ಪ್ರತಿಭಟನೆ ಮಾಡಬೇಡಿ ಎಂದು ಬೇಡಿಕೊಂಡರು ಮಾಡುತ್ತಿದ್ದಾರೆ: ನಾಜಿಮ್ ಖಾನ್

Public TV
2 Min Read
Nazim Khan

ಬೆಂಗಳೂರು: ನಮ್ಮ ಬೆಂಬಲಿಗರಿಗೆ ನಾನು ಪ್ರತಿಭಟನೆ ಮಾಡಬೇಡಿ ಎಂದರು ಮಾಡುತ್ತಿದ್ದಾರೆ ಎಂದು ಕಾರ್ಪೋರೇಟರ್ ನಾಜಿಮ್ ಖಾನ್ ಹೇಳಿದ್ದಾರೆ.

ಇಂದು ಅವರು ಮಹಿಳಾ ಬೆಂಬಲಿಗರು ನಾಜಿಮ್ ಖಾನ್ ಮೇಲೆ ಆದ ಹಲ್ಲೆಯನ್ನು ಖಂಡಿಸಿ ಕೊರೊನಾ ಹಾಟ್‍ಸ್ಪಾಟ್ ಆದ ಟಿಪ್ಪು ನಗರದಲ್ಲೇ ಪ್ರತಿಭಟನೆ ಮಾಡುತ್ತಿದ್ದಾರೆ. ಈ ವಿಚಾರವಾಗಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ನಾಜಿಮ್ ಖಾನ್, ನಾನು ಪ್ರತಿಭಟನೆ ಮಾಡಬೇಡಿ ಎಂದು ಬೇಡಿಕೊಂಡರು ನಮ್ಮ ಬೆಂಬಲಿಗರು ಕೇಳದೆ ಎಂಎಲ್‍ಎ ಬರುವವರೆಗೂ ಪ್ರತಿಭಟನೆ ಮಾಡುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ ಎಂದು ತಿಳಿಸಿದರು.

Nazim Khan 4

ಇದೇ ವೇಳೆ ಪೊಲೀಸರು ಸುಖಾಸುಮ್ಮನೆ ನನ್ನ ಅಡ್ಡಗಟ್ಟಿ ನನ್ನ ಮೇಲೆ ದೌರ್ಜನ್ಯ ಮಾಡಿದ್ದಾರೆ. ನಾನು ಕಾರ್ಪೋರೇಟರ್ ಎಂದು ಹೇಳಿದರು ಕೇಳದೆ, ನನ್ನ ಐಡಿ ಕಾರ್ಡ್ ಕಸಿದುಕೊಂಡಿದ್ದಾರೆ. ನನ್ನ ಜೊತೆಯಲ್ಲಿ ಬಂದಿದ್ದ ನನ್ನ ತಮ್ಮನ್ನು ನಿಂದಿಸಿದ್ದಾರೆ. ಸಿವಿಲ್ ಡ್ರೆಸ್‍ನಲ್ಲಿ ಬಂದಿದ್ದ ಪೊಲೀಸರು, ನನ್ನ ಅಪ್ಪನ ಕೆಲಸ ಮಾಡುತ್ತಿಲ್ಲ ಇಲ್ಲಿ ಎಂದು ನನ್ನನ್ನು ಬೈದಿದ್ದಾರೆ. ಜೊತೆಗೆ ಕುಡಿದು ಬಂದು ಆ ತರ ಮಾತನಾಡಿದ್ದಾರೆ ಎಂದು ನಾಜಿಮ್ ಖಾನ್ ಆರೋಪ ಮಾಡಿದ್ದಾರೆ.

Nazim Khan 3

ಸುಮ್ಮನೆ ನಿಂತುಕೊಂಡಿದ್ದ ಜನರ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡುತ್ತಾರೆ. ಸ್ಥಳದಲ್ಲಿ ನಾನೊಬ್ಬಳೇ ಮಹಿಳೆ ಇದ್ದಿದ್ದು, ಹೀಗಾಗಿ ನಾನು ವಾಪಸ್ ಬಂದೆ. ನನ್ನ ಗಾಡಿ ಮತ್ತೆ ಐಡಿ ಕಿತ್ತುಕೊಂಡಿದ್ದಾರೆ. ನಾನು ನಮ್ಮ ಜನರಿಗೆ ಪ್ರತಿಭಟನೆ ಮಾಡಬೇಡಿ ಎಂದು ಹೇಳಿದೆ. ಅದರೂ ಅವರು ಕೇಳುತ್ತಿಲ್ಲ. ನಿಮಗೆ ಈ ರೀತಿ ಮಾಡಿದ್ದಾರೆ ಎಂದರೆ ನಮ್ಮ ಸ್ಥಿತಿ ಏನೂ ನಾವು ಇದರ ಬಗ್ಗೆ ಎಂಎಲ್‍ಎ ಅವರ ಬಳಿ ಮಾತನಾಡುತ್ತೇವೆ ಎಂದು ಪ್ರತಿಭಟನೆಗೆ ಕುಳಿತ್ತಿದ್ದಾರೆ ಎಂದು ನಾಜಿಮ್ ಖಾನ್ ಅವರು ಬೆಂಬಲಿಗರನ್ನು ಸಮರ್ಥಿಸಿಕೊಂಡಿದ್ದಾರೆ.

Nazim Khan 2

ಈ ವಿಚಾರವಾಗಿ ಮಾತನಾಡಿದ ನಾಜಿಮ್ ಖಾನ್ ಪತಿ, ನಮ್ಮ ಹೆಂಡತಿ ತಲೆನೋವು ಇದ್ದ ಕಾರಣ ಆಸ್ಪತ್ರಗೆ ಅನುಮತಿ ಪಡೆದೆ ಹೋಗಿದ್ದರು. ಈ ಕಡೆಯಿಂದ ಹೋಗುವಾಗ ಸುಮ್ಮನೆ ಬಿಟ್ಟಿದ್ದಾರೆ. ಆದರೆ ಆ ಕಡೆಯಿಂದ ಬರುವಾಗ ಸಿವಿಲ್ ಡ್ರೆಸ್‍ನಲ್ಲಿ ಇದ್ದ ಇನ್‍ಸ್ಪೆಕ್ಟರ್ ಕುಮಾರಸ್ವಾಮಿ ಅವರನ್ನು ಅಡ್ಡಗಟ್ಟಿ ಐಡಿ ಕಿತ್ತುಕೊಂಡು ಗಾಡಿಯನ್ನು ಸೀಜ್ ಮಾಡಿದ್ದಾರೆ. ಈ ದೌರ್ಜನ್ಯವನ್ನು ಖಂಡಿಸಿ ನಮ್ಮ ಜನರು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

Tipu nagara Protest 1

ಶುಕ್ರವಾರ ಚಾಮರಾಜಪೇಟೆಯ ಇನ್‍ಸ್ಪೆಕ್ಟರ್ ಕುಮಾರಸ್ವಾಮಿ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ನಾಜಿಮಾ ಖಾನ್ ಆರೋಪಿಸಿದ್ದರು. ಇಂದು ಪೊಲೀಸರು ವಿರುದ್ಧ ನಾಜಿಮಾ ಖಾನ್ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದು, ಸ್ಥಳಕ್ಕೆ ಶಾಸಕ ಜಮೀರ್ ಅಹಮದ್ ಬರುವಂತೆ ಆಗ್ರಹಿಸಿದ್ದಾರೆ.

Share This Article