ಬೆಂಗಳೂರು: ಅಂಜನಿಪುತ್ರ ಚಿತ್ರ ಪ್ರದರ್ಶನ ಸ್ಥಗಿತಗೊಳಿಸುವಂತೆ ಸಿಟಿ ಸಿವಿಲ್ ಕೋರ್ಟ್ ಆದೇಶ ಹೊರಡಿಸಿದೆ. ಈ ಆದೇಶ ಪಾಲನೆಗಾಗಿ ಡಿಜಿ ಐಜಿಪಿಗೆ ನೋಟಿಸ್ ಜಾರಿ ಮಾಡಿದೆ.
ಚಿತ್ರದಲ್ಲಿ ವಕೀಲ ವೃತ್ತಿಗೆ ಅಪಮಾನ ಮಾಡಲಾಗಿದೆ ಎಂಬ ಕಾರಣಕ್ಕೆ ಜ.2ರವರೆಗೂ ಈ ಚಿತ್ರದ ಪ್ರದರ್ಶನಕ್ಕೆ ನ್ಯಾಯಾಲಯ ತಡೆ ನೀಡಿತ್ತು. ಆದರೆ ಚಿತ್ರ ತಂಡ ಕೋರ್ಟ್ ಆದೇಶವನ್ನು ಧಿಕ್ಕರಿಸಿ ಸಿನಿಮಾದಲ್ಲಿ ಪ್ರದರ್ಶನ ಮುಂದುವರಿಸಿತ್ತು. ಅಷ್ಟೇ ಅಲ್ಲದೇ ವಿವಾದಾತ್ಮಕ ಡೈಲಾಗ್‍ನ್ನು ಸಹ ಚಿತ್ರದಿಂದ ತೆಗೆಯದೆ ಪ್ರದರ್ಶನ ಮಾಡಿತ್ತು. ಇದನ್ನೂ ಓದಿ: ಅಂಜನಿಪುತ್ರ ಚಿತ್ರಕ್ಕೆ ತಡೆಯಾಜ್ಞೆ- ನಿರ್ಮಾಪಕ, ವಿತರಕ ಜಾಕ್ ಮಂಜು ಪ್ರತಿಕ್ರಿಯೆ
Advertisement
Advertisement
ಚಿತ್ರ ತಂಡ ಆದೇಶವನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ವಕೀಲ ನಾರಾಯಣಸ್ವಾಮಿ ಅವರು ಮತ್ತೆ ಕೋರ್ಟ್‍ಗೆ ಮೊರೆ ಹೋಗಿ ನ್ಯಾಯಾಂಗ ನಿಂದನೆಯ ಅರ್ಜಿ ದಾಖಲಿಸಿದ್ರು. ಗುರುವಾರ ಈ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಕೂಡಲೇ ಚಿತ್ರ ಪ್ರದರ್ಶನವನ್ನು ಸ್ಥಗಿತಗೊಳಿಸುವಂತೆ ಆದೇಶ ನೀಡಿದೆ. ಇದನ್ನೂ ಓದಿ: ಅಂಜನಿಪುತ್ರದ ವಿರುದ್ಧ ನಾನು ದೂರು ನೀಡಿದ್ದು ಯಾಕೆ? ವಕೀಲ ನಾರಾಯಣಸ್ವಾಮಿ ಆರೋಪಿಸಿದ್ದು ಹೀಗೆ
Advertisement
ಇಂದಿನ ಕಲಾಪದಲ್ಲಿ ಚಿತ್ರತಂಡ ಇದುವರೆಗೂ ಕೋರ್ಟ್ ಆದೇಶವನ್ನು ಪಾಲಿಸಿಲ್ಲ. ಅಲ್ಲದೇ ವಿವಾದಾತ್ಮಕ ಹೇಳಿಕೆಯನ್ನು ಸಹ ತೆಗೆದಿಲ್ಲ ಹಾಗಾಗಿ ಇದು ನ್ಯಾಯಾಂಗ ನಿಂದನೆಯಾಗುತ್ತೆ ಎಂದು ವಾದ ಮಾಡಿದರು. ಇದನ್ನೂ ಓದಿ: ‘ಅಂಜನಿಪುತ್ರ’ ತಡೆಯಾಜ್ಞೆಗೆ ಪವರ್ ಸ್ಟಾರ್ ಪ್ರತಿಕ್ರಿಯಿಸಿದ್ದು ಹೀಗೆ
Advertisement
ಏನಿದು ಪ್ರಕರಣ?
“ನೀನು ಗಂಟೆ ಅಲ್ಲಾಡಿಸೋ ಹಾಗಿದ್ರೆ, ಕೋರ್ಟ್ ನಲ್ಲಿ ಅಲ್ಲಾಡ್ಸು. ಇಲ್ಲಿ ಅಲ್ಲಾಡಿಸಿದ್ರೆ ಕಟ್ ಮಾಡಿ ಬಿಡ್ತೀನಿ” ಎಂದು ರವಿ ಶಂಕರ್ ಇನ್ಸ್ ಪೆಕ್ಟರ್ ಆಗಿ ವಕೀಲರಿಗೆ ಹೇಳುವ ದೃಶ್ಯ ಸಿನಿಮಾದಲ್ಲಿದೆ. ಈ ಸಂಭಾಷಣೆಯಿಂದ ವಕೀಲರಿಗೆ ಅವಮಾನವಾಗಿದೆ. ಹೀಗಾಗಿ ಒಂದೋ ಅಂಜನಿಪುತ್ರ ಸಿನಿಮಾ ಪ್ರದರ್ಶನ ರದ್ದು ಮಾಡಿ, ಇಲ್ಲವೇ ವಕೀಲರ ಬಗೆಗಿನ ಅವಹೇಳನಕಾರಿ ಮಾತನ್ನು ತೆಗೆಯುವಂತೆ ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದರು. ವಿಚಾರಣೆ ವೇಳೆ ಕೋರ್ಟ್ ಜ. 2ರವರೆಗೆ ಚಿತ್ರಪ್ರದರ್ಶನ ಮಾಡದಂತೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಕೋರ್ಟ್ ಆದೇಶವಿದ್ದರೂ ಅಂಜನಿಪುತ್ರ ಸಿನಿಮಾ ಮಂದಿರಗಳಲ್ಲಿ ಪ್ರದರ್ಶನವಾಗುತ್ತಿರುವ ಹಿನ್ನೆಲೆಯಲ್ಲಿ ವಕೀಲ ಜಿ. ನಾರಾಯಣ ಸ್ವಾಮಿ ಸೇರಿದಂತೆ ಐವರು ವಕೀಲರು ನಿರ್ಮಾಪಕ, ನಿರ್ದೇಶಕರ ವಿರುದ್ಧ ನ್ಯಾಯಾಂಗ ನಿಂದನೆ ದೂರನ್ನು ನೀಡಿದ್ದರು. ಬುಧವಾರ ಈ ಅರ್ಜಿಯನ್ನು ನ್ಯಾ.ಐ.ಎಫ್. ಬಿದರಿ ಅವರಿದ್ದ ಪೀಠ ಮಾನ್ಯ ಮಾಡಿತ್ತು.