ರಾಜಧಾನಿಯ 20 ಏರಿಯಾಗಳು ಕೊರೊನಾ ಹಾಟ್‍ಸ್ಪಾಟ್

Public TV
3 Min Read
Seal Down 1

-ಡೆಡ್ಲಿ ಸೋಂಕು ತಡೆಗೆ ಏರಿಯಾಗಳು ಸೀಲ್‍ಡೌನ್!

ಬೆಂಗಳೂರು: ರಾಜ್ಯದಲ್ಲಿ ಮೊದಲು ಕೊರೊನಾ ಪ್ರಕರಣ ಶುರುವಾಗಿದ್ದೇ ಬೆಂಗಳೂರಿನಿಂದ. ವಿದೇಶದಿಂದ ಬಂದವರಿಂದ ಶುರುವಾದ ಕೊರೊನಾ ಸೋಂಕು, ಇವತ್ತು 70 ಜನರಿಗೆ ಹರಿಡಿದೆ. ಈ ಮೂಲಕ ರಾಜ್ಯದ ನಂಬರ್ ಒನ್ ಕೊರೊನಾ ಹಾಟ್‍ಸ್ಪಾಟ್ ಆಗಿ ಬೆಂಗಳೂರು ಬದಲಾಗಿದೆ.

ಈಗಾಗಲೇ ಕರ್ನಾಟಕದ 18 ಜಿಲ್ಲೆಗಳನ್ನ ಕೊರೊನಾ ಹಾಟ್‍ಸ್ಪಾಟ್‍ಗಳು ಅಂತ ಗುರುತಿಸಲಾಗಿದೆ. ಅದರಲ್ಲಿ ಬೆಂಗಳೂರು ನಂಬರ್ ಒನ್ ಸ್ಥಾನದಲ್ಲಿದ್ದು, 70 ಮಂದಿ ಕೊರೊನಾ ಪೀಡಿತರಾಗಿದ್ದಾರೆ. ಒಂದು ಹಂತದಲ್ಲಿ ಬೆಂಗಳೂರಲ್ಲಿ ಕೊರೊನಾ ಅಬ್ಬರ ಕಡಿಮೆಯಾಗಿತ್ತು. ಆದರೆ ಜಮಾತ್ ತಬ್ಲಿಘಿಗಳಿಂದಲೇ ಸೋಂಕಿತರ ಸಂಖ್ಯೆ ಹೆಚ್ಚಾಯ್ತು. ಪರಿಣಾಮ ರಾಜಧಾನಿಯ 20 ಏರಿಯಾಗಳು ಕೊರೊನಾ ಹಾಟ್‍ಸ್ಪಾಟ್‍ಗಳಾಗಿ ಬದಲಾಗಿವೆ.

Seal Down 8

ಅತಿ ಹೆಚ್ಚು ಕೊರೊನಾ ಸೋಂಕಿತರಿರೋದು ಬೆಂಗಳೂರು ದಕ್ಷಿಣ ವಲಯದ ಜೆಪಿನಗರ, ಜಯನಗರ, ಬಸವನಗುಡಿ, ವಿಜಯನಗರ, ಮೂಡಲಪಾಳ್ಯ, ನಾಗರಭಾವಿ, ಹಂಪಿನಗರ, ಬಾಪೂಜಿನಗರ, ಬಿಟಿಎಂ ಲೇಔಟ್, ಕೋರಮಂಗಲ, ಆಡುಗೋಡಿ, ಬನಶಂಕರಿ, ಪದ್ಮನಾಭನಗರ ಸೇರಿ ಒಟ್ಟು 13 ಕಡೆ 15 ಜನ ಸೋಂಕಿತರಿದ್ದಾರೆ. ಇದರಲ್ಲಿ ಸದ್ಯ ಬಾಪೂಜಿನಗರವನ್ನ ಸೀಲ್‍ಡೌನ್ ಮಾಡಲಾಗಿದೆ.

Seal Down 12

ತಬ್ಲಿಘಿಗಳಿಂದ ಬೆಂಗಳೂರು ಪಶ್ಚಿಮ ವಲಯಕ್ಕೆ ಕಂಟಕ ಉಂಟಾಗಿದ್ದು, ಈ ವ್ಯಾಪ್ತಿಯಲ್ಲಿ ಬರೋ ಪಾದರಾಯನಪುರವನ್ನು ಸೀಲ್ ಮಾಡಲಾಗಿದೆ. ಪೊಲೀಸರು ಗಲ್ಲಿಗಲ್ಲಿಗಳನ್ನು ಬಂದ್ ಮಾಡಿದ್ದಾರೆ. ಪಾದರಾಯನಪುರ ಅಷ್ಟೇ ಅಲ್ಲ, ಸದಾಶಿವನಗರ, ಮತ್ತಿಕೆರೆ, ಮಲ್ಲೇಶ್ವರಂ, ನಂದಿನಿ ಲೇಔಟ್, ರಾಜಾಜಿನಗರ, ಮಹಾಲಕ್ಷ್ಮಿ ಲೇಔಟ್, ಗಾಂಧಿನಗರ, ಬಸವೇಶ್ವರನಗರ, ಜೆಜೆ ನಗರ, ನಾಯಂಡಹಳ್ಳಿಯಲ್ಲಿಲಾಕ್‍ಡೌನ್ ನಿಯಮವನ್ನ ಕಠಿಣಗೊಳಿಸಲಾಗಿದೆ.

Seal Down 10

ದಕ್ಷಿಣ ನಂತರ ಪೂರ್ವ ವಲಯದಲ್ಲಿ 14 ಮಂದಿ ಕೊರೊನಾ ಸೋಂಕಿತರಿದ್ದಾರೆ. ಸಂಜಯ ನಗರ, ಆರ್.ಟಿ.ನಗರ ಹೆಬ್ಬಾಳ, ಕಮ್ಮನಹಳ್ಳಿ, ನಾಗಾವಾರ, ಕೆಜಿ ಹಳ್ಳಿ, ಡಿಜೆಹಳ್ಳಿ, ಬಾಣಸವಾಡಿ, ಜೆಸಿನಗರ, ಇಂದಿರಾನಗರ, ಸಿವಿರಾಮನ್ ನಗರ, ಜೆಬಿ ನಗರ, ಶಾಂತಿನಗರ, ಶಿವಾಜಿನಗರ, ವಸಂತನಗರ, ನೀಲಸಂದ್ರ ಬಡವಾಣೆಯ ಜನರು ಆತಂಕದಲ್ಲಿದ್ದಾರೆ. ಇವಿಷ್ಟು ನಗರಗಳು ದಕ್ಷಿಣ ಪೂರ್ವ ವಲಯದಲ್ಲಿದ್ದು, ಲಾಕ್‍ಡೌನ್ ಬಿಗಿ ಗೊಳಿಸಲಾಗಿದೆ. 227 ರಸ್ತೆಗಳನ್ನು ಕಂಪ್ಲೀಟ್ ಬಂದ್ ಮಾಡಲಾಗಿದೆ.

Seal Down 9

ಲಾಕ್ ಡೌನ್ ಬಗ್ಗದ ಜನ್ರಿಗೆ ಬಿಸಿ ಮುಟ್ಟಿಸಲು ಮುಂದಾದ ಈಶಾನ್ಯ ವಿಭಾಗದ ಪೊಲೀಸರು, ಸೋಂಕು ತಡೆಗೆ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ. ಸ್ಟೇ ಅಟ್ ಹೋಂ ಅಂತ ಹೇಳಿದರೂ ರಸ್ತೆಗೆ ಇಳಿದ ಸಾವಿರಕ್ಕೂ ಹೆಚ್ಚು ಬೈಕ್‍ಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಅದರ ಹೊರತಾಗಿಯೂ ಜನರು ರಸ್ತೆಗೆ ಬರ್ತಿರೋದ್ರಿಂದ 200 ರಸ್ತೆಗಳನ್ನ ಸೀಲ್‍ಡೌನ್ ಮಾಡಲಾಗಿದೆ. ಅಗತ್ಯ ವಸ್ತುಗಳನ್ನ ಮಾರ್ಗವನ್ನ ಹೊರತುಪಡಿಸಿ ಉಳಿದ ರಸ್ತೆಗಳನ್ನ ಸಂಪೂರ್ಣವಾಗಿ ಸೀಲ್‍ಡೌನ್ ಮಾಡಲಾಗಿದೆ.

