ಬೆಂಗಳೂರು: ನಗರದ ಶೇಷಾದ್ರಿಪುರಂನಲ್ಲಿರುವ ಅಪೋಲೋ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಗೆ ಎರಡನೇ ದಿನ ಚಿಕಿತ್ಸೆ ಮುಂದುವರಿದಿದೆ.
ಎದೆನೋವು ಮತ್ತು ಹೈ ಬಿಪಿ ಹಿನ್ನೆಲೆಯಲ್ಲಿ ಡಿಕೆಶಿ ಸೋಮವಾರ ರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದು, ನಿನ್ನೆಯಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಎದೆನೋವು ಕಡಿಮೆ ಆಗಿದೆ. ಹೈ ಬಿಪಿ ಸ್ವಲ್ಪ ಕಂಟ್ರೋಲ್ ಗೆ ಬಂದಿದ್ದು, ಬೆನ್ನು ನೋವಿನ ಸಮಸ್ಯೆ ಹಾಗೆಯೇ ಇದೆ. ಅಲ್ಲದೆ ಎರಡೂ ಕಾಲಿನಲ್ಲಿ ಊತ ಕಾಣಿಸಿಕೊಂಡಿದ್ದು, ಇನ್ನೂ ತಗ್ಗಿಲ್ಲ.
Advertisement
Advertisement
ರಾತ್ರಿ 10 ಗಂಟೆ ಸುಮಾರಿಗೆ ಕುಟುಂಬಸ್ಥರು ಡಿಕೆಶಿ ಆರೋಗ್ಯ ವಿಚಾರಿಸಿದ್ದಾರೆ. ಇಂದು ಸಂಜೆ ಅಥವಾ ನಾಳೆ ಡಿಕೆಶಿ ಡಿಸ್ಚಾರ್ಜ್ ಆಗುವ ಸಾಧ್ಯತೆಗಳಿವೆ.
Advertisement
ಕಳೆದ ಹತ್ತು ದಿನದ ಹಿಂದೆಯಷ್ಟೇ ಡಿಕೆಶಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಬಿಪಿ ಶುಗರ್ ಪರೀಕ್ಷೆಗೆ ಎಂದು ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ದೆಹಲಿಯ ತಿಹಾರ್ ಜೈಲಿನಲ್ಲಿ 48 ದಿನಗಳಿದ್ದ ಡಿ.ಕೆ ಶಿವಕುಮಾರ್ ಅವರು ಅಕ್ಟೋಬರ್ 23ರಂದು ಜಾಮೀನನ ಮೇಲೆ ಹೊರ ಬಂದಿದ್ದರು.
Advertisement
ತಿಹಾರ್ ಜೈಲಿನಲ್ಲಿದ್ದಾಗ ಅನಾರೋಗ್ಯ ಸಮಸ್ಯೆ ಎದುರಿಸಿದ್ದ ಮಾಜಿ ಸಚಿವರಿಗೆ ಆರ್‍ಎಂಎಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಜಾಮೀನು ಪಡೆದು ಅಕ್ಟೋಬರ್ 26ರಂದು ಬೆಂಗಳೂರಿಗೆ ಆಗಮಿಸಿದ್ದ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲಾಗಿತ್ತುಬಳಿಕ ಅವರು ರಾಜ್ಯದ ವಿವಿಧ ಮಠಗಳಿಗೆ ಭೇಟಿ ನೀಡಿ, ಶ್ರೀಗಳ ಆಶೀರ್ವಾದ ಪಡೆದಿದ್ದರು. ಬೆಂಗಳೂರಿಗೆ ಆಗಮಿಸಿದ ದಿನವೇ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದರು.