ಬೆಂಗಳೂರು: ಕೊರೊನಾ ಭೀತಿಯಿಂದ ರಾಜ್ಯದ ಎಲ್ಲಾ ಶಾಲೆಗಳಿಗೆ ಮಾರ್ಚ್ 31 ರವರೆಗೆ ರಜೆ ಘೋಷಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. 1-6 ನೇ ತರಗತಿವರೆಗೆ ಪರೀಕ್ಷೆ ರದ್ದು ಮಾಡಲಾಗಿದ್ದು, ಬೇಸಿಗೆ ರಜೆ ಘೋಷಣೆ ಮಾಡಲಾಗಿದೆ. 7-9 ನೇ ತರಗತಿವರೆಗೆ ಪರೀಕ್ಷೆ ಮುಂದೂಡಲಾಗಿದೆ. ಮಾರ್ಚ್ 31ರವರೆಗೆ ರಜೆ ಘೋಷಣೆ ಮಾಡಲಾಗಿದೆ. ಮಕ್ಕಳಿಗೆ ರಜೆ ಘೋಷಣೆ ಮಾಡಿರೋ ಸರ್ಕಾರ ಶಿಕ್ಷಕರಿಗೆ ಮಾತ್ರ ರಜೆ ಕೊಟ್ಟಿರಲಿಲ್ಲ. ಈಗ ಮಾರ್ಚ್ 31ವರೆಗೆ ಕಾಲ ಕಳೆಯಲು ಶಿಕ್ಷಕರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಶೈಕ್ಷಣಿಕ ಚಟುವಟಿಕೆಗಳ ಸಿದ್ಧತೆ ಮಾಡಿಕೊಳ್ಳುವಂತೆ ಸುತ್ತೋಲೆ ಹೊರಡಿಸಿದ್ದು, ಮಾರ್ಚ್ 31ರ ಒಳಗೆ ಎಲ್ಲಾ ಸಿದ್ಧತೆ ಮುಗಿಸಿ ಅಂತ ಸೂಚನೆ ನೀಡಿದೆ.
Advertisement
ಮಾರ್ಚ್ 16ರಿಂದ ಮಾರ್ಚ್ 31ರವರೆಗೆ ಶಿಕ್ಷಕರು ವಿವಿಧ ಶೈಕ್ಷಣಿಕ ಚಟುವಟಿಕೆಗಳನ್ನ ಪೂರ್ಣಗೊಳಿಸಬೇಕು ಅಂತ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ವಿದ್ಯಾರ್ಥಿಗಳು ಮತ್ತೆ ಶಾಲೆಗೆ ವಾಪಸ್ ಬರುವ ವೇಳೆ ಶಾಲೆಯನ್ನು ಸಿದ್ಧಪಡಿಸಿ ಅಂತ ಸೂಚನೆ ನೀಡಿದೆ.
Advertisement
ಶಿಕ್ಷಕರಿಗೆ ನೀಡಿರುವ ಶೈಕ್ಷಣಿಕ ವೇಳಾಪಟ್ಟಿ ಪ್ರಮುಖ ಅಂಶಗಳು ಹೀಗಿವೆ:
* 2020-21ನೇ ಸಾಲಿನ ಶಾಲಾ ಅಭಿವೃದ್ಧಿ ಯೋಜನೆ ಸಿದ್ಧಪಡಿಸುವುದು.
* ಮಕ್ಕಳ ಕಲಿಕಾ ಫಲಗಳ ಆಧಾರದ ಮೇಲಿನ ಬೋಧನೆಗೆ ಕ್ರಿಯಾ ಯೋಜನೆ ಸಿದ್ಧಪಡಿಸುವುದು
* SDMC ಅವ್ರ ಜೊತೆ ಸೇರಿ ಶಾಲಾ ಮುಖ್ಯೋಪಾಧ್ಯಾಯರು ಶೈಕ್ಷಣಿಕ ಯೋಜನೆ ಸಿದ್ಧಪಡಿಸುವುದು
* ಸೇತು ಬಂಧ ಪರೀಕ್ಷೆಗೆ ಪ್ರಶ್ನೆಗೆ ಪತ್ರಿಕೆ ತಯಾರು ಮಾಡುವುದು
* ಶಾಲೆಯಿಂದ ಹೊರಗುಳಿದ ಮಕ್ಕಳ ಪಟ್ಟಿ ತಯಾರಿಸುವುದು
Advertisement
Advertisement
* ಶಾಲಾ ಗ್ರಂಥಾಲಯ, ಭೂಪಟ, ಕ್ರೀಡಾ ಸಾಮಾಗ್ರಿ ಸಿದ್ಧ ಮಾಡುವುದು
* ಸಂಭ್ರಮದ ಶನಿವಾರ(ನೋ ಬ್ಯಾಗ್ ಡೇಗೆ) ರೂಪುರೇಷೆ ಸಿದ್ಧ ಮಾಡಬೇಕು
* ಪಠ್ಯಕ್ರಮ, ಸಹಪಠ್ಯ ಚಟುವಟಿಕೆಗಳನ್ನ ಒಳಗೊಂಡ ವಾರ್ಷಿಕ ಶಾಲಾ ಪಂಚಾಂಗ ರೆಡಿ ಮಾಡುವುದು
* ದೀಕ್ಷಾ ಪೊರ್ಟಲ್ ಗೆ ಅಗತ್ಯ ಮಾಹಿತಿಯನ್ನ ಅಪಲೋಡ್ ಮಾಡುವುದು
* ಸಂಪೂರ್ಣ ಶಾಲೆಯ ಸ್ವಚ್ಛತಾ ಕಾರ್ಯ ನಡೆಸುವುದು
* ಕ್ರೀಡಾ ಚಟುವಟಿಕೆಗಳಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವುದು