ಬೆಂಗಳೂರು: ರಾಜ್ಯದಲ್ಲಿ ತಮ್ಮದೇ ಸರ್ಕಾರ ಇದ್ದರೂ ಕೇವಲ ಒಂದು ಸ್ಥಾನ ಗೆದ್ದ ಕಾಂಗ್ರೆಸ್ ಪಕ್ಷಕ್ಕೆ ಪುನಶ್ಚೇತನ ಕೊಡಲು ಕಾಂಗ್ರೆಸ್ ಹೈ ಕಮಾಂಡ್ ಮುಂದಾಗಿದೆ. ರಾಜ್ಯ ಉಸ್ತುವಾರಿ ಬದಲಾವಣೆ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಚಿಂತನೆ ಆರಂಭವಾಗಿದೆ ಎಂಬುದಾಗಿ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭ್ಯವಾಗಿದೆ.
Advertisement
ಕೆಪಿಸಿಸಿಯ ಜವಾಬ್ದಾರಿ ಹೊರಲು ಟ್ರಬಲ್ ಶೂಟರ್ ಡಿ.ಕೆ ಶಿವಕುಮಾರ್ ಸೂಕ್ತ ಅನ್ನೋದು ಹೈ ಕಮಾಂಡ್ ನಂಬಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಹೈಕಮಾಂಡ್ ನೇರವಾಗಿ ಡಿ.ಕೆ ಶಿವಕುಮಾರ್ ಬಳಿ ಮಾತನಾಡಿದೆ. ಈ ಮೂಲಕ ಪರೋಕ್ಷವಾಗಿ ವಿಷಯ ಡಿಕೆಶಿ ಕಿವಿಗೆ ತಲುಪಿಸುವ ಪ್ರಯತ್ನ ನಡೆದಿದೆ. ಆದರೆ ಇದಕ್ಕೆ ಒಪ್ಪದ ಡಿಕೆಶಿ ಸದ್ಯಕ್ಕೆ ಯಾವುದೆ ಜವಾಬ್ದಾರಿ ಬೇಡ ಎಂದಿದ್ದಾರೆ ಎಂದು ತಿಳಿದುಬಂದಿದೆ.
Advertisement
Advertisement
ಸದ್ಯಕ್ಕೆ ಯಾವುದೇ ಚುನಾವಣೆ ಇಲ್ಲ. ಆದ್ದರಿಂದ ಪಕ್ಷದ ನೇತೃತ್ವ ವಹಿಸುವಂತಹ ಮಹತ್ತರ ಜವಾಬ್ದಾರಿ ಈಗ ಬೇಡ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಅಲ್ಲದೆ ತಮ್ಮದೇ ಆದ ಕೆಲವು ಸಮಸ್ಯೆಗಳಿವೆ. ಆದ್ದರಿಂದ ಬೇಡವೆಂದು ಹೇಳಿದ್ದಾರೆ ಎನ್ನಲಾಗಿದೆ.
Advertisement
ಐಟಿ, ಇಡಿ ಸಂಕಷ್ಟದಲ್ಲಿರುವ ಡಿಕೆಶಿಗೆ ಸದ್ಯಕ್ಕೆ ಯಾವುದೇ ಜವಾಬ್ದಾರಿ ಬೇಡ ಅನ್ನಿಸಿದ್ಯಾ ಗೊತ್ತಿಲ್ಲ. ಆದರೆ ಸದ್ಯದ ಮಟ್ಟಿಗೆ ಪಕ್ಷದ ಜವಾಬ್ದಾರಿ ಬೇಡ. ಸಚಿವನಾಗಿಯೇ ಮುಂದುವರಿಯುತ್ತೇನೆ ಎಂದಿದ್ದಾರೆ.
ಒಂದು ಕಾಲದಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬೇಕೇ ಬೇಕು ಎಂದು ಪಟ್ಟು ಹಿಡಿದಿದ್ದ ಡಿಕೆಶಿ, ಇದೀಗ ಹೈಕಮಾಂಡ್ ಮನಸ್ಸು ಮಾಡಿದರೂ ಸ್ಥಾನ ಬೇಡವೇ ಬೇಡ ಅನ್ನುವ ಮೂಲಕ ಪಕ್ಷದ ನಾಯಕರ ಹುಬ್ಬೇರಿಸುವಂತೆ ಮಾಡಿದ್ದಾರೆ.