ಬೆಂಗಳೂರು: ಕರ್ನಾಟಕದಲ್ಲಿ ಭೀತಿ ಹುಟ್ಟಿಸಿರೋ ಕೊರೊನಾ ಹರಡದಂತೆ ತಡೆಯಲು ರಾಜ್ಯ ಸರ್ಕಾರ ಅನೇಕ ಮುಂಜಾಗ್ರತಾ ಕ್ರಮಗಳನ್ನ ತೆಗೆದುಕೊಳ್ಳುತ್ತಿದೆ. ಈಗಾಗಲೇ ಒಂದು ವಾರಗಳ ಕಾಲ ಬಾರ್, ಸ್ಕೂಲ್, ಮಾಲ್, ಸ್ಪೋರ್ಟ್ಸ್ ಕ್ಲಬ್ ಎಲ್ಲವನ್ನೂ ಬಂದ್ ಮಾಡಿದೆ. ಕಾಲ ಕಾಲಕ್ಕೆ ಮುಂಜಾಗ್ರತಾ ಕ್ರಮಗಳನ್ನು ಪ್ರಚಾರ ಮಾಡುವ ಕೆಲಸ ಸರ್ಕಾರ ಮಾಡುತ್ತಿದೆ. ಈಗ ಕೊರೊನಾ ಮುಂಜಾಗ್ರತಾ ಕ್ರಮಗಳ ಸಲಹೆಗಳನ್ನ ಕಾಲ ಕಾಲಕ್ಕೆ ನೀಡುವ ಸಲುವಾಗಿ, ಕೊರೊನಾ ಬಗ್ಗೆ ಎಚ್ಚರವಹಿಸುವ ನಿಟ್ಟಿನಲ್ಲಿ ಸರ್ಕಾರ ಕೋ-ಆರ್ಡಿನೇಷನ್ ಕಮಿಟಿ ರಚಿಸಿ ಆದೇಶ ಹೊರಡಿಸಿದೆ.
Advertisement
ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಡೆದಿದ್ದ ಆರೋಗ್ಯ ಇಲಾಖೆ ಸಭೆಯಲ್ಲಿ ಕೋ ಆರ್ಡಿನೇಷನ್ ಕಮಿಟಿ ರಚಿಸುವಂತೆ ಸಿಎಂ ಯಡಿಯೂರಪ್ಪ ಸಲಹೆ ನೀಡಿದರು. ಸಿಎಂ ಸಲಹೆ ಮೇರೆಗೆ ಆರೋಗ್ಯ ಇಲಾಖೆಯ ನಿರ್ದೇಶಕ ಡಾ. ಪಾಟೀಲ್ ಓಂ ಪ್ರಕಾಶ್ ನೇತೃತ್ವದ 8 ಜನರ ಸಮಿತಿಯನ್ನ ಆರೋಗ್ಯ ಇಲಾಖೆ ನೇಮಕ ಮಾಡಿ ಆದೇಶ ಹೊರಡಿಸಿದ. ಎಂಟು ಜನ ಅಧಿಕಾರಿಗಳ ತಂಡ ಕಾಲ ಕಾಲಕ್ಕೆ ಸಭೆ ಮಾಡಿ ಕೊರೊನಾ ನಿಯಂತ್ರಣಕ್ಕೆ ಅಗತ್ಯ ಮಾಹಿತಿ, ಸಲಹೆಗಳನ್ನ ನೀಡಲಿದೆ.
Advertisement
Advertisement
ಕೊರೊನಾ ಬಗ್ಗೆ ಮುಂಜಾಗ್ರತಾ ಕ್ರಮಗಳು, ಅಗತ್ಯ ಮಾಹಿತಿ ನೀಡುವುದು, ಕೊರೊನಾ ತಡೆಗೆ ಸಂಶೋಧನೆ ನಡೆಸುವುದು ಈ ಕಮಿಟಿ ಉದ್ದೇಶ. ಕೊರೊನಾ ಮತ್ತೆ ಹರಡದಂತೆ ಅಗತ್ಯ ಎಚ್ಚರಿಕೆ ನೀಡುವ ಸಲುವಾಗಿ ಈ ತಂಡ ಕೆಲಸ ನಿರ್ವಹಣೆ ಮಾಡಲಿದೆ. ಈ ತಂಡ ಕೊರೊನಾ ತಡೆಗೆ ಕ್ರಮಗಳನ್ನ ಘೋಷಣೆ ಮಾಡಲಿದೆ. ಅ ಪ್ರಕಾರ ರಾಜ್ಯದಲ್ಲಿ ಕಾರ್ಯಕ್ರಮಗಳು ಜಾರಿಯಾಗಲಿದೆ.
Advertisement
ವೈದ್ಯರಿಗೆ ಮಾಹಿತಿ, ವೈದ್ಯ ಸಿಬ್ಬಂದಿಗೆ ಕೊರೊನಾ ಹರಡದಂತೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಕಾಲ ಕಾಲಕ್ಕೆ ಮಾಹಿತಿ ನೀಡುವುದು ಈ ಕಮಿಟಿ ಉದ್ದೇಶವಾಗಿದೆ. ಇದಲ್ಲದೆ ಕೇಂದ್ರ ಆರೋಗ್ಯ ಇಲಾಖೆ ಜೊತೆ ಸಂಪರ್ಕ ಇಟ್ಟುಕೊಳ್ಳುವುದು. ರಾಜ್ಯ ಸರ್ಕಾರದ ಅಗತ್ಯ ಮಾಹಿತಿ ಸಲಹೆಗಳನ್ನು ನೀಡುವ ಕೆಲಸ ಈ ಸಮಿತಿಯದ್ದಾಗಿದೆ. ಈ ಸಮಿತಿ ಸಲಹೆಗಳ ಮೇರೆಗೆ ಕೊರೊನಾ ನಿಯಂತ್ರಣಕ್ಕೆ ಅಗತ್ಯ ಕಾರ್ಯಕ್ರಮಗಳು ಪ್ರಾರಂಭವಾಗಲಿದೆ.