ಬೆಂಗಳೂರು: ಅಧಿಕಾರ ಹೋದರೂ ಬಂಗಲೆ ಮೇಲೆ ಮಾತ್ರ ಸಿದ್ದರಾಮಯ್ಯ ಅವರಿಗೆ ಪ್ರೀತಿ ಕಡಿಮೆ ಆಗಿಲ್ಲ. ಇದಕ್ಕೆ ಸಾಕ್ಷಿ ಮಾಜಿ ಮುಖ್ಯಮಂತ್ರಿಗಳು ತಮ್ಮ ಲಕ್ಕಿ ನಿವಾಸ ‘ಕಾವೇರಿ’ಯನ್ನು ಬಿಟ್ಟು ಕೊಡಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಸಮ್ಮಿಶ್ರ ಸರ್ಕಾರ ಬಿದ್ದು ಒಂದೂವರೆ ತಿಂಗಳಾದರೂ ಸಿದ್ದರಾಮಯ್ಯ ಅವರು ಕುಮಾರಕೃಪಾ ರಸ್ತೆಯಲ್ಲಿರುವ ಕಾವೇರಿ ನಿವಾಸವನ್ನು ಬಿಡುತ್ತಿಲ್ಲ. ತಾವು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಕಾವೇರಿ ಬಂಗಲೆಗೆ ಬಂದಿದ್ದರು. ಹೀಗೆ ಬಂದವರು ಸತತ ಆರೂವರೆ ವರ್ಷಗಳಿಂದ ಕಾವೇರಿಯಲ್ಲೇ ನೆಲೆಸಿದ್ದಾರೆ. ಇದನ್ನೂ ಓದಿ: ಕೊನೆಗೂ ಬಿಎಸ್‍ವೈಗೆ ಲಕ್ಕಿ ಸರ್ಕಾರಿ ಬಂಗಲೆ ಬಿಟ್ಟು ಕೊಟ್ಟ ಸಾರಾ ಮಹೇಶ್
Advertisement
Advertisement
ಸಮ್ಮಿಶ್ರ ಸರ್ಕಾರ ಇದ್ದಾಗ ಕೆ.ಜೆ ಜಾರ್ಜ್ ಅವರಿಗೆ ಈ ಕಾವೇರಿ ಬಂಗಲೆ ನೀಡಲಾಗಿತ್ತು. ಆದರೆ ಜಾರ್ಜ್ ಅವರು ಸಿದ್ದರಾಮಯ್ಯ ಮೇಲಿನ ಪ್ರೀತಿಗೆ ಬಂಗಲೆ ಬಿಟ್ಟು ಕೊಟ್ಟಿದ್ದರು. ಇತ್ತ ಎಚ್.ಡಿ ಕುಮಾರಸ್ವಾಮಿ ಕೂಡ ಸಿದ್ದರಾಮಯ್ಯಗೆ ಬಂಗಲೆ ಖಾಲಿ ಮಾಡೋಕೆ ಒತ್ತಡ ಹಾಕಿರಲಿಲ್ಲ. ಆದರೆ ಇದೀಗ ಸಮ್ಮಿಶ್ರ ಸರ್ಕಾರ ಪತನ ಆದದೂ ಸಿದ್ದರಾಮಯ್ಯ ಅವರು ಬಂಗಲೆ ಮಾತ್ರ ಖಾಲಿ ಮಾಡಿಲ್ಲ.
Advertisement
ಸಿಎಂ ಆಗಿದ್ದಾಗ ಹಾಗೂ ಡಿಸಿಎಂ ಆಗಿದ್ದಾಗಲೂ ಸಿದ್ದರಾಮಯ್ಯ ಕಾವೇರಿ ನಿವಾಸದಲ್ಲಿಯೇ ಇದ್ದರು. ಸದ್ಯ ಅಧಿಕೃತವಾಗಿ ವಿಪಕ್ಷ ನಾಯಕ ಸ್ಥಾನ ಸಿಗುವುದು ಖಚಿತವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಲಕ್ಕಿ ಹೌಸ್ `ಕಾವೇರಿ’ ಬಿಟ್ಟುಕೊಡಲು ಸಿದ್ದರಾಮಯ್ಯ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.
Advertisement
ಸೋಮವಾರವಷ್ಟೇ ಮಾಜಿ ಡಿಸಿಎಂ ಪರಮೇಶ್ವರ್ ಮನೆ ಖಾಲಿ ಮಾಡುವುದಕ್ಕೆ ಬಿಡಿಎ ನೊಟೀಸ್ ಕೊಟ್ಟಿದೆ. ಈಗ ಸಿದ್ದರಾಮಯ್ಯ ಬಂಗಲೆ ಖಾಲಿ ಮಾಡೋಕೆ ಲೋಕೋಪಯೋಗಿ ಇಲಾಖೆ ನೊಟೀಸ್ ಕೊಡುತ್ತಾ ಎಂಬುದನ್ನು ಕಾದು ನೋಡಬೇಕು.