– 16 ಕೋಟಿ ರೂ. ಜಿಎಸ್‍ಟಿ ವಂಚನೆ ಆರೋಪ
ಬೆಂಗಳೂರು: ನಗರದ ಚಿಕ್ಕಪೇಟೆ, ರಂಗನಾಥ್ ಮ್ಯಾನಕ್ಷನ್ ಸೇರಿದಂತೆ ಹಲವೆಡೆ 23 ಸಗಟು ಚಿನ್ನಾಭರಣ ವರ್ತಕರ ಶಾಪ್ ಮೇಲೆ ವಾಣಿಜ್ಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಜಿಎಸ್‍ಟಿ ವಂಚನೆ ಹಿನ್ನೆಲೆಯಲ್ಲಿ ಫೆಬ್ರವರಿ 19ರಂದು ಟರ್ಫ್ ಕ್ಲಬ್ ಬುಕ್ಕಿಗಳ ಮೇಲೆ 50 ಮಂದಿ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ತಂಡ ದಾಳಿ ಮಾಡಿ ಹಲವು ದಾಖಲೆಗಳನ್ನು ಪರಿಶೀಲಿಸಿದ್ದರು. ಈ ಬೆನ್ನಲ್ಲೇ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು 23 ಸಗಟು ಚಿನ್ನಾಭರಣ ವರ್ತಕರ ಶಾಪ್ ಮೇಲೆ ದಾಳಿ ಮಾಡಿದ್ದಾರೆ.
Advertisement
Advertisement
ದಾಳಿಯ ವೇಳೆ ವರ್ತಕರು 60 ಕೆಜಿ ಚಿನ್ನಾಭರಣ ದಾಸ್ತಾನು ಮಾಡಿರುವುದು ಪತ್ತೆಯಾಗಿದೆ. ಈ ಮೂಲಕ 16 ಕೋಟಿ ರೂ. ಜಿಎಸ್‍ಟಿ ವಂಚಿಸಿರುವು ಬೆಳಕಿಗೆ ಬಂದಿದೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.
Advertisement
ಫೆಬ್ರವರಿ 19ರಂದು ನಗರದ 20 ಕಡೆ ಏಕಕಾಲದಲ್ಲಿ ಬೆಳಗ್ಗೆ ವಾಣಿಜ್ಯ ತೆರಿಗೆ ಇಲಾಖೆ ಅಪರ ಆಯುಕ್ತ ನಿತೀಶ್ ಪಾಟೀಲ್ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದರು. ಟರ್ಫ್ ಕ್ಲಬ್ ಬುಕ್ಕಿಗಳು ಸರ್ಕಾರಕ್ಕೆ ತೆರಿಗೆ ಕಟ್ಟದೆ ವಂಚಿಸಿದ್ದಾರೆಂಬ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿತ್ತು. ಈ ವೇಳೆ ಬುಕ್ಕಿಗಳಿಂದ ಅಧಿಕಾರಿಗಳು ದಾಖಲೆಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಿದ್ದರು.