ಬೆಂಗಳೂರು: ಬಿಜೆಪಿ ಸರ್ಕಾರ ಉರುಳಿಸಲು ಬಿಡಲ್ಲ ಅನ್ನೋ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೊಸ ಟಾರ್ಗೆಟ್ ರೂಪಿಸಿದ್ದು, ಈ ಮೂಲಕ ಸಿದ್ದರಾಮಯ್ಯಗೆ ಪಾಠ ಕಲಿಸೋಕೆ ಮುಂದಾಗಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ಉಪಚುನಾವಣೆ ಟಾರ್ಗೆಟ್ ಅಸ್ತ್ರ ರೆಡಿ ಮಾಡಿದ್ದಾರೆ. ಈ ಟಾರ್ಗೆಟ್ ರೀಚ್ ಆದರೆ ಸಿದ್ದರಾಮಯ್ಯ ಸಿಎಂ ಆಸೆ ಭಗ್ನ ಆಗೋದು ಗ್ಯಾರಂಟಿ. ಟಾರ್ಗೆಟ್ ಯಶಸ್ವಿಯಾಗೋಕೆ ಕುಮಾರಸ್ವಾಮಿ ಸಿದ್ಧತೆ ಆರಂಭ ಮಾಡಿಕೊಂಡಿದ್ದಾರೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
Advertisement
Advertisement
ಉಪ ಚುನಾವಣೆಯಲ್ಲಿ ಕುಮಾರಸ್ವಾಮಿ 4 ಟಾರ್ಗೆಟ್ ಇಟ್ಟುಕೊಂಡಿದ್ದಾರೆ. 15 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ರು 4 ಕ್ಷೇತ್ರಗಳ ಮೇಲೆ ಮಾತ್ರ ಹೆಚ್‍ಡಿಕೆ ಕಣ್ಣಿಟ್ಟಿದ್ದಾರೆ. 4 ಕ್ಷೇತ್ರದಲ್ಲಿ ಪ್ರಬಲ ಪೈಪೋಟಿ ನೀಡಿ ಉಳಿದ ಕ್ಷೇತ್ರಗಳಲ್ಲಿ ಪರೋಕ್ಷವಾಗಿ ಬಿಜೆಪಿ ಬೆಂಬಲ ಕೊಡೋಕೆ ಪ್ಲಾನ್ ಮಾಡಿಕೊಂಡಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಸಿಎಂ ಆಸೆಗೆ ತಣ್ಣೀರು ಎರಚೋಕೆ ಹೆಚ್‍ಡಿಕೆ ಐಡಿಯಾ ಹುಡುಕಿದ್ದಾರೆ.
Advertisement
ಜೆಡಿಎಸ್ ಪ್ರಬಲ ಸಂಘಟನೆ ಇರೋ ಕ್ಷೇತ್ರಗಳಿಗೆ ಮಾತ್ರ ಹೆಚ್‍ಡಿಕೆ ಒತ್ತು ನೀಡಲಿದ್ದಾರೆ. ಹುಣಸೂರು, ಮಹಾಲಕ್ಷ್ಮಿ ಲೇಔಟ್, ಕೆ.ಆರ್.ಪೇಟೆ, ಯಶವಂತಪುರವನ್ನು ಮಾತ್ರ ಕುಮಾರಸ್ವಾಮಿ ಟಾರ್ಗೆಟ್ ಮಾಡಲಿದ್ದಾರೆ. ಉಳಿದ ಕ್ಷೇತ್ರಗಳಲ್ಲಿ ಅಭ್ಯರ್ಥಿ ಹಾಕಿ ಪರೋಕ್ಷವಾಗಿ ಬೆಂಬಲ ನೀಡೋ ಮೂಲಕ ಬಿಜೆಪಿ ಜೊತೆ ಉತ್ತಮ ಸಂಬಂಧ ಬೆಳೆಸಿಕೊಳ್ಳುವ ಯೋಜನೆ ಹಾಕಿದ್ದಾರೆ.
Advertisement
ಭವಿಷ್ಯದಲ್ಲಿ ಬಿಜೆಪಿ ಜೊತೆಗೆ ದೋಸ್ತಿಗೂ ಹೆಚ್‍ಡಿಕೆ ಪ್ಲಾನ್ ಮಾಡಿದ್ದಾರೆ. ಹೆಚ್ ಡಿಕೆ ಪ್ಲಾನ್ ವರ್ಕೌಟ್ ಆದರೆ ಸಿದ್ದರಾಮಯ್ಯ ಸಿಎಂ ಆಸೆ ಕ್ಲೋಸ್ ಆಗಲಿದೆ. ಇತ್ತ ಬಿಜೆಪಿ ಸರ್ಕಾರವೂ ಸೇಫ್, ಬಿಜೆಪಿ ಜೊತೆ ದೋಸ್ತಿ ಆಫರ್ ನೀಡಲು ಸುಲಭವಾಗುತ್ತದೆ. ಒಟ್ಟಿನಲ್ಲಿ ಒಂದೇ ಕಲ್ಲಲ್ಲಿ ಮೂರು ಹಕ್ಕಿ ಹೊಡೆಯೋಕೆ ಕುಮಾರಸ್ವಾಮಿ ಮಾಸ್ಟರ್ ಪ್ಲಾನ್ ಮಾಡಿಕೊಂಡಿದ್ದು, ದಳಪತಿ ಟಾರ್ಗೆಟ್ ಅಸ್ತ್ರ ಯಶಸ್ವಿಯಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.