ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಅಟ್ಟಹಾಸ ದಿನೇ ದಿನೇ ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಧನಸಹಾಯ ಮಾಡುವಂತೆ ದಾನಿಗಳಿಗೆ ಸಿಎಂ ಯಡಿಯೂರಪ್ಪ ಮನವಿ ಮಾಡಿದ್ದಾರೆ.
ಕೊರೊನಾ ವೈರಸ್ ಹರಡುವುದನ್ನ ತಡೆಗಟ್ಟಲು ಸರ್ಕಾರದ ಜೊತೆ ಕೈಜೋಡಿಸಿ ಎಂದು ದಾನಿಗಳಿಗೆ ಸಿಎಂ ಮನವಿ ಮಾಡಿದ್ದಾರೆ. ಮುಖ್ಯಮಂತ್ರಿ ಪರಿಹಾರನಿಧಿ ಕೊವಿಡ್-19 ಹೆಸರಿನ ಖಾತೆಗೆ ಧನಸಹಾಯಕ್ಕೆ ಮನವಿ ಮಾಡಲಾಗಿದೆ. ಧನಸಹಾಯ ಮಾಡಲಿ ಇಚ್ಛಿಸುವವರು ಖಾತೆ ಸಂಖ್ಯೆ-39234923151 ಹಾಗೂ ಐಎಫ್‍ಎಸ್‍ಸಿ ಕೋಡ್ – ಎಸ್‍ಬಿಐಎನ್0040277 ಹಣ ಹಾಕಬಹುದು ಎಂದು ಕೇಳಿಕೊಳ್ಳಲಾಗಿದೆ.
Advertisement
An Appeal:
Karnataka is doing its best to battle the Corona pandemic.
But without the support of our Citizens, industrialists and corporate leaders it will be difficult to win this battle. 1/2 pic.twitter.com/sTqz4dTQWl
— CM of Karnataka (@CMofKarnataka) March 25, 2020
Advertisement
ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೇ ರಾಜ್ಯದಲ್ಲಿ ಜಾಸ್ತಿಯಾಗುತ್ತಿದೆ. ಇಂದು ಈ ವಿಚಾರವಾಗಿ ಮಾತನಾಡಿದ್ದ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್, ಇಂದು ಒಂದೇ ದಿನ ಹತ್ತು ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಮಂಗಳವಾರ 41 ಇದ್ದ ಸಂಖ್ಯೆ ಇಂದು 51ಕ್ಕೆ ಏರಿಕೆಯಾಗಿದೆ. ಹಾಗಾಗಿ ಕೊರೊನಾ ವೈರಸ್ ತಡೆಗೆ ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ತೆಗದುಕೊಳ್ಳುತ್ತಿದೆ. ಇದಕ್ಕೆ ಜನರು ಸಹಕರಿಸಬೇಕು ಎಂದು ಕೇಳಿಕೊಂಡಿದ್ದರು.
Advertisement
2/2
I hereby request everyone to kindly contribute to the CMRF and help the state tide over this difficult situation.#Covid_19 #Covidpendmic #CovidinKarnataka#KarnatakaFightsCorona #IndiaFightsCOVID19 #IndiaFightsCoronavirus #PreventCOVID19Spread
— CM of Karnataka (@CMofKarnataka) March 25, 2020