– ಸೋಮವಾರ ರಾಜ್ಯದಲ್ಲಿ ಎಲ್ಲೆಲ್ಲಿ ಎಷ್ಟು ಮಳೆ?
ಬೆಂಗಳೂರು: ರಾಜಧಾನಿಯಲ್ಲಿ ಮುಂಗಾರು ಚುರುಕು ಪಡೆದುಕೊಂಡಿದ್ದು, ಕಳೆದ ಎರಡು-ಮೂರು ದಿನಗಳಲ್ಲಿ ತಂಪಾದ ವಾತಾವರಣ ಇದೆ. ಕೂಲ್ ವೆದರ್ ಜೊತೆಗೆ ಸಾಧಾರಣ ಮಳೆಯಾಗುತ್ತಿದೆ.
Advertisement
ಮುಂದಿನ ನಾಲ್ಕು ದಿನ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಬಹುತೇಕ ಜಿಲ್ಲೆಗಳಲ್ಲಿ ಗುಡುಗು ಮಿಂಚು, ಗಾಳಿ ಸಹಿತ ಭಾರೀ ಮಳೆಯಾಗಲಿದೆ. ಉತ್ತರ ಒಳನಾಡು, ದಕ್ಷಿಣ ಒಳನಾಡು ಜಿಲ್ಲೆಗಳಿಗೂ ಮಳೆ ಅಲರ್ಟ್ ಇದೆ. ಇದನ್ನೂ ಓದಿ: KRS ಡ್ಯಾಂನಿಂದ ನಾಲೆಗಳಿಗೆ ನೀರು ಬಿಡುಗಡೆ ಮುಂದೂಡಿಕೆ
Advertisement
Advertisement
ಬೆಂಗಳೂರಿನಲ್ಲಿ ಮೂರ್ನಾಲ್ಕು ದಿನ ಮೋಡ ಕವಿದ ವಾತವರಣ ಮುಂದುವರಿದಿದೆ. ನಗರದಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಚಿಕ್ಕಮಗಳೂರು, ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ ಜಿಲ್ಲೆಗಳಲ್ಲಿ ಇಂದು ಮಳೆ ಎಚ್ಚರಿಕೆ ನೀಡಲಾಗಿದೆ. 30-40 ಕಿಮೀ ವೇಗದಲ್ಲಿ ಗಾಳಿ ಸಹಿತ ಮಳೆಯಾಗಲಿದೆ. ಗರಿಷ್ಠ- 27°ಸಿ , ಕನಿಷ್ಠ 21° ತಾಪಮಾನವಿರಲಿದೆ.
Advertisement
ನಿನ್ನೆ ಬೆಂಗಳೂರಿನಾದ್ಯಂತ ಭಾರೀ ಮಳೆಯಾಗಿತ್ತು. ನಗರದ ಯಲಹಂಕ ಹಾಗೂ ದಾಸರಹಳ್ಳಿಯಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಇಂದು ಕೂಡ ನಗರದಲ್ಲಿ ಮಳೆ ಸಾಧ್ಯತೆ ಇದೆ. ಜುಲೈ 12ರ ವರೆಗೆ ನಗರದಲ್ಲಿ ಮಳೆ ಮುನ್ಸೂಚನೆ ನೀಡಲಾಗಿದೆ. ಇದನ್ನೂ ಓದಿ: Karnataka Rain Alert: ಬೆಂಗ್ಳೂರಲ್ಲಿ ಬಿಟ್ಟೂಬಿಡದ ಮಳೆ – ಬೋಟ್‌ಗಳಲ್ಲಿ ಜನ, ಸಾಕುಪ್ರಾಣಿಗಳ ರಕ್ಷಣೆ; ಎಲ್ಲೆಲ್ಲಿ ಏನಾಯ್ತು?
ನಿನ್ನೆ ಎಲ್ಲೆಲ್ಲಿ ಎಷ್ಟೆಷ್ಟು ಮಳೆ?
ಯಲಹಂಕ : 22.40 mm
ದಾಸರಹಳ್ಳಿ : 22.25 mm
ಪಶ್ಚಿಮ ವಲಯ : 15.81 mm
ಪೂರ್ವ ವಲಯ : 11.50 mm
ಉತ್ತರ ವಲಯ : 10.74 mm
ಮಹಾದೇವಪುರ : 8.55 mm
ಬೊಮ್ಮನಹಳ್ಳಿ : 7.04 mm
ದಕ್ಷಿಣ ವಲಯ : 6.90 mm
ರಾಜ್ಯದಲ್ಲಿ ನಿನ್ನೆ ಎಲ್ಲೆಲ್ಲಿ ಎಷ್ಟೆಷ್ಟು ಮಳೆ?
ಬಜ್ಪೆ (ಮಂಗಳೂರು) : 98.9 mm
ಪಣಂಬೂರು (ಮಂಗಳೂರು) : 64.7 mm
ಕಾರವಾರ : 8.6 mm
ಶಿರಾಲಿ : 20.0 mm
ಹೊನ್ನಾವರ : 41.0 mm
ಬೆಳಗಾವಿ : 5.0 mm
ಗದಗ : 8.6 mm
ಧಾರವಾಡ : 1.8 mm
ವಿಜಯಪುರ : 13.4 mm
ಕಲಬುರಗಿ : 22.0 mm
ಚಿತ್ರದುರ್ಗ : 3.4 mm
ಬೆಂಗಳೂರು : 22.3 mm
ಬೆಂಗಳೂರು KIA : 4.5 mm
ಬೆಂಗಳೂರು HAL : 10.3 mm
ಮಂಡ್ಯ : 1.0 mm
ದೊಡ್ಡಬಳ್ಳಾಪುರ : 2.5 mm
ಮೂಡಿಗೆರೆ : 13.5 mm
ದಾವಣಗೆರೆ : 3.5 mm
ಹಾಸನ : 1.0 mm
ಗೋಣಿಕೊಪ್ಪಲು : 8.0 mm
ಗಂಗಾವತಿ : 6.5 mm
ಆಗುಂಬೆ : 55.5 mm
ಔರಾದ್ : 6.5 mm
ಮಂಗಳೂರು : 31.0 mm
ಚಾಮರಾಜನಗರ : 2.5 mm
ರಾಮನಗರ : 0.5 mm