Seal Down 7

ಕೇವ; ಇವಷ್ಟೇ ಅಲ್ಲ, ನೀವು ಇರೋ ಏರಿಯಾದಲ್ಲೂ ಸೀಲ್‍ಡೌನ್ ಆಗಬಹುದು. ನಿಮ್ಮ ಮನೆಯ ಹತ್ತಿರವೇ ಡೇಂಜರ್ ಝೋನ್ ಇರಬಹುದು. ಮುಂದೊಂದು ದಿನ ಸೀಲ್ ಡೌನ್ ಆಗಲಿರುವ ಆ ಏರಿಯಾಗಳು ಯಾವುವು ಎಂಬುದರ ಪಟ್ಟಿ ಇಲ್ಲಿದೆ.

1. ಬೊಮ್ಮನಹಳ್ಳಿ – 4 (ಎಚ್‍ಎಸ್‍ಆರ್ ಲೇಔಟ್, ಬೊಮ್ಮನಹಳ್ಳಿ, ಉತ್ತರಹಳ್ಳಿ, ಪುಟ್ಟೇನಹಳ್ಳಿ)
2. ಯಲಹಂಕ – 2 (ಥಣಿಸಂದ್ರ, ಜಕ್ಕೂರು, ಯಲಹಂಕ, ಕೋಗಿಲುಕ್ರಾಸ್, ಬ್ಯಾಟರಾಯನಪುರ, ವಿದ್ಯಾರಣ್ಯಪುರ, ಕೊಡಿಗೇಹಳ್ಳಿ)
3. ಆರ್‍ಆರ್‍ ನಗರ – 1 (ಜಾಲಹಳ್ಳಿ, ಜೆಪಿ ಪಾರ್ಕ್, ರಾಜರಾಜೇಶ್ವರಿನಗರ, ಕೆಂಗೇರಿ)
3. ಮಹದೇವಪುರ – 10 (ಕೆ.ಆರ್ ಪುರ, ಹೂಡಿ, ದೇವಸಂದ್ರ, ಎ.ನಾರಾಯಣಪುರ, ವೈಟ್‍ಫೀಲ್ಡ್, ಬೆಳ್ಳಂದೂರು, ವರ್ತೂರು)
4. ಬೆಂಗಳೂರು ಹೊರವಲಯ – 3

Seal Down 5

ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ ನಾಲ್ವರಿಗೆ, ಯಲಹಂಕ ವ್ಯಾಪ್ತಿಯಲ್ಲಿ ಇಬ್ಬರಿಗೆ, ಆರ್‍ಆರ್ ನಗರದಲ್ಲಿ ಒಬ್ಬರಿಗೆ, ಮಹದೇವಪರ ವಲಯದಲ್ಲಿ 10 ಮಂದಿಗೆ ಕೊರೋನಾ ಸೋಂಕು ಹರಡಿದೆ. ಇತ್ತ ಬೆಂಗಳೂರು ಹೊರವಲಯದಲ್ಲಿ ಮೂವರು ಕೊರೊನಾದಿಂದ ಬಳಲುತ್ತಿದ್ದಾರೆ. ಹೀಗಾಗಿ ಈ ಏರಿಯಾಗಳಲ್ಲೂ ಲಾಕ್‍ಡೌನ್‍ನ್ನು ಬಿಗಿಗೊಳಿಸಲಾಗಿದೆ. ಒಟ್ಟಾರೆ ಕೊರೊನಾ ತನ್ನ ಕಬಂಧ ಬಾಹುಗಳನ್ನ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಹಬ್ಬಿಸ್ತಾ ಇದೆ.

Share This Article
Leave a Comment

Leave a Reply

Your email address will not be published. Required fields are marked *