ರಾಮನಗರ: ರಾಜಕೀಯ ಪಕ್ಷಗಳ (Political Party) ನಾಯಕರಿಗೆ ತಮ್ಮ ಹುಟ್ಟುಹಬ್ಬಗಳನ್ನು ವೈಭವವಾಗಿ ಆಚರಿಸಿಕೊಳ್ಳುವುದು ಪ್ರತಿಷ್ಠೆಯ ಸಂಕೇತವಾಗಿದೆ.
ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ ಶಿವಕುಮಾರ್ (Dk Shivakumar) ಅವರ ತವರು ಜಿಲ್ಲೆ ರಾಮನಗರ (Ramanagar) ನಗರಸಭೆಯ 19ನೇ ವಾರ್ಡ್ ಸದಸ್ಯ ದೌಲತ್ ಷರೀಫ್ ತಮ್ಮ ಬರ್ತ್‌ಡೇ ಆಚರಣೆಗೆ ಬೆಂಗಳೂರಿನಿಂದ ಡ್ಯಾನ್ಸರ್‌ಗಳನ್ನು ಕರೆಸಿ ಅವರು ಅರೆಬೆತ್ತಲೆಯಾಗಿ ಕುಣಿಯುವಾಗ (Hot Dance) ನೋಟುಗಳ ಸುರಿಮಳೆ ಸುರಿಸಿದ್ದಾರೆ. ಇದನ್ನೂ ಓದಿ: ದೇಶದಲ್ಲೇ ಅಪಖ್ಯಾತಿ ಹೊಂದಿದ್ದ ನಿಮ್ಮಿಂದ ಪಾಠ ಕಲಿಯಬೇಕಿಲ್ಲ – ಅಮಿತ್ ಶಾ ವಿರುದ್ಧ ಓವೈಸಿ ಕಿಡಿ
ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಯಾರಬ್ ನಗರದಲ್ಲಿರುವ ಕಲ್ಯಾಣ ಮಂಟಪದಲ್ಲಿ ಹುಚ್ಚೆದ್ದು ಕುಣಿದಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಕಾಂಗ್ರೆಸ್ ನಗರಸಭೆ ಸದಸ್ಯರ ವರ್ತನೆಗೆ ಆಕ್ಷೇಪ ವ್ಯಕ್ತವಾಗಿದೆ. ಇದನ್ನೂ ಓದಿ: ಪ್ರತಿದಿನ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳೋದು ನಮ್ಮ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ?