ಬೆಂಗಳೂರು: ಕಳೆದ ಒಂದು ದಶಕದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೇರಲು ಡಿ.ಕೆ ಶಿವಕುಮಾರ್ ಇನ್ನಿಲ್ಲದ ಕಸರತ್ತು ಮಾಡಿದ್ದರು. ಪ್ರಯತ್ನಿಸಿದಂತೆಲ್ಲ ಅಡೆತಡೆಗಳೆ ಹೆಚ್ಚಿದ್ದವು. ಆದರೆ ಕಳೆದ ಎರಡೂವರೆ ವರ್ಷಗಳಲ್ಲಿ ನಡೆದ ಮಹತ್ವದ ಬೆಳವಣಿಗೆಗಳು ಡಿ.ಕೆ ಶಿವಕುಮಾರ್ ಅವರನ್ನ ಕೆಪಿಸಿಸಿ ಪಟ್ಟದ ಹೆಬ್ಬಾಗಿಲಿಗೆ ತಂದು ನಿಲ್ಲಿಸಿದೆ. ಇಂದು ಸಂಜೆಯೊಳಗೆ ಡಿ.ಕೆ ಶಿವಕುಮಾರ್ ಕೆಪಿಸಿಸಿ ಪಟ್ಟಾಭಿಷೇಕದ ಅಧಿಕೃತ ಪ್ರಕಟಣೆ ಹೊರ ಬೀಳಲಿದೆ. ಕಳೆದ ಎರಡೂವರೆ ವರ್ಷದ ಒಂದೊಂದು ಘಟನೆಯು ಒಂದಿಂದು ಮೈಲಿಗಲ್ಲು. ಅದೇ ಬೆಳವಣಿಗೆ ಇಂದು ಡಿಕೆಶಿಯನ್ನ ಕೈ ಹಿಡಿದು ತಂದು ಕೆಪಿಸಿಸಿ ಪಟ್ಟದ ಮೇಲೆ ಕೂರುವಂತೆ ಮಾಡುತ್ತಿದೆ.
Advertisement
ಕಳೆದ ಎರಡೂವರೆ ವರ್ಷದಲ್ಲಿ ಡನೆದ ಘಟನೆಗಳೇನು?
1) 2017 ಜುಲೈ 29ರಂದು ಗುಜರಾತ್ ಶಾಸಕರಿಗೆ ಡಿಕೆಶಿ ಶೆಲ್ಟರ್
2) 2017 ಆಗಸ್ಟ್ 02 ರಂದು ಶಾಸಕರು ತಂಗಿದ್ದ ರೆಸಾರ್ಟ್ ಮೇಲೆ ಐಟಿ ದಾಳಿ ಡಿಕೆಶಿ ಐಟಿ ವಶಕ್ಕೆ
3) 3 ದಿನಗಳ ಕಾಲ ಡಿಕೆಶಿ ನಿವಾಸದಲ್ಲಿ ಬೀಡು ಬಿಟ್ಟ ಐಟಿ ಅಧಿಕಾರಿಗಳಿಂದ ಡಿಕೆಶಿಗೆ ಡ್ರಿಲ್
4) ಪದೇ ಪದೇ ನೋಟಿಸ್ ಕೊಟ್ಟು ಕಿರಿಕಿರಿ
5) ಇಡಿ ಎಂಟ್ರಿ ಮೂಲಕ ಡಿಕೆಶಿಗೆ ಮತ್ತಷ್ಟು ಸಂಕಷ್ಟ
6) ಹೈ ಕಮಾಂಡ್ ಗೆ ಕಪ್ಪ ಆರೋಪ. ಹವಾಲ ಹಣ ವರ್ಗಾವಣೆ ಆರೋಪ
7) ಡಿಕೆಶಿಯ ಇಡಿ ಕುಟುಂಬವೆ ಇಡಿ ಮುಂದೆ ವಿಚಾರಣೆಗೆ
8) ಈ ಸಂಕಷ್ಟದ ನಡುವೆಯು ಬಳ್ಳಾರಿ ಉಪ ಚುನಾವಣೆ ಹೊಣೆ ಹೊತ್ತು ಗೆಲ್ಲಿಸಿದ ಡಿಕೆಶಿ
9) ಯಾವುದು ಆಗಬಾರದು ಅಂತ ಇನ್ನಿಲ್ಲದ ಪ್ರಯತ್ನ ಅಡಿದ್ದರೊ. ಅದು ಆಗೇ ಬಿಟ್ಟಿತ್ತು.ಇಡಿ ಡಿಕೆಶಿಯನ್ನ ಬಂಧಿಸಿತ್ತು
10) ಬಿಜೆಪಿ ಸೇರ್ಪಡೆಗೆ ಕಾಣದ ಕೈಗಳಿಂದ ಒತ್ತಡ
Advertisement
Advertisement
ಟ್ರಬಲ್ ಶೂಟರ್ ಇಮೇಜ್ ನಡುವೆಯೂ ಕಳೆದ ಒಂದು ದಶಕದಿಂದ ಕೆಪಿಸಿಸಿ ಪಟ್ಟಕ್ಕೇರಲು ಡಿಕೆಶಿ ಇನ್ನಿಲ್ಲದ ಪ್ರಯತ್ನ ಮಾಡಿದ್ದರು. ಆದರೆ ಹೈಕಮಾಂಡ್ ಮಾತು ಕೇಳಿ ಕಳೆದ ಎರಡೂವರೆ ವರ್ಷದಿಂದ ಡಿಕೆಶಿ ಸಂಕಷ್ಟಕ್ಕೆ ಸಿಲುಕಿದ್ದು, ಆ ಸಂಕಷ್ಟದ ಫಲವಾಗಿ ಕೆಪಿಸಿಸಿ ಪಟ್ಟಕ್ಕೆ ಬಂದು ಕೂರುತ್ತಿದ್ದಾರೆ.