– ಸುಳ್ಳು ವದಂತಿ ಹಬ್ಬಬೇಡಿ
ಬೆಂಗಳೂರು: ಚೀನಾ ದೇಶದಲ್ಲಿ ಭಯಾನಕ ಕೊರೊನಾ ವೈರಸ್ ಜನಸಾಮಾನ್ಯರಲ್ಲಿ ಕಾಣಿಸಿಕೊಂಡ ಮೇಲೆ ಮಾಂಸಾಹಾರ ಸೇವನೆಯ ಪ್ರಮಾಣ ಕಡಿಮೆಯಾಗಿದೆ. ಚೀನಾದಲ್ಲಿನ ಆಹಾರದ ಪದ್ಧತಿಯಿಂದಲೇ ಕೊರೊನಾ ವೈರಸ್ ಹರಡುತ್ತಿದೆ ಅನ್ನೋ ಸುದ್ದಿಯಿಂದಾಗಿ ನಮ್ಮ ದೇಶದಲ್ಲೂ ಕೋಳಿ, ಮೀನು, ಮೊಟ್ಟೆ ಆಹಾರದ ಮೇಲೆ ಭಾರೀ ಪ್ರಭಾವ ಬೀರಿದೆ.
Advertisement
ಆದರೆ ಕೋಳಿ ಮೊಟ್ಟೆ, ಮೀನು ತಿನ್ನೊದ್ರಿಂದ ಯಾವುದೇ ಕೊರೊನಾ ವೈರಸ್ ಬರೋದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಕೋಳಿಯಿಂದ ಕೊರೊನಾ ವೈರಸ್ ಬರುತ್ತೆ ಅಂತ ಸುಳ್ಳು ವದಂತಿಗಳು ಹಬ್ಬುತ್ತಿವೆ. ಯಾವುದೋ ಕಾಯಿಲೆಯ ಕೋಳಿಗಳ ಫೋಟೋ ಹಾಕಿ ಇದು ಕೊರೊನಾ ವೈರಸ್ ಅಂತ ಪೋಸ್ಟ್ ಮಾಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಫೌಲ್ಟ್ರಿ ಇಂಡಸ್ಟ್ರಿಯವರು ಇಂದು ಪತ್ರಿಕಾಗೋಷ್ಠಿ ನಡೆಸಿದ್ದು, ಕೋಳಿ ತಿನ್ನೋದ್ರಿಂದ ಕೊರೊನಾ ಬರುತ್ತೆ ಎಂಬ ವದಂತಿಗೆ ಕಿವಿ ಕೊಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
Advertisement
Advertisement
ವದಂತಿಯಿಂದ ಕೋಳಿ ಮಾಂಸ ಮಾರಾಟವೂ ಶೇ.30ರಷ್ಟು ಕಡಿಮೆಯಾಗಿದೆ. ಜನ ಮುಂಜಾಗ್ರತೆಯ ಕ್ರಮ ಕೈಗೊಳ್ಳಬೇಕು. ಆದರೆ ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ ಎಂದು ಅಧ್ಯಕ್ಷ ಡಾ. ಜಿ ದೇವೇಗೌಡ ಸಾರ್ವಜನಿಕರಿಗೆ ಮನವಿ ಮಾಡಿಕೊಂಡಿದ್ದಾರೆ.
Advertisement
ಬೆಂಗಳೂರಿನ ಪ್ರೆಸ್ ಕ್ಲಬ್‍ನಲ್ಲಿ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಡಾ. ದೇವರಾಜ್ ಸೇರಿದಂತೆ ಅನೇಕ ಪಶು ವೈದ್ಯರು ಭಾಗಿಯಾಗಿದ್ದರು.