– ರಾಜೀವ್ ಗಾಂಧಿ ದೇಶಕ್ಕೆ ಉತ್ತಮ ಅಡಿಪಾಯ ಹಾಕಿದ್ರು
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ತಮ್ಮನ್ನು ರಾಜೀವ್ ಗಾಂಧಿಯವರು ಕೊರಿಯಾಗೆ ಕಳುಹಿಸಿದ ಸ್ವಾರಸ್ಯಕರ ಕಥೆಯೊಂದನ್ನು ಇಂದು ಬಿಚ್ಚಿಟ್ಟರು.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಕೊರಿಯಾಗೆ ಹೋಗಲು ನನ್ನನ್ನು ರಾಜೀವ್ ಗಾಂಧಿ ಸೆಲೆಕ್ಟ್ ಮಾಡಿದ್ದರು. ಆಗ ನಮ್ಮ ರಾಜ್ಯದ 5 ಮಂದಿ ಸಂಸದರು ನನ್ನ ವಿರುದ್ಧ ಇವನು ಗೂಂಡಾ ಅವರನ್ನು ಕಳಿಸಬೇಡಿ ಅಂತ ರಾಜೀವ್ ಗಾಂಧಿಗೆ ದೂರು ಹೇಳಿದ್ರು. ಆಗ ರಾಜೀವ್ ಗಾಂಧಿಯವರು ನನ್ನ ಬಗ್ಗೆ ಮಾಹಿತಿ ತರಿಸಿಕೊಂಡು ವಿವಾದಿತ ವ್ಯಕ್ತಿಗಳೇ ಮುಂದೆ ಬೆಳೆಯೋದು ಅಂತ ದೂರು ಕೊಟ್ಟವರಿಗೆ ಹೇಳಿ ನನ್ನನ್ನ ಕೊರಿಯಾಗೆ ಕಳಿಸಿದ್ರು ಎಂದು ಸ್ವಾರಸ್ಯಕರವಾದ ಕಥೆಯನ್ನು ಹೇಳಿದರು.
Advertisement
Advertisement
ವಿರೇಂದ್ರ ಪಾಟೀಲ್ ಅವರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸಬೇಕು ಅಂತ ರಾಜೀವ್ ಗಾಂಧಿಗೆ ಇರಲಿಲ್ಲ. ವೀರೇಂದ್ರ ಪಾಟೀಲ್ ಅವ್ರ ಆರೋಗ್ಯ ಸರಿ ಇಲ್ಲದ ಕಾರಣ ಆ ನಿರ್ಧಾರ ತೆಗೆದುಕೊಂಡ್ರು. ನಂತರ ಬಂಗಾರಪ್ಪ ಅವರನ್ನ ಸಿಎಂ ಮಾಡಿದರು. ಬಂಗಾರಪ್ಪ ಅವ್ರಿಗೆ ನಿಮ್ಮ ಕ್ಯಾಬಿನೆಟ್ ನಲ್ಲಿ ಪ್ರತಿ ಜಾತಿ, ವರ್ಗದಿಂದ ಒಬ್ಬೊಬ್ಬರಿಗೆ ಯುವಕರಿಗೆ ಅವಕಾಶ ಕೊಡಬೇಕು ಅಂತ ಹೇಳಿದ್ರು. ಆಗ ನಾನು ಕೂಡ ಮಂತ್ರಿ ಆದೆ ಎಂದರು. ಇದನ್ನೂ ಓದಿ: ವಧು, ವರರಿಗೆ ಪೆಟ್ರೋಲ್ ಗಿಫ್ಟ್ ಕೊಟ್ಟ ಹಾಸ್ಯ ನಟ
Advertisement
Advertisement
ರಾಜೀವ್ ಗಾಂಧಿ ಪ್ರಧಾನಿ ಆದ ಮೇಲೆ 63 ಜನಕ್ಕೆ ಮೊದಲ ಬಾರಿಗೆ ಯುವಕರಿಗೆ ಟಿಕೆಟ್ ಕೊಟ್ಟರು. ಯುವಕರಿಗೆ ಶಕ್ತಿ ತಂದು ಕೊಟ್ಟವರೇ ರಾಜೀವ್ ಗಾಂಧಿ. ಯುವಕರಿಗೆ 18 ವರ್ಷಕ್ಕೆ ಮತದಾನದ ಹಕ್ಕನ್ನು ಕೊಟ್ಟಾಗ ಭಾರೀ ವಿರೋಧ ಮಾಡಿದರು. ಆದರೂ ಮತದಾನದ ಹಕ್ಕನ್ನು ಯುವಕರಿಗೆ ಕೊಟ್ಟರು. ರಾಜೀವ್ ಗಾಂಧಿಯವರು ಪಂಚಾಯ್ತಿಯಲ್ಲಿ ಮೀಸಲಾತಿ ಕೊಟ್ಟವರು. ದೂರಸಂಪರ್ಕದಲ್ಲಿ ಕ್ರಾಂತಿ ಮಾಡಿದವರು. ಕಂಪ್ಯೂಟರ್ ಕ್ರಾಂತಿ ಮಾಡಿದರು. ಹೊಸ ಶಿಕ್ಷಣ ನೀತಿ ತಂದರು. ಒಟ್ಟಿನಲ್ಲಿ ಈ ದೇಶಕ್ಕೆ ಉತ್ತಮ ಅಡಿಪಾಯವನ್ನು ರಾಜೀವ್ ಗಾಂಧಿ ಹಾಕಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: 48 ವರ್ಷಗಳಾದ್ರೂ ಲಕ ಲಕ ಹೊಳೆಯುತ್ತಿದೆ ದೇವರಾಜ ಅರಸು ಬಳಸಿದ ಬೆಂಜ್ ಕಾರು
