ಬೆಂಗಳೂರು: ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಣ ಮಾಡುವ ಸಲುವಾಗಿ ಮಾಲ್‌ಗೆ ಎಂಟ್ರಿ ಕೊಡುವವರಿಗೆ ಎರಡು ಡೋಸ್ ಸರ್ಟಿಫಿಕೇಟ್ ಕಡ್ಡಾಯ ಮಾಡಿತ್ತು. ಈ ಹಿನ್ನೆಲೆಯಲ್ಲಿ ಮಾಲ್‌ಗಳಲ್ಲಿ ಈಗಾಗಲೇ ಪರಿಶೀಲನೆ ಪ್ರಾರಂಭವಾಗಿದೆ.
ಓಮಿಕ್ರಾನ್ ಭೀತಿ ಹಿನ್ನೆಲೆಯಲ್ಲಿ ಮಾಲ್‌ಗಳಲ್ಲಿ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಎರಡು ಡೋಸ್ ಲಸಿಕೆ ಪಡೆದವರಿಗಷ್ಟೇ ಮಾಲ್‌ನಲ್ಲಿ ಸಂಚರಿಸಲು ಅವಕಾಶ ನೀಡಲಾಗಿದೆ. ವೀಕೆಂಡ್‌ನಲ್ಲಿ ಮಾಲ್‌ಗೆ ಬರುವವರ ಸಂಖ್ಯೆ ಹೆಚ್ಚಾಗಿರುವುದರಿಂದ ಮಾಲ್‌ಗಳ ಮುಂಭಾಗ ಸಿಬ್ಬಂದಿ ಅಲರ್ಟ್ ಆಗಿದ್ದಾರೆ.
Advertisement
Advertisement
2 ಡೋಸ್ ಲಸಿಕೆ ಪಡೆದವರಿಗೆ ಮಾತ್ರ ಮಾಲ್‌ಗೆ ಪ್ರವೇಶ ಎಂದು ಮಾಲ್ ಮುಂದೆ ಸಿಬ್ಬಂದಿ ನೋಟಿಸ್ ಬೋರ್ಡ್ ಹಾಕಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪ್ರತಿಯೊಬ್ಬರ ವ್ಯಾಕ್ಸಿನೇಷನ್ ಸರ್ಟಿಫಿಕೇಟ್ ಪರಿಶೀಲನೆ ನಡೆಸುತ್ತಿದ್ದಾರೆ. ಸರ್ಟಿಫಿಕೇಟ್ ಇಲ್ಲದವರನ್ನು ಸಿಬ್ಬಂದಿ ವಾಪಾಸ್ ಕಳುಹಿಸುತ್ತಿದ್ದಾರೆ. ಇದನ್ನೂ ಓದಿ: ಕೊರೊನಾ ಮನುಷ್ಯರಿಂದ ಪ್ರಾಣಿಗಳಿಗೆ ಹರಡುತ್ತದೆ – ಸಂಶೋಧನಾ ವರದಿ
Advertisement
ಬೇರೆ ಯಾರದ್ದೋ ಲಸಿಕೆಯ ರಿಪೋರ್ಟ್ ತೋರಿಸಿ ಬರುವುದರಿಂದ ಸರ್ಕಾರ ನೀಡಿದ ಯಾವುದಾದರೊಂದು ಗುರುತಿನ ಚೀಟಿಯೂ ಕಡ್ಡಾಯಗೊಳಿಸಿದೆ. ಇದರಿಂದಾಗಿ ಐಡಿ ಕಾರ್ಡ್ ನಲ್ಲಿರುವ ಹೆಸರಿನ ಜೊತೆಗೆ ವ್ಯಾಕ್ಸಿನೇಷನ್ ರಿಪೋರ್ಟ್ ನಲ್ಲಿರುವ ಹೆಸರು ಎರಡನ್ನು ಪರಿಶೀಲಿಸುತ್ತಿದ್ದಾರೆ. ಸರ್ಟಿಫಿಕೇಟ್ ಇಲ್ಲದೇ ಇರುವವರು ಹೊರಗಡೆ ನಿಂತಿದ್ದಾರೆ.