾಡುತ್ತಿದೆ. ಕಳೆದ ಒಂದು ವಾರದಿಂದ ಈವರೆಗೆ 8.5 ಲಕ್ಷ ರೂ. ಮೌಲ್ಯದ ಉತ್ಪನ್ನಗಳನ್ನು ಗ್ರಾಹಕರು ಖರೀದಿಸಿ ಉತ್ತೇಜನ ನೀಡಿದ್ದಾರೆ. ಅದರಲ್ಲಿ ಕೊಲ್ಹಾಪುರಿ ಪಾದರಕ್ಷೆಗಳು ಹಾಗೂ ಚರ್ಮದ ಶೂಗಳು ತ್ವರಿತಗತಿಯಲ್ಲಿ ಮಾರಾಟವಾಗುತ್ತಿವೆ.
Advertisement
Advertisement
ನಿಗವು ರಾಜ್ಯದಲ್ಲಿ ಚರ್ಮೋದ್ಯಮ ಬೆಳವಣಿಗೆಗೆ ಪರಿಶಿಷ್ಠ ಜಾತಿಯ ಚರ್ಮ ಕುಶಲಕರ್ಮಿಗಳ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಲು ಕಾರ್ಯನಿರ್ವಹಿಸುತ್ತಿದ್ದು, ಚರ್ಮ ಕುಶಲಕರ್ಮಿಗಳ ಶ್ರೇಯೋಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಅನುಷ್ಠಾ ನಗೊಳಿಸುತ್ತಿದೆ ಎಂದು ಅವರು ತಿಳಿಸಿದರು.
ಪಾದರಕ್ಷೆಗಳು, ಲೆದರ್ ಗೂಡ್ಸ್, ಲೆದರ್ ಜಾಕೆಟ್ಸ್, ಮತ್ತಿತರ ಉತ್ಪನ್ನಗಳು ಉತ್ಕೃಷ್ಟ ಗುಣಮಟ್ಟದಿಂದ ಕೂಡಿವೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮಧುಬಾವಿ ಗ್ರಾಮದ ಕುಶಲಕರ್ಮಿಯಾದ ಸಂಜಯ್ ಭರತ ಅದಾಟೆ ಅವರು ತಯಾರಿಸಿದ 5 ಅಡಿ ಎತ್ತರದ ಜಿಐ ಟ್ಯಾಗ್ ಹೊಂದಿರುವ ಕೊಲ್ಹಾಪುರಿ ಪಾದರಕ್ಷೆಗಳನ್ನು ವೀಕ್ಷಿಸಿ, ಮೆಚ್ಚುಗೆ ಶ್ಲಾಘಿಸಿದರು. ಗದಗ್ ಕಾಪ್ಸಿ ಚಪ್ಪಲಿಗಳನ್ನು ಉಪಮುಖ್ಯಮಂತ್ರಿಗಳು ಖರೀದಿಸುವ ಮೂಲಕ ಸಂದರ್ಭದಲ್ಲಿ ನಿಗಮವ ವ್ಯವಸ್ಥಾಪಕ ನಿರ್ದೇಶಕ ನಟರಾಜ್ ಮತ್ತಿತರರು ಉಪಸ್ಥಿತರಿದ್ದರು.