ಸೈಬರ್ ಸೆಕ್ಸ್ ಚಟ – ಬೆಂಗ್ಳೂರು ವ್ಯಕ್ತಿಯಿಂದ ಮಾಡೆಲ್‍ಗಳಿಗಾಗಿ ತಿಂಗಳಿಗೆ 80 ಸಾವಿರ ಖರ್ಚು

Public TV
2 Min Read
woman with a laptop

– ಈಗ ನಿಮ್ಹಾನ್ಸ್ನಲ್ಲಿ ಚಿಕಿತ್ಸೆ
– ಭಾರೀ ಸಂಪಾದನೆ ಇದ್ರೂ ಹಣಕ್ಕಾಗಿ ಸಾಲ

ಬೆಂಗಳೂರು: ಸೈಬರ್ ಸೆಕ್ಸ್ ಚಟಕ್ಕೆ ಬಿದ್ದ ವ್ಯಕ್ತಿಯೊಬ್ಬ ವೆಬ್‍ಕ್ಯಾಮ್ ಮಾಡೆಲ್‍ಗಳಿಗಾಗಿ ತಿಂಗಳಿಗೆ 80 ಸಾವಿರ ಖರ್ಚು ಮಾಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದಿದೆ.

ಈಗ ಈ ಪ್ರಕರಣದ ರೋಗಿಯನ್ನು ಬೆಂಗಳೂರಿನ ನಿಮ್ಹಾನ್ಸ್ನ ಸರ್ವಿಸ್ ಫಾರ್ ಹೆಲ್ತಿ ಯೂಸ್ ಆಫ್ ಟೆಕ್ನಾಲಜಿ (ಎಸ್‍ಎಚ್‍ಯುಟಿ) ಚಿಕಿತ್ಸೆ ನೀಡಲಾಗುತ್ತಿದೆ. ಮದುವೆಯಾಗದ ಈತ ಇಂಟರ್ ನೆಟ್ ಅಲ್ಲಿ ಸಿಗುವ ವೆಬ್‍ಕ್ಯಾಮ್ ಸೆಕ್ಸ್ ಮಾಡೆಲ್‍ಗಳಿಗಾಗಿ ಈತ ಟೋಕನ್ ಖರೀದಿಸಲು ಪ್ರತಿ ತಿಂಗಳು ಹಣ ಕೊಡುತ್ತಿದ್ದ. ಈ ವೆಬ್‍ಕ್ಯಾಮ್ ಮಾಡೆಲ್‍ಗಳ ಹಿಂದೆ ಬಿದ್ದಿದ್ದ ಈ ವ್ಯಕ್ತಿ ಇದರಲ್ಲೇ ಲೈಂಗಿಕ ಸುಖ ಪಡೆಯುತ್ತಾ ಸೈಬರ್ ಸೆಕ್ಸ್ ವ್ಯಸನಿಯಾಗಿದ್ದ.

60341

ಪ್ರತಿ ತಿಂಗಳು ಒಳ್ಳೆಯ ಸಂಬಳ ಬರುತ್ತಿದ್ದರೂ ಈ ವ್ಯಕ್ತಿ ದುಡ್ಡಿಗಾಗಿ ಪರದಾಡುತ್ತಿರುವುದನ್ನು ನೋಡಿದ ಕುಟುಂಬದವರಿಗೆ ಈತನ ಮೇಲೆ ಅನುಮಾನ ಬಂದಿದೆ. ಇದು ಅಲ್ಲದೇ ಈತ ವೆಬ್‍ಕ್ಯಾಮ್ ಮಾಡೆಲ್‍ಗಳಿಗೆ ಹಣ ಕೊಡಲು ಸಾಲ ಮಾಡಿದ್ದು, ಸಾಲ ಕೊಟ್ಟವರು ಮನೆ ಬಳಿ ಬಂದು ಕೇಳಿದಾಗ ಕುಟುಂಬದವರಿಗೆ ವಿಷಯ ಗೊತ್ತಾಗಿದೆ. ಆಗ ಸೈಬರ್ ಸೆಕ್ಸ್ ಚಟಕ್ಕೆ ಬಿದ್ದು, ತನ್ನ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದ ಈತನನ್ನು ಕುಟಂಬಸ್ಥರು ನಿಮ್ಹಾನ್ಸ್ ಗೆ ಸೇರಿಸಿದ್ದಾರೆ.

