– ಬೆಂಗ್ಳೂರಿನಲ್ಲಿ 5ಕ್ಕೆ ಏರಿತು ಕೊರೊನಾ ಕೇಸ್
– ನಗರಕ್ಕೆ ಮರಳಿದ ದಿನವೇ ಆಸ್ಪತ್ರೆಗೆ ದಾಖಲು
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಕೊರೊನಾ ವೈರಸ್ ಪ್ರಕರಣ ಪತ್ತೆಯಾಗಿದೆ. ಈ ಮೂಲಕ ನಗರದಲ್ಲಿ ಕೊರೊನಾ ಪೀಡಿತರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.
ಕೊರೊನಾ ವೈರಸ್ ಪತ್ತೆಯಾಗಿರುವ ವ್ಯಕ್ತಿಯನ್ನು ಪ್ರತ್ಯೇಕ ವಾರ್ಡ್ ನಲ್ಲಿಟ್ಟು ಚಿಕಿತ್ಸೆ ಕೊಡಲಾಗುತ್ತದೆ. ಈ ವ್ಯಕ್ತಿಯು ಮೂಲತಃ ಮುಂಬೈ ನಿವಾಸಿಯಾಗಿದ್ದು, ಗ್ರೀಸ್‍ನಿಂದ ಮುಂಬೈಗೆ ಮಾರ್ಚ್ 6 ರಂದು ಬಂದಿದ್ದ. ಅಲ್ಲಿಂದ ಮಾರ್ಚ್ 8ರಂದು ಬೆಂಗಳೂರಿಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ. ಅಷ್ಟೇ ಅಲ್ಲದೇ ಮಾರ್ಚ್ 9ಕ್ಕೆ ಆತ ಕಚೇರಿಗೆ ಹೋಗಿದ್ದ. ಆಗ ಆತ ಕೇವಲ 4 ಜನ ಆತ್ಮೀಯ ಸ್ನೇಹಿತರನ್ನು ಮಾತನಾಡಿಸಿ ಮನೆಗೆ ವಾಪಸ್ ತೆರಳಿದ್ದ. ಇದನ್ನೂ ಓದಿ: ಕೋಳಿಯಿಂದ ಕೊರೊನಾ ಬರಲ್ಲ ಅಂತಿದಾರೆ, ಆದರೂ ಬೆಲೆ ಕಡಿಮೆಯಾಗಿದೆ- ಈಶ್ವರಪ್ಪ
Advertisement
Advertisement
ಕೊರೊನಾ ವೈರಸ್ ಪತ್ತೆಯಾದ ವ್ಯಕ್ತಿಯ ಕಚೇರಿಯಲ್ಲಿ 154 ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಆದರೆ ಆತ ಯಾರ ಸಂಪರ್ಕಕ್ಕೂ ಸಿಗದೇ ಕೆಲವೇ ಗಂಟೆಯಲ್ಲಿ ವಾಪಸ್ ಬಂದಿದ್ದ ಎನ್ನುವ ವಿಚಾರ ಈಗ ಲಭ್ಯವಾಗಿದೆ.
Advertisement
ಮನೆಗೆ ಮರಳಿದ ದಿನವೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆತನ ಸೋದರ ಮಾತ್ರ ಬೆಂಗಳೂರಿನಲ್ಲಿ ಇದ್ದು ಜೊತೆಯಲ್ಲಿ ವಾಸ ಮಾಡುತ್ತಿದ್ದಾನೆ. ಪತ್ನಿ, ತಂದೆ, ತಾಯಿ ಎಲ್ಲರೂ ಮುಂಬೈನಲ್ಲಿ ನೆಲೆಸಿದ್ದಾರೆ.
Advertisement
ಆತ ಬೆಂಗಳೂರಿಗೆ ಬಂದಾಗ ಆಟೋ ಮೂಲಕ ಸಂಚರಿಸಿದ್ದ. ಆ ಆಟೋ ಡ್ರೈವರ್ ಮನೆಯಲ್ಲಿ ಮೂವರು ಸದಸ್ಯರಿದ್ದಾರೆ. ಹೀಗಾಗಿ ಎಲ್ಲಾ ರೀತಿಯ ಮಾಹಿತಿ ಕಲೆ ಹಾಕಿ ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿದ್ದಾರೆ.