ಬೆಂಗಳೂರು: ರಾಜ್ಯದಲ್ಲಿ ಮೊದಲ ಬಾರಿಗೆ ಕೊರೊನಾ ವೈರಸ್ ಸೊಂಕು ಇರೋ ವ್ಯಕ್ತಿ ಪತ್ತೆಯಾದ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿಯಲ್ಲಿ ಆರೋಗ್ಯ ಇಲಾಖೆ ಮುಂಜಾಗೃತಾ ಕ್ರಮವನ್ನು ಕೈಗೊಳ್ಳುತ್ತಿದೆ.
ಸರ್ಕಾರಿ ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್ ಗಳನ್ನ ತೆರೆಯುವಂತೆ ಸಹ ಆರೋಗ್ಯ ಸಚಿವರು ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಕೊರೊನಾ ವಾರ್ಡ್ ತೆರೆಯಲಾಗಿದೆ. ಈಗಾಗಲೇ ಇಲ್ಲಿ 50ಕ್ಕೂ ಹೆಚ್ಚು ಜನರು ಕೊರೊನಾ ವೈರಸ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆ.
Advertisement
Advertisement
ಸೋಮವಾರ ಒಟ್ಟು 26 ಜನ, ಇಂದು ಮಧ್ಯಾಹ್ನದ ವೇಳೆಗೆ 35 ಜನ ರಾಜೀವ್ ಗಾಂಧಿ ಆಸ್ಪತ್ರೆಗೆ ಆಗಮಿಸಿ ಕೊರೊನಾ ವೈರಸ್ ಬಗ್ಗೆ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಕೊರೊನಾ ವೈರಸ್ ಪರೀಕ್ಷೆ ಮಾಡಿಸಿಕೊಳ್ಳುತ್ತಿರುವವರಲ್ಲಿ ಬಹುತೇಕ ಮಂದಿ ವಿದೇಶದಿಂದ ಬಂದಿರುವವರೇ ಆಗಿದ್ದು, ಪ್ರವಾಸಕ್ಕೋ ಕೆಲಸದ ನಿಮಿತ್ತ ವಿದೇಶಗಳಿಗೆ ಹೋಗಿದ್ದವರು ಬೆಂಗಳೂರಿಗೆ ಹಿಂದಿರುಗಿ ಬಂದ ಕೂಡಲೇ ರಾಜೀವ್ ಗಾಂಧಿ ಆಸ್ಪತ್ರೆಯ ಕಡೆ ಬಂದು ಭಯಾನಕ ರೋಗದ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ‘ಟೆಕ್ಕಿ ಕೆಲ್ಸ ಮಾಡುತ್ತಿದ್ದ ಕಂಪನಿ ಅಡ್ರೆಸ್ ಹೇಳಿ’ – ಆರೋಗ್ಯ ಇಲಾಖೆಗೆ ದುಂಬಾಲು ಬೀಳ್ತಿರುವ ಬೆಂಗ್ಳೂರಿಗರು
Advertisement