ಬೆಂಗಳೂರು: ಸಿಲಿಕಾನ್ ಸಿಟಿಗೆ ನಿಜಾಮುದ್ದೀನ್ ಕಂಟಕ ತಲೆನೋವಾಗಿದ್ದು, ಇದೀಗ ತಬಿಘಿಗಳ ಬಗ್ಗೆ ಫೀಲ್ಡ್ ವಾರಿಯರ್ಸ್ ಸತ್ಯ ಬಿಚ್ಚಿಟ್ಟಿದ್ದಾರೆ.
ಕೊರೊನಾ ವೈರಸ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಇದೀಗ ಆಶಾ ಕಾರ್ಯಕರ್ತೆಯರು ಎಲ್ಲಾ ಮನೆಗಳ ಸರ್ವೇ ಮಾಡುತ್ತಿದ್ದಾರೆ. ಈ ವೇಳೆ ಅವರು ಎದರಿಸಿದ ಸಂಕಷ್ಟಗಳನ್ನು ಪಬ್ಲಿಕ್ ಟಿವಿ ಮುಂದೆ ಹಂಚಿಕೊಂಡಿದ್ದಾರೆ.
Advertisement
Advertisement
ನಿಜಾಮುದ್ದೀನ್ ಗೆ ಹೋದವರು ನಾವು ಅವರ ಮನೆಗೆ ತೆರಳಿದಾಗ ಡೋರ್ ಲಾಕ್ ಮಾಡ್ತಾರೆ. ಈ ಮೂಲಕ ದೆಹಲಿ ಸಮಾವೇಶಕ್ಕೆ ಹೋಗಿ ಬಂದವರ ಬಗ್ಗೆ ಫೀಲ್ಡ್ ನಲ್ಲಿ ಮಾಹಿತಿ ಕಲೆ ಹಾಕೋಕೆ ಮನೆ ಮನೆಗೆ ಹೋದರೆ ಮಾಹಿತಿ ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಡೋರ್ ರಪ್ ಅಂತ ಹಾಕಿದ್ರೆ ನಾವೇನು ಮಾಡೋಕೆ ಆಗುತ್ತೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
Advertisement
Advertisement
ಇಡೀ ಏರಿಯಾಗೆ ಸೋಂಕು ಹಂಚಿಕೆಯಾಗುತ್ತಿದೆ. ಬೆಂಗಳೂರು ತೀರಾ ಡೇಂಜರ್ ನಲ್ಲಿದೆ. ನಿಜಾಮುದ್ದೀನ್ ಲೆಕ್ಕ ಸರಿಯಾಗಿ ಸಿಗ್ತಿಲ್ಲ. ಅವರು ಸಹಕಾರ ಕೊಡ್ತಿಲ್ಲ. ನಮ್ಮ ಪೇಪರ್ ಗಳನ್ನು ಹರಿದು ಹಾಕ್ತಾರೆ. ರಸ್ತೆಗೆ ಎಂಟ್ರಿ ಕೊಡೋಕೆ ಬಿಡಲ್ಲ. ನಿಮಗ್ಯಾರು ಬರೋಕೆ ಹೇಳಿದ್ದು ಅಂತಾರೆ. ಇದರಿಂದ ಸೋಂಕು ಬೇರೆಯವರಿಗೆ ಹಬ್ಬುತ್ತಿದೆ. ಯಾರು ಹೋಗಿ ಬಂದವರು ಅಂತಾನೇ ತಿಳಿಯುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕದಿಂದ ತಬ್ಲಿಘಿಗೆ ಹೋದವರು ಎಷ್ಟು? – ಸವಾಲಾಗಿದೆ ಪತ್ತೆ ಕಾರ್ಯ
ಮೌಲ್ವಿಗಳು ಬಂದರಷ್ಟೇ ಮಾಹಿತಿ..!
ಮಸೀದಿಯಲ್ಲಿ ಅನೌನ್ಸ್ ಮಾಡಿದ ಮೇಲಷ್ಟೆ ಏರಿಯಾಗೆ ತೆರಳಲು ಬಿಡುತ್ತಾರೆ. ನಾವು ಬಂದಾಗ ಏರಿಯಾಗೆ ಮನೆಗೆ ಬಿಡಲ್ಲ. ಯಾರಾದರೂ ಮೌಲ್ವಿಗಳು ಬಂದಾಗ ಅವರು ಜನರಿಗೆ ಹೇಳಿದ ಮೇಲೆ ನಮ್ಮನ್ನು ಬಿಡುತ್ತಾರೆ. ಆಯಾಯ ಮಸೀದಿಯಲ್ಲಿ ಅನೌನ್ಸ್ ಮಾಡಬೇಕು. ಇಲ್ಲದೇ ಇದ್ದರೆ ನಮಗೆ ಎಂಟ್ರಿ ಇಲ್ಲ. ನಮಗೆ ಸಹಕಾರ ಕೊಡದೇ ಇರೋದ್ರಿಂದ ಬೆಂಗಳೂರಿನ ಅಸಲಿ ಕೊರೊನಾ ಲೆಕ್ಕವೇ ಸಿಗ್ತಿಲ್ಲ ಎಂದು ಕಹಿ ಸತ್ಯ ಬಿಚ್ಚಿಟ್ಟಿದ್ದಾರೆ.