ಇತ್ತೀಚೆಗೆ ಒಂದು ಸಮೀಕ್ಷೆ ಬಂದಿದೆ. ಮೋದಿ ಅವ್ರ ಜನಪ್ರಿಯತೆ ಇಂದು ಕಡಿಮೆ ಆಗಿದೆ. ಈಗ ನಿಮ್ಮ ಮನೆ ಬಾಗಿಲಿಗೆ ಅವಕಾಶ ಬಂದಿದೆ. ಅದನ್ನ ನಾವೆಲ್ಲ ಬಳಸಿಕೊಳ್ಳಬೇಕು. ಹೊಸ ಯುಗ ಬಂದಿದೆ. ನಾವೆಲ್ಲ ಒಟ್ಟಾಗಿ ಕೆಲಸ ಮಾಡೋಣ. ನಾವೆಲ್ಲ ಕಾರ್ಯಕರ್ತರಾಗಿ ದುಡಿಯೋಣ. ಯಾರೂ ಇಲ್ಲಿ ನಾಯಕರಲ್ಲ. ಮೊದಲು ನಾವು ಕಾರ್ಯಕರ್ತರು. ಕಾರ್ಯಕರ್ತರಾಗಿ ಕೆಲಸ ಮಾಡೋಣ. ಪಕ್ಷವನ್ನ ಅಧಿಕಾರಕ್ಕೆ ತರಲು ಕೆಲಸ ಮಾಡೋಣ. ಮುಂದೆ ಸ್ವಾತಂತ್ರ್ಯ ಹೋರಾಟಗಾರರು, ಕೋವಿಡ್ ನಿಂದ ಸತ್ತವರ ಮನೆಗೆ ಹೋಗೋಣ. ಮುಂದಿನ ಅಧಿವೇಶನ ದಲ್ಲಿ ಕೋವಿಡ್ ನಿಂದ ಸತ್ತವರ ಪರ ಹೋರಾಡ ಕೆಲಸ ಮಾಡೋಣ. ಬಿಜೆಪಿ ಸರ್ಕಾರ ಒಂದೇ ಒಂದು ಜನ ಪರ ಕೆಲಸ ಮಾಡಿಲ್ಲ. ಜನರಿಗೆ ಲಸಿಕೆ, ಬೆಡ್, ಔಷಧಿ ಕೊಡಲು ಆಗದ ಈ ಸರ್ಕಾರ ಕಿತ್ತು ಹಾಕಬೇಕು. ಈ ನಿಟ್ಟಿನಲ್ಲಿ ನಾವೆಲ್ಲರು ಕೆಲಸ ಮಾಡಬೇಕು. ಬ್ಲ್ಯಾಕ್ ಮಟ್ಟದಲ್ಲಿ ಎಲ್ಲರೂ ಕೆಲಸ ಮಾಡಬೇಕು ಎಂದು ಇದೇ ವೇಳೆ ಡಿಕೆಶಿ ಕರೆ ನೀಡಿದರು.
ಇದೇ ವೇಳೆ ಪೊಲೀಸರಿಗೆ ಎಚ್ಚರಿಕೆ ಕೊಟ್ಟ ಡಿಕೆಶಿ, ಪೊಲೀಸರು ನಮಗೆ ಕಾರ್ಯಕ್ರಮ ಮಾಡಲು ಅವಕಾಶ ಕೊಡಲ್ಲ ಅಂದ್ರು. ಬಿಜೆಪಿಯವರು ಜನಾಶೀರ್ವಾದ ಯಾತ್ರೆ ಮಾಡ್ತಿದ್ದಾರೆ. ಅವ್ರಿಗೊಂದು ನಿಯಮ ನಮಗೊಂದು ನಿಯಮನಾ?, ಜನಾಶೀರ್ವಾದ ಯಾತ್ರೆಯಲ್ಲಿ ಎಸ್ಪಿ ಇದ್ದರು ಗುಂಡು ಹಾರಿಸಿದ್ರು. 3 ಜನ ಪೇದೆಗಳನ್ನ ಸಸ್ಪೆಂಡ್ ಮಾಡಿದ್ರು. ಸಿಎಂ ಅವ್ರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಎಂತಹ ದೊಡ್ಡ ಸಾಧನೆ ಮಾಡಿದ್ದಾರೆ. ಪೊಲೀಸರು ಹೀಗೆ ಮಾಡಿದ್ರೆ ನಾವು ಪೊಲೀಸರ ವಿರುದ್ಧವೇ ಹೋರಾಟ ಮಾಡಬೇಕಾಗುತ್ತೆ. ಒಬ್ಬೆ ಒಬ್ಬ ನಾಯಕರನ್ನು ಪೊಲೀಸರು ಬಂಧನ ಮಾಡಿಲ್ಲ. ಇದ್ಯಾವ ನ್ಯಾಯ. ಹೀಗೆ ಮಾಡಿದ್ರೆ ಪೊಲೀಸರ ವಿರುದ್ಧ ಪ್ರತಿಭಟನೆ ಮಾಡಬೇಕಾಗುತ್ತೆ ಎಂದರು.