ಬೆಂಗಳೂರು: ಬೆಂಗಳೂರಿನ (Bengaluru) ಜನತೆಗೆ ಮತ್ತೊಂದು ಬೆಲೆ ಏರಿಕೆಯ ಶಾಕ್ ಎದುರಾಗಲಿದೆ. ಇದೇ ತಿಂಗಳಿನ ಅಂತ್ಯಕ್ಕೆ ಹೋಟೆಲ್‌ಗಳಲ್ಲಿ (Hotel) ಕಾಫಿ (Coffee) ದರ ಬರೋಬ್ಬರಿ 15% ಏರಿಕೆಯಾಗಲಿದೆ.
ಇದೇ ತಿಂಗಳ ಅಂತ್ಯಕ್ಕೆ ಒಂದು ಕಪ್ ಕಾಫಿ ಬೆಲೆ 5 ರೂ. ಏರಿಕೆಯಾಗುವ ಸಾಧ್ಯತೆ ಇದೆ. ಕಾಫಿ ಪುಡಿ ಬೆಲೆ ಏರಿಕೆ ಮತ್ತು ಹಾಲಿನ ದರ ಏರಿಕೆ ಸಾಧ್ಯತೆ ಹಿನ್ನೆಲೆ, ಕಾಫಿ ದರ ಏರಿಕೆ ಅನಿವಾರ್ಯ ಎಂದು ಹೋಟೆಲ್ ಅಸೋಸಿಯೇಷನ್ ಹೇಳುತ್ತಿದೆ. ಇದನ್ನೂ ಓದಿ : ಡ್ಯಾಡಿನೇ ಮಮ್ಮಿನ ಕೊಂದಿದ್ದು – 4 ವರ್ಷದ ಮಗಳು ಬಿಡಿಸಿದ ಚಿತ್ರದಿಂದ ಬಯಲಾಯ್ತು ತಾಯಿಯ ಕೊಲೆ ರಹಸ್ಯ
ಪ್ರತಿ ಕೆಜಿ ಕಾಫಿಗೆ 800 ರಿಂದ 850 ರೂ. ಇದೆ. ಶೀಘ್ರದಲ್ಲಿಯೇ ಇದರ ಬೆಲೆ 1000 ದಿಂದ 1100ಕ್ಕೆ ಏರಿಕೆ ಆಗುವ ಸಾಧ್ಯತೆ ಇದೆ. ಈ ಬಗ್ಗೆ ರೋಸ್ಟರ್ಸ್ ಅಸೋಸಿಯೇಷನ್ ಮತ್ತು ಕಾಫಿ ಮಂಡಳಿಯ ಅಧಿಕಾರಿಗಳು ಸಭೆ ನಡೆಸಿದ್ದು, ಕಾಫಿ ರೇಟ್ ಕೂಡ 5 ರೂ. ಹೆಚ್ಚಾಗುವ ಮುನ್ಸೂಚನೆ ಸಿಕ್ಕಿದೆ. ರೋಸ್ಟರ್ ಮಾರಾಟ ಮಾಡುವ ಹುರಿದ ಕಾಫಿ ಪುಡಿ ಬೆಲೆ 100 ಹೆಚ್ಚಾಗಲಿದ್ದು, ಮಾರ್ಚ್ ಅಂತ್ಯಕ್ಕೆ ಕೆಜಿಗೆ 100 ರೂ. ಹೆಚ್ಚಳವಾಗಲಿದೆ. ಕರ್ನಾಟಕದಲ್ಲಿ ಸುಮಾರು 500 ರೋಸ್ಟರ್‌ಗಳಿದ್ದು, ಅವುಗಳಲ್ಲಿ 300 ಬೆಂಗಳೂರಿನಲ್ಲಿವೆ. ಕಾಫಿ ಪುಡಿ ಬೆಲೆ ಹೆಚ್ಚಾದರೆ ಹೋಟೆಲ್‌ಗಳಲ್ಲಿ ಕಾಫಿ ದರ ಹೆಚ್ಚಳ ಅನಿರ್ವಾಯ ಎಂದು ಹೋಟೆಲ್ ಮಾಲೀಕರು ಹೇಳುತ್ತಿದ್ದಾರೆ. ಇದನ್ನೂ ಓದಿ : ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರ ಜೊತೆ ಸರ್ಕಾರ ಚೆಲ್ಲಾಟ ಸಲ್ಲದು: ವಿಜಯೇಂದ್ರ ಟೀಕೆ
ಹೋಟೆಲ್‌ಗಳಲ್ಲಿ ಕಾಫಿ ದರ ಎಷ್ಟು ಏರಿಕೆ ಆಗುತ್ತೆ?
*ಸೆಲ್ಫ್ ಸರ್ವಿಸ್ ಹೋಟೆಲ್‌ಗಳಲ್ಲಿ 15 ರಿಂದ 20 ರೂ.
*ಸಿಟಿಂಗ್ ಸರ್ವಿಸ್ ಹೋಟೆಲ್‌ಗಳಲ್ಲಿ 25 ರಿಂದ 30 ರೂ.
*ಎಸಿ ಹೋಟೆಲ್‌ಗಳಲ್ಲಿ 40 ರಿಂದ 50 ರೂ.
*ಸ್ಟಾರ್ ಹೋಟೆಲ್‌ಗಳಲ್ಲಿ 100 ರಿಂದ 150 ರೂ.
ಇದೇ ತಿಂಗಳ ಅಂತ್ಯದಲ್ಲಿ ಹೊಸ ದರ ಪರಿಷ್ಕರಣೆ ಸಾಧ್ಯತೆ ಇದೆ. ಇದನ್ನೂ ಓದಿ : ಅನುಭವಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ: ಛಲವಾದಿ ನಾರಾಯಣಸ್ವಾಮಿ