ಬೆಂಗಳೂರು: ಆನ್‍ಲೈನ್ ಫುಡ್ ಡೆಲಿವರಿಯಲ್ಲಿ ಕೆಲ ಕಂಪನಿಗಳು 30 ನಿಮಿಷದೊಳಗೆ ಪಿಜ್ಜಾ ಡೆಲಿವರಿ ಮಾಡ್ತೀವಿ ಇಲ್ಲದೇ ಇದ್ರೆ, ಪಿಜ್ಜಾ ಫ್ರೀ ಎನ್ನುವ ಆಫರ್ ಕೊಡುತ್ತಿವೆ. ಇದರಿಂದ ಪ್ರಾಣದ ಹಂಗು ತೊರೆದು ಪಿಜ್ಜಾ ಡೆಲಿವರಿ ಬಾಯ್‍ಗಳು ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಡ್ರೈವಿಂಗ್ ಮಾಡುತ್ತಿದ್ದಾರೆ.
ಇದಕ್ಕೆ ಬೆಂಗಳೂರು ಪೊಲೀಸ್ ಕಮೀಷನರ್ ಭಾಸ್ಕರ್ ರಾವ್ ಟ್ವೀಟ್ ಮೂಲಕ ಈ ಸಮಯವನ್ನು 40 ನಿಮಿಷಕ್ಕೆ ಏರಿಸಿ, ಪ್ರಾಣ ಪಣಕ್ಕಿಟ್ಟು ಡೆಲಿವರಿ ಬಾಯ್‍ಗಳು ಒದ್ದಾಡುತ್ತಾರೆ. ಟ್ರಾಫಿಕ್ ಜಾಮ್‍ನಲ್ಲಿ ಹೇಗೆ ತಾನೇ 30 ನಿಮಿಷಕ್ಕೆ ತಲುಪಿಸುತ್ತಾನೆ ಎಂದು ಕಮೀಷನರ್ ತರಾಟೆಗೆ ತೆಗೆದುಕೊಂಡಿದ್ದಾರೆ.
Advertisement
Do we have the heart to get a free pizza from a kid who is risking his life just because he crossed over 30 mns. Am seriously considering asking Pizza companies to make it 40 mns as these kids risk their lives by breaking all Traffic rules.
— Bhaskar Rao (@Nimmabhaskar22) January 21, 2020
Advertisement
ಭಾಸ್ಕರ್ ರಾವ್ ಅವರ ಟ್ವೀಟ್‍ಗೆ ಸ್ವಿಗ್ಗಿ ಪ್ರತಿಕ್ರಿಯಿಸಿ, ಹಾಗೇನಿಲ್ಲ ಸರ್. ನಾವು ಸಂಚಾರಿ ನಿಯಮವನ್ನು ಪಾಲಿಸುತ್ತೇವೆ. ಯಾರಾದರೂ ಡೆಲಿವರಿ ಬಾಯ್‍ಗಳು ಪಾಲನೆ ಮಾಡದಿದ್ದರೆ ನಮ್ಮ ಸಹಾಯವಾಣಿಗೆ ದೂರು ಕೊಡಿ ಎಂದು ರೀ-ಟ್ವೀಟ್ ಮಾಡಿದ್ದಾರೆ.
Advertisement
Hi there, we understand your concern. We do not condone traffic violations of any nature. If you witness the same, please highlight it to us by contacting us at 080-46866699. Have a good day ahead.
^Meg
— Swiggy Cares (@SwiggyCares) January 21, 2020
Advertisement
ಈ ಟ್ವೀಟ್‍ನಿಂದ ಸಿಟ್ಟಿಗೆದ್ದ ಭಾಸ್ಕರ್ ರಾವ್, ನಿಮ್ಮ ಕಿರಿಕ್‍ನಿಂದಾಗಿ ಡೆಲಿವರಿ ಬಾಯ್‍ಗಳು ನಿಯಮವನ್ನು ಉಲ್ಲಂಘಿಸಿ ಟ್ರಾಫಿಕ್ ಪೊಲೀಸರ ಕೈ-ಕಾಲು ಹಿಡಿದುಕೊಂಡು ಬಿಟ್ಟು ಬಿಡಿ ಸರ್, ಇಲ್ಲದಿದ್ದರೆ ನಮಗೆ ತೊಂದರೆಯಾಗುತ್ತೆ. ಇನ್ ಟೈಂಗೆ ಡೆಲಿವರಿ ಮಾಡಬೇಕು ಎಂದು ಬೇಡಿಕೊಳ್ತಾರೆ. ಸಿಕ್ಕಾಪಟ್ಟೆ ರೂಲ್ಸ್ ಬ್ರೇಕ್ ಮಾಡುವುದು ನಿಮ್ಮ ಡೆಲಿವರಿ ಬಾಯ್ ಗಳೇ, ಯಾರಾದರೂ ಡೆಲಿವರಿ ಬಾಯ್‍ಗೆ ಆಕ್ಸಿಡೆಂಟ್ ಆಗಿ ಸಮಸ್ಯೆಯಾಗಬೇಕು. ಆಗ ನಿಮ್ಮ ಸ್ವಿಗ್ಗಿ ಮ್ಯಾನೇಜ್ ಮೆಂಟ್ ನವರು ಕಂಬಿ ಹಿಂದೆ ಇರಬೇಕಾಗುತ್ತೆ ಎಂದು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಸಾರ್ವಜನಿಕರೂ ಕೂಡ ಸ್ವಿಗ್ಗಿ ಕಂಪನಿಗೆ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
Mr Swiggy Cares, you are the biggest violators and have the temirity to tell me that you adhere to rules, your boys beg cops to let them go as you penalize them, next time a Swiggy kid bleeds on road, be sure, you management will be behind bars.
— Bhaskar Rao (@Nimmabhaskar22) January 21, 2020