– ಮನೆಯಲ್ಲಿ ಇದ್ದಷ್ಟೂ ಸೇಫ್
ಬೆಂಗಳೂರು: ಕೊರೊನಾ ವೈರಸ್ ಭೀತಿಯಿಂದ ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿದ್ದು, ಇದೀಗ ಅಂತರ ಕಾಯ್ದುಕೊಳ್ಳುವಿಕೆ ಹಾಗೂ ಮನೆಯಲ್ಲಿದ್ದರಷ್ಟೇ ಕೊರೊನಾ ನಿಯಂತ್ರಣ ಮಾಡಬಹುದು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ(ಐಸಿಎಂಆರ್) ಸ್ಪಷ್ಟನೆ ನೀಡಿದೆ.
ಹೌದು. ಕೊರೊನಾ ವೈರಸ್ ಕಂಟ್ರೋಲ್‍ಗೆ ಅಂತರವೇ ಅಸ್ತ್ರ. ದೂರ ಇದ್ದಷ್ಟೂ ಹಾಗೂ ಮನೆಯಲ್ಲಿ ಇದ್ದರಷ್ಟೇ ನೀವು ಸೇಫ್ ಆಗಬಹುದು. ಒಟ್ಟಿನಲ್ಲಿ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸಂಸ್ಥೆ ಪುನರುಚ್ಚರಿಸಿದೆ.
Advertisement
Advertisement
ಕೊರೊನಾ ನಿರ್ಮೂಲನೆಗೆ ಸಾಮಾಜಿಕ ಅಂತರವೇ ಅಸ್ತ್ರವಾಗಿದೆ. ಸಾಮಾಜಿಕ ಅಂತರವೇ ಅತ್ಯಂತ ಸರಳ, ಪರಿಣಾಮಕಾರಿ ಮದ್ದು. ಕಟ್ಟುನಿಟ್ಟಾಗಿ ಪಾಲಿಸಿದರಷ್ಟೇ ಕೊರೋನಾ ಕ್ಷೀಣಿಸುತ್ತದೆ. ಸೋಂಕಿತರು, ಶಂಕಿತರನ್ನು ಗೃಹ ಬಂಧನದಲ್ಲಿರಿಸಬೇಕು (ಹೋಮ್ ಕ್ವಾರಂಟೈನ್) ಎಂದು ಹೇಳಿದೆ. ಇದನ್ನು ಓದಿ: ಬೆಂಗಳೂರಲ್ಲೇ 5 ಲಕ್ಷ ಮಂದಿಗೆ ಕೊರೊನಾ ಸೋಂಕು ತಗುಲಬಹುದು – ಐಸಿಎಂಆರ್ ವರದಿ
Advertisement
ಹೋಮ್ ಕ್ವಾರಂಟೈನ್‍ನಿಂದ ಶೇ.89ರಷ್ಟು ಕೊರೊನಾ ನಿಯಂತ್ರಣ ಮಾಡಬಹುದು. ದೇಶದಲ್ಲಿ ಎಂಟ್ರಿ ಸ್ಕ್ರೀನಿಂಗ್, ಸಂಚಾರ ನಿಯಂತ್ರಣದಿಂದ ಸೋಂಕು ಹರಡೋ ರಿಸ್ಕ್ ತಪ್ಪಿಸಬಹುದು. ಸ್ಕ್ರೀನಿಂಗ್ ಮಾಡೋದ್ರಿಂದ 3 ದಿನದಿಂದ 3 ವಾರ ವೈರಸ್ ಹರಡದೋನ್ನು ತಡೆಯಬಹುದು. ವಿಮಾನಯಾನದಿಂದ ಸೋಂಕು ಹರಡುವ ಹೈ ರಿಸ್ಕ್ ರಾಷ್ಟ್ರಗಳ ಸಾಲಿನಲ್ಲಿ ಭಾರತ 17ನೇ ಸ್ಥಾನದಲ್ಲಿದೆ ಎಂದು ಐಎಂಸಿಆರ್ ತಿಳಿಸಿದೆ.