ಬೆಂಗಳೂರು: ವಿಪಕ್ಷ ನಾಯಕ ಹಾಗೂ ಸಿಎಲ್‍ಪಿ ನಾಯಕನ ಸ್ಥಾನಕ್ಕೆ ಇಂದು ಅಧಿಕೃತವಾಗಿ ಹೆಸರು ಪ್ರಕಟಗೊಳ್ಳುವ ಸಾಧ್ಯತೆ ಇದೆ. ಆದರೆ ರಾಜ್ಯ ಕಾಂಗ್ರೆಸ್ ಪಾಲಿಗೆ ನಾನೇ ಪ್ರಶ್ನಾತೀತ ನಾಯಕ ಅಂತ ಕಳೆದ 11 ವರ್ಷ ಅಧಿಕಾರ ಅನುಭವಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಇಂದು ಶಾಕ್ ಟ್ರೀಟ್‍ಮೆಂಟ್ ಗ್ಯಾರಂಟಿ ಎಂದು ಕಾಂಗ್ರೆಸ್ ಮೂಲಗಳು ಹೇಳುತ್ತಿವೆ.
ವಿರೋಧ ಪಕ್ಷ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಎರಡೂ ಸ್ಥಾನ ಬೇರೆ ಮಾಡಬೇಡಿ ಎಂದಿದ್ದ ಸಿದ್ದರಾಮಯ್ಯಗೆ ಕಾಂಗ್ರೆಸ್ ಹೈಕಮಾಂಡ್ ಶಾಕ್ ಕೊಡೋದು ಗ್ಯಾರಂಟಿಯಾಗಿದೆ. ವಿರೋಧ ಪಕ್ಷದ ನಾಯಕನ ಸ್ಥಾನ ಸಿದ್ದರಾಮಯ್ಯಗೆ ನೀಡಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸ್ಥಾನ ಬೇರೆಯವರಿಗೆ ನೀಡುವುದು ಬಹುತೇಕ ಖಚಿತವಾಗಿದೆ.
Advertisement
Advertisement
ವಿರೋಧ ಪಕ್ಷದ ನಾಯಕರೇ ಬೇರೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರೇ ಬೇರೆ ಎಂದು ಕಾಂಗ್ರೆಸ್ ಹೈಕಮಾಂಡ್ ಘೋಷಿಸಿದರೆ ಯಾವುದೇ ಅನುಮಾನ ಬೇಡ. ಸಿದ್ದರಾಮಯ್ಯಜೀ ನಿಮಗೆ ಗೌರವದ ವಿದಾಯಕ್ಕೆ ಇದು ಸೂಕ್ತ ಸಮಯ ಅಂತ ಸ್ವತಃ ಹೈಕಮಾಂಡ್ ಸಿದ್ದರಾಮಯ್ಯಗೆ ಪರೋಕ್ಷ ಸಂದೇಶ ರವಾನಿಸಿದೆ. ಈ ಮೂಲಕ ಕಳೆದ 11 ವರ್ಷದ ಸಿದ್ದರಾಮಯ್ಯರ ಏಕಮೇವ ಚಕ್ರಾಧಿಪತ್ಯಕ್ಕೆ ಇದು ಕೈ ಹೈಕಮಾಂಡ್ ನೀಡುವ ರೆಡ್ ಸಿಗ್ನಲ್ ಅನ್ನೋದು ಸ್ಪಷ್ಟವಾಗಿದೆ.