ಬೆಂಗಳೂರು: ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಆಶಾ ಕಾರ್ಯಕರ್ತೆಯರ ಸಭೆ ನಡೆಸಿದ್ದ ಶಾಸಕ ರೇಣುಕಾಚಾರ್ಯ ಅವರಿಗೆ ಸಿಎಂ ಬಿಎಸ್ ಯಡಿಯೂರಪ್ಪ ಹಿಗ್ಗಾಮುಗ್ಗ ಕ್ಲಾಸ್ ತೆಗೆದುಕೊಂಡು ಎಚ್ಚರಿಕೆ ನೀಡಿದ್ದಾರೆ.
ರೇಣುಕಾಚಾರ್ಯ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಆಶಾ ಕಾರ್ಯಕರ್ತೆಯರ ಸಭೆ ನಡೆಸಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದನ್ನು ನೋಡಿದ ಸಿಎಂ ಬಿಎಸ್‍ವೈ ಇಂದು ರೇಣುಕಾಚಾರ್ಯರಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಏನು ಮಾಡುತ್ತಿದ್ದೀಯ ನೀನು? ಇಡೀ ದೇಶದಲ್ಲೇ ಸಾಮಾಜಿಕ ಅಂತರದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ನೀನು ಮಾತ್ರ ಅದನ್ನು ಕಾಪಾಡಿಕೊಳ್ಳದೆ ಸಭೆ ಮಾಡಿದ್ದೀಯ. ಶಾಸಕನಾಗಿ ಜವಾಬ್ದಾರಿ ಬೇಡವೇ? ಇದೇ ಕೊನೆಯ ಎಚ್ಚರಿಕೆ ನಿನಗೆ, ಇನ್ನೊಮ್ಮೆ ಈ ತಪ್ಪು ಮರುಕಳಿಸಿದರೆ ಸಹಿಸುವುದಿಲ್ಲ ಅಂತ ಸಿಎಂ ರೇಣುಕಾಚಾರ್ಯರಿಗೆ ಕರೆಯಲ್ಲಿಯೇ ಎಚ್ಚರಿಕೆ ನೀಡಿದ್ದಾರೆ.