ಬೆಂಗಳೂರು: ಚೀನಾದಲ್ಲಿ ಮರಣ ಮೃದಂಗ ಬಾರಿಸಿರುವ ಕೊರೊನಾ ವೈರಸ್ ಇದೀಗ ರಾಜ್ಯಕ್ಕೂ ಒಕ್ಕರಿಸಿದ್ದು, ಹಲವರನ್ನು ಬಲಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಸ್ಯಾಂಡಲ್ ವುಡ್ ನಟ, ನವರಸ ನಾಯಕ ಕರುನಾಡಿನ ಮಂದಿಗೆ ಎಚ್ಚರಿಕೆ ನೀಡಿದ್ದಾರೆ.
Advertisement
ಈ ಬಗ್ಗೆ ಟ್ವೀಟ್ ಮಾಡಿರುವ ಜಗ್ಗೇಶ್, ವಿಶ್ವಕ್ಕೆ ದೊಡ್ಡಣ್ಣ ಎನ್ನುತ್ತಿದ್ದ ಅಮೆರಿಕ ಕೊರೊನಾ ಎಂಟ್ರಿಯಿಂದ ನಡುಗುತ್ತಿದೆ. ಅವಿವೇಕಿ ಸಮುದಾಯ, ಏನು ಆಗದು ಎಂದು ಬೀದಿಗೆ, ಪಬ್ಬಿಗೆ, ರಸ್ತೆಗಿಳಿದ ತಪ್ಪಿಗೆ ಮಹಾಮಾರಿ ಅಟ್ಟಹಾಸ ತೋರಿಸುತ್ತಿದೆ. ಆ ಕಾರಣದಿಂದಾಗಿ ಲಕ್ಷಾಂತರ ಮಂದಿ ಪರಿತಪಿಸುವಂತಾಗಿದೆ. ಈ ರೀತಿಯ ಪರಿಸ್ಥಿತಿ ನಮ್ಮ ರಾಜ್ಯಕ್ಕೆ ದೇಶಕ್ಕೆ ಬರದಂತೆ ನೋಡಿಕೊಳ್ಳುವಂತೆ ಎಚ್ಚರಿಕೆ ನೀಡಿದ್ದಾರೆ.
Advertisement
ಬೆಂಗಳೂರು ಪಕ್ಕ ತುಮಕೂರಿಗೆ ನುಗ್ಗಿದೆ. ಹೀಗಾಗಿ ಸ್ವಲ್ಪ ಯಾಮಾರಿದರೂ ರಾಜ್ಯಕ್ಕೆ ಕಂಟಕ ಎಂದು ಟ್ವೀಟ್ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.
Advertisement
ವಿಶ್ವಕ್ಕೆ ದೊಡ್ಡಣ್ಣ ನಾನು ಎನ್ನುತ್ತಿದ್ದ #america ಕೊರೋನ ಮಾರಿ ಪ್ರವೇಶದಿಂದ ನಡುಗುತ್ತಿದೆ!
ಕಾರಣ ಭಯವಲ್ಲಾ ಅವಿವೇಕಿ ಸಮುಧಾಯ ಏನು ಆಗದು ಎಂದು ಬೀದಿಗೆ ಪಬ್ಬಿಗೆ ತೆವಲಿಗೆ ರಸ್ತೆಗಿಳಿದ ತಪ್ಪಿಗೆ
ಮಹಾಮಾರಿ ವಕ್ಕರಿಸಿದೆ!
ಎಚ್ಚರ don't underestimate
ಬೆಂಗಳೂರು ಪಕ್ಕ ತುಮಕೂರಿಗೆ ನುಗ್ಗಿದೆ!
ಸ್ವಲ್ಪ ಯಾಮಾರಿದರೆ ರಾಜ್ಯಕ್ಕೆ ಕಂಟಕ!
— ನವರಸನಾಯಕ ಜಗ್ಗೇಶ್ (@Jaggesh2) March 28, 2020
Advertisement
ಶುಕ್ರವಾರ ಒಂದೇ ದಿನ ದೇಶದಲ್ಲಿ ಅತಿ ಹೆಚ್ಚು 125 ಕೊರೊನಾ ಪಾಸಿಟಿವ್ ದಾಖಲಾಗಿದ್ದು, ಒಟ್ಟು ಪೀಡಿತರ ಸಂಖ್ಯೆ 834ಕ್ಕೆ ಏರಿಕೆಯಾಗಿದೆ. ಒಂದೇ ದಿನದಲ್ಲಿ ಅತಿ ಹೆಚ್ಚು ಏರಿಕೆಯಾಗಿದ್ದು, 19 ಮಂದಿ ಮೃತಪಟ್ಟಿದ್ದಾರೆ. ಕರ್ನಾಟಕದಲ್ಲಿ ಮೂರು ಸೇರಿದಂತೆ ದೆಹಲಿ, ಮಹಾರಾಷ್ಟ್ರ, ಪಂಜಾಬ್, ಗುಜರಾತ್, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶದಲ್ಲಿ ಮೃತಪಟ್ಟಿದ್ದಾರೆ. ಕೇರಳದಲ್ಲಿ 39 ಹೊಸ ಪ್ರಕರಣಗಳು ಪತ್ತೆಯಾಗಿದ್ದು ಒಟ್ಟು ಸಂಖ್ಯೆ 164ಕ್ಕೆ ಏರಿಕೆಯಾಗಿದೆ. 39ರ ಪೈಕಿ 34 ಪ್ರಕರಣಗಳು ಕಾಸರಗೋಡನಲ್ಲೇ ದಾಖಲಾಗಿದೆ.