ಬೆಂಗಳೂರು: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ರಾಜ್ಯದ ತಮ್ಮ ನಂಬಿಕಸ್ಥ ಬಂಟ ಮಾಜಿ ಡಿಸಿಎಂ ಪರಮೇಶ್ವರ್ ರಿಂದ ಸೀಕ್ರೆಟ್ ರಿಪೋರ್ಟ್ ತರಿಸಿಕೊಳ್ಳಲು ಮುಂದಾಗಿದ್ದಾರೆ. ಇದರ ಭಾಗವಾಗಿಯೇ ಶನಿವಾರ ಪರಮೇಶ್ವರ್ ನಿವಾಸದಲ್ಲಿ 21 ಹಿರಿಯ ನಾಯಕರ ಸಭೆ ನಡೆದಿದೆ.
ಸಿಎಲ್ ಪಿ ನಾಯಕನ ಸ್ಥಾನ, ವಿಪಕ್ಷ ನಾಯಕನ ಸ್ಥಾನ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಎಲ್ಲದರ ಆಯ್ಕೆಗೂ ಒಬ್ಬರ ಸ್ಥಾನಮಾನವನ್ನ ಇನ್ನೊಬ್ಬರು ತಪ್ಪಿಸಲು ರಾಜ್ಯ ಕಾಂಗ್ರೆಸ್ ನಾಯಕರುಗಳು ಭರ್ಜರಿ ಲಾಬಿ ಮಾಡುತ್ತಿದ್ದಾರೆ. ಇದರಿಂದ ಅಸಮಾಧಾನಗೊಂಡ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ತಮ್ಮ ನಂಬಿಕೆಯ ನಾಯಕ ಪರಮೇಶ್ವರ್ ಗೆ ನೀವೇ ಎಲ್ಲಾ ನಾಯಕರ ಜೊತೆ ಸಭೆ ನಡೆಸಿ ಸಭೆಯ ರಿಪೋರ್ಟ್ ಕೊಡಿ ಅಂತ ಕೇಳಿದ್ದಾರೆ.
Advertisement
Advertisement
ಸಭೆಯಲ್ಲಿ ನಾಯಕರುಗಳು ವ್ಯಕ್ತಪಡಿಸಿದ ಅಭಿಪ್ರಾಯವನ್ನ ಯಥಾವತ್ತಾಗಿ ಹೈಕಮಾಂಡ್ ಗೆ ಪರಮೇಶ್ವರ್ ವರದಿ ಮಾಡಲಿದ್ದಾರೆ. ಇದನ್ನೂ ಓದಿ: ನಂಬಿಕಸ್ಥ ಬಂಟನ ಮೊರೆ ಹೋದ ಸೋನಿಯಾ ಗಾಂಧಿ
Advertisement
ನಾಯಕರುಗಳ ಅಭಿಪ್ರಾಯ ಕುರಿತ ವರದಿ ಆಧರಿಸಿ ಹೈಕಮಾಂಡ್ ರಾಜ್ಯದಲ್ಲಿ ಸೂಕ್ತ ಸ್ಥಾನಮಾನ ನೀಡಲಿದೆ. ನಿನ್ನೆಯ ಸಭೆಯಲ್ಲಿನ ನಾಯಕರ ಅಭಿಪ್ರಾಯದ ಸೀಕ್ರೆಟ್ ರಿಪೋರ್ಟ್ ಶೀಘ್ರವಾಗಿ ಸೋನಿಯಾ ಗಾಂಧಿ ಕೈ ಸೇರಲಿದೆ. ರಾಜ್ಯ ಕಾಂಗ್ರೆಸ್ ನಾಯಕರ ಭವಿಷ್ಯ ಪರಮೇಶ್ವರ್ ಸೀಕ್ರೆಟ್ ರಿಪೋರ್ಟ್ ಮೇಲೆ ನಿಂತಿದೆ.