– ಟಗರು ಟಾರ್ಗೆಟ್‍ಗೆ ಆಪ್ತರಲ್ಲೇ ಅಪಸ್ವರ
ಬೆಂಗಳೂರು: ಕಾಂಗ್ರೆಸ್ಸಿನಲ್ಲಿ ಪವರ್‌ಫುಲ್ ಆಗಲು ಸಿದ್ದರಾಮಯ್ಯ ಮಾಸ್ಟರ್ ಪ್ಲಾನ್ ಮಾಡಿದ್ದು, ಸಿಎಂ ಪಟ್ಟಕ್ಕೇರಲು ಈಗಿನಿಂದಲೇ ಸಿದ್ದರಾಮಯ್ಯ ಭರ್ಜರಿ ತಯಾರಿ ಮಾಡಿಕೊಂಡಿದ್ದಾರೆ. ತಮ್ಮ ಟಾರ್ಗೆಟ್ ಗಾಗಿ ಜೊತೆಗಿದ್ದ ಇಬ್ಬರಿಗೆ ಕೈ, ಮತ್ತಿಬ್ಬರಿಗೆ ಜೈ ಎಂದಿದ್ದಾರೆ. ಸಿದ್ದು ಚದುರಂಗದಾಟಕ್ಕೆ ಆಪ್ತ ವಲಯದಲ್ಲೇ ಅಪಸ್ವರ ಕೇಳಿಬಂದಿದೆ.
Advertisement
ಶೀಘ್ರವಾಗಿ ಕಾಂಗ್ರೆಸ್ ಹೈಕಮಾಂಡ್ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡೋದು ಖಚಿತವಾಗಿದೆ. ಡಿ.ಕೆ.ಶಿವಕುಮಾರ್ ಬರುವಷ್ಟರಲ್ಲಿ ಕೆಪಿಸಿಸಿಗೆ ನೂತನ ಸಾರಥಿ ತರಬೇಕು ಅನ್ನೋದು ಸಿದ್ದರಾಮಯ್ಯರ ಗುರಿಯಾಗಿದೆ. ಅದಕ್ಕಾಗಿ ತಮ್ಮ ಆಪ್ತರಾದ ಕೃಷ್ಣ ಬೈರೇಗೌಡ ಹಾಗೂ ಈಶ್ವರ್ ಖಂಡ್ರೆ ಇಬ್ಬರಿಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಭರವಸೆ ಕೊಟ್ಟಿದ್ದಾರೆ. ಒಕ್ಕಲಿಗರ ಕೋಟವಾದರೆ ಕೃಷ್ಣಬೈರೇಗೌಡ, ಲಿಂಗಾಯತರ ಕೋಟವಾದರೆ ಈಶ್ವರ್ ಖಂಡ್ರೆ ಆಗಲಿ ಅಂತ ಇಬ್ಬರಿಗೂ ಮಾಜಿ ಸಿಎಂ ಭರವಸೆ ನೀಡಿದ್ದಾರೆ. ಈ ವಿಷಯ ತಿಳಿದು ಆಕಾಂಕ್ಷಿ ಎಂ.ಬಿ ಪಾಟೀಲ್ ಕೆಂಡಾಮಂಡಲವಾಗಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
Advertisement
Advertisement
ಪ್ರತ್ಯೇಕ ಧರ್ಮದ ವಿಚಾರ ಮುಂತಾದ ಸಂದರ್ಭದಲ್ಲಿ ಸಿದ್ದರಾಮಯ್ಯ ಜೊತೆ ನಿಂತವನು ನಾನು ಆದರೆ ತಮ್ಮ ನಿರೀಕ್ಷೆಯ ಕೆಪಿಸಿಸಿ ಹುದ್ದೆ ಖಂಡ್ರೆ ಪಾಲಾದರೆ ಹೇಗೆ ಅನ್ನೋದು ಎಂಬಿಪಿ ಸಿಟ್ಟಿಗೆ ಕಾರಣವಾಗಿದೆ. ಇನ್ನೊಂದು ಕಡೆ, ಪ್ರತಿ ಹಂತದಲ್ಲೂ ಸಿದ್ದರಾಮಯ್ಯ ಪರ ನಿಂತರೂ ತಮ್ಮ ಸ್ಥಾನಕ್ಕೆ ಬೇರೆಯವರನ್ನ ತಂದು ಕೂರಿಸಲು ಮುಂದಾಗಿದ್ದಾರೆ ಹೊರತು ತಮ್ಮ ಹಿತ ಕಾಯುತ್ತಿಲ್ಲ ಎಂದು ಹಾಲಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಹ ರಾಂಗ್ ಆಗಿದ್ದಾರೆ.
Advertisement
ಹೀಗೆ ಸಿದ್ದರಾಮಯ್ಯ ಡಿಕೆಶಿಯನ್ನ ಟಾರ್ಗೆಟ್ ಮಾಡಿಕೊಂಡು ಕೃಷ್ಣಬೈರೇಗೌಡ ಹಾಗೂ ಈಶ್ವರ್ ಖಂಡ್ರೆಗೆ ಭರವಸೆ ನೀಡಿದ್ದಾರೆ. ಇದು ಎಂ.ಬಿ ಪಾಟೀಲ್ ಹಾಗೂ ದಿನೇಶ್ ಗುಂಡೂರಾವ್ ಅಸಮಾಧಾನಕ್ಕೆ ಕಾರಣವಾಗಿದೆ.