ಬೆಂಗಳೂರು: ಟ್ರಾಫಿಕ್ ಸಾರ್ ನಮಗೆ ಕಾಲೇಜ್‍ಗೆ ಬರಕ್ಕಾಗಲ್ಲ ಎಂದು ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸಿಲಿಕಾನ್ ಸಿಟಿಯ ರಾಜರಾಜೇಶ್ವರಿ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದಾರೆ. ನೋಡ ನೋಡುತ್ತಿದ್ದಂತೆ ಇಡೀ ಕಾಲೇಜಿನ ವಿದ್ಯಾರ್ಥಿಗಳೆಲ್ಲ ಧರಣಿಗೆ ಎಂದು ಕ್ಲಾಸ್ ಬಿಟ್ಟು ಬಂದು ಕಾಲೇಜ್ ಮುಂದೆ ಪ್ರತಿಭಟನೆ ಮಾಡಿ ಧಿಕ್ಕಾರ ಕೂಗಿದ್ದಾರೆ.
Advertisement
Advertisement
ಏನ್ರಪ್ಪ ನಿಮ್ ಪ್ರಾಬ್ಲಂ ಎಂದು ಕಾಲೇಜ್ ಆಡಳಿತ ಮಂಡಳಿ ಕೇಳಿದರೆ, ನೋಡಿ ನೀವು ಎಂಟೂವರೆಗೆ ಕ್ಲಾಸ್ ಶುರುಮಾಡಿದ್ದೀರಾ. ಬೆಂಗಳೂರಿನಲ್ಲಿ ಮೊದಲೇ ಟ್ರಾಫಿಕ್ ಹತ್ತು ನಿಮಿಷ ಅರ್ಧಗಂಟೆ ಆ ಕಡೆ ಈ ಕಡೆ ಆದರೆ ಹಾಜರಿ ಕಡಿತವಾಗುತ್ತದೆ. ನಮ್ ಕೈಯಲ್ಲಿ ಈ ಟ್ರಾಫಿಕ್ ಸಮಸ್ಯೆಯಿಂದ ಎಂಟೂವರೆಗೆ ಕ್ಲಾಸಿಗೆ ಬರಲು ಆಗಲ್ಲ. ಈ ರೂಲ್ಸ್ ತಂದ ಪ್ರಾಂಶುಪಾಲರನ್ನು ಮೊದಲು ತೆಗದುಹಾಕಿ ಎಂದು ಗಲಾಟೆ ಮಾಡಿದ್ದಾರೆ.
Advertisement
Advertisement
ಜೊತೆಗೆ ಹಾಸ್ಟೆಲ್ ಊಟ ಸರಿಯಾಗಿಲ್ಲ ಎಂದು ಪ್ರತಿಭಟನೆ ನಡೆಸಿದರು. ನಂತರ ಆಡಳಿತ ಮಂಡಳಿ ವಿದ್ಯಾರ್ಥಿಗಳ ಕ್ಲಾಸ್ ಸಮಯ ಬದಲಾವಣೆಯ ಬೇಡಿಕೆಯ ಬಗ್ಗೆ ಪರಿಶೀಲನೆ ನಡೆಸುತ್ತೇವೆ ಎಂದು ಭರವಸೆ ನೀಡಿದರು. ಈ ವೇಳೆಯೂ ಟ್ರಾಫಿಕ್ ಪ್ರಾಬ್ಲಂ ನಿಮಗೆ ಅರ್ಥವಾಗುವುದಿಲ್ಲ. ಈ ಬೆಂಗಳೂರಿನಲ್ಲಿ ನಾವು ಹೇಗೆ ಇನ್ ಟೈಂಗೆ ಕ್ಲಾಸ್‍ಗೆ ಬರುವುದು ಎಂದು ಪ್ರಶ್ನಿಸಿ ವಿದ್ಯಾರ್ಥಿಗಳು ಗಲಾಟೆ ಮಾಡಿದರು.