cyber

ಸೈಬರ್ ಸೆಕ್ಸ್ ಗೆ ವ್ಯಸನಿಯಾಗಿರುವ ಈತನ ಜೊತೆ ಇನ್ನು ಇಬ್ಬರು ಪುರುಷರಿಗೆ ಕ್ಲಿನಿಕ್‍ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ಎಂಟು ತಿಂಗಳಿನಿಂದ ಇವರು ಸೈಬರ್ ಸೆಕ್ಸ್ ಚಟಕ್ಕೆ ಚಿಕಿತ್ಸೆ ನೀಡುವಂತೆ ಕೇಳಿಕೊಂಡಿದ್ದರು. ಈ ಬಗ್ಗೆ ಮಾತನಾಡಿರುವ ಎಸ್‍ಎಚ್‍ಯುಟಿಯ ಮನೋವೈದ್ಯರು, ಈ ಮೂವರು ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚು ವೆಬ್‍ಕ್ಯಾಮ್ ಬಳಕೆ, ಸದಾ ಇಂಟರ್ ನೆಟ್‍ನಲ್ಲಿ ಸಕ್ರಿಯವಾಗಿ ಇರುವುದು ಮತ್ತು ಹೆಚ್ಚು ತಂತ್ರಜ್ಞಾನವು ಬಳಸುವುದು ಸೈಬರ್ ಸೆಕ್ಸ್ ಚಟಕ್ಕೆ ಪ್ರಮುಖ ಕಾರಣಗಳಾಗಿದೆ ಎಂದು ತಿಳಿಸಿದ್ದಾರೆ.

SBI CYBER EXPERT

ಸೈಬರ್ ಸೆಕ್ಸ್ ಎಂದರೇನು?
ಈಗಿನ ಕಾಲದಲ್ಲಿ ಇಂಟರ್ ನೆಟ್‍ನಲ್ಲಿ ಎಲ್ಲಾ ಸಿಗುತ್ತದೆ. ಹಾಗೇ ಇಂಟರ್ ನೆಟ್‍ನಲ್ಲಿ ಸೈಬರ್ ಸೆಕ್ಸ್ ಎಂಬುದು ಒಂದು ಟ್ರೆಂಡ್ ಆಗಿದೆ. ಸೈಬರ್ ಸೆಕ್ಸ್ ಎಂದರೆ ಇಂಟರ್ ನೆಟ್ ಮೂಲಕ ಮೆಸೆಜ್ ವಿಡಿಯೋ ಚಾಟ್ ಮಾಡಿಕೊಂಡು ಅಸಂಪ್ರದಾಯ ಲೈಂಗಿಕ ಕ್ರಿಯೆ ನಡೆಸುವುದು. ಇಲ್ಲಿ ಅದಕ್ಕೆ ಅದ ಕೆಲ ವೆಬ್‍ಸೈಟ್‍ಗಳು ಇರುತ್ತವೆ. ಆನ್‍ಲೈನ್ ಮೂಲಕ ಶುಲ್ಕ ಪಾವತಿಸಬೇಕಾಗುತ್ತದೆ.

ಒಂದು ಬಾರಿ ಲಾಗಿನ್ ಆದರೆ ಅಲ್ಲಿ ವೆಬ್‍ಕ್ಯಾಮ್ ಮಾಡೆಲ್‍ಗಳು ಇರುತ್ತಾರೆ. ಅವರು ವಿಡಿಯೋ ಕಾಲ್, ವಿಡಿಯೋ ಮತ್ತು ಆಡಿಯೋ ಕಾಲ್ ಮೂಲಕ ಅಶ್ಲೀಲ ದೃಶ್ಯಗಳು ಹಾಗೂ ನಗ್ನವಾಗಿ ಕಾಣಸಿಗುತ್ತಾರೆ. ನಗ್ನ ಮಾಡೆಲ್‍ಗಳನ್ನು ತಮ್ಮ ಮೊಬೈಲಿನಲ್ಲೇ ನೋಡಿ ಸುರಕ್ಷಿತವಾಲ್ಲದ ಹಾಗೂ ಅಸಂಪ್ರದಾಯಕ ಲೈಂಗಿಕ ಕ್ರಿಯೆ ನಡೆಸುವುದೇ ಈ ಸೈಬರ್ ಸೆಕ್ಸ್.

CYBER HACKER e1540642453722

ಎಸ್‍ಎಚ್‍ಯುಟಿ ಅಧಿಕಾರಿಗಳು ಹೇಳಿರುವಂತೆ ಎಂಟು ತಿಂಗಳ ಹಿಂದೆ ಕೂಡ ಈ ರೀತಿಯ ಕೇಸ್‍ವೊಂದು ದಾಖಲಾಗಿತ್ತು. 40 ವರ್ಷದ ವಿವಾಹಿತನೋರ್ವ ಮೂರು ವರ್ಷದಿಂದ ಈ ಸೈಬರ್ ಸೆಕ್ಸ್‍ಗೆ ಚಟ ಬೆಳೆಸಿಕೊಂಡಿದ್ದ. ವೆಬ್‍ಕ್ಯಾಮ್ ಮಾಡೆಲ್‍ಗಳಿಗಾಗಿ ಹಣ ಹಾಕುತ್ತಿದ್ದ. ಇದನ್ನು ಗಮನಿಸಿದ ಆತನ ಪತ್ನಿ ಆತನನ್ನು ಕರೆತಂದು ಚಿಕಿತ್ಸೆ ಕೊಡಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *