ಬೆಂಗಳೂರು: ಇಂದು ಇನ್ಫೋಸಿಸ್ ಫೌಂಡೇಶನ್ ವತಿಯಿಂದ ನಿರ್ಮಾಣಗೊಂಡಿರುವ 5 ಶಸ್ತ್ರಚಿಕಿತ್ಸೆ ಕೊಠಡಿಗಳ ಉದ್ಘಾಟನಾ ಕಾರ್ಯಕ್ರಮಕ್ಕೆ ಸಿಎಂ ಆಗಮಿಸಿದ್ದರು. ಈ ವೇಳೆ 6 ವರ್ಷದ ಸೃಜನ್ ಎಂಬ ಪುಟ್ಟ ಬಾಲಕ ಸಿಎಂ ಅವರಿಗೆ ಧನ್ಯವಾದ ಹೇಳಿದ್ದಾನೆ.
16 ತಿಂಗಳ ಮಗುವಾಗಿದ್ದಾಗ ಸೃಜನ್ ಬ್ಲಡ್ ಕ್ಯಾನ್ಸರ್‍ಯಿಂದ ಬಳಲುತ್ತಿದ್ದ. ಚಿಕಿತ್ಸೆಗೆ 30 ಲಕ್ಷ ಖರ್ಚಾಗುತ್ತೆ ಎಂದು ಖಾಸಗಿ ಆಸ್ಪತ್ರೆಗಳು ಹೇಳಿದ್ದವು. ಹಾಗಾಗಿ ಸೃಜನ್ ತಂದೆ ಮೈಸೂರಿನ ಸೋಮಶೇಖರ್ ಸಿಎಂ ಬಳಿ ಸಹಾಯ ಕೇಳಿದ್ದರು. ಇದಕ್ಕೆ ಸ್ಪಂದಿಸಿದ್ದ ಮುಖ್ಯಮಂತ್ರಿಗಳು, ಸೃಜನ್ ಪೋಷಕರನ್ನು ಕಿದ್ವಾಯಿ ಆಸ್ಪತ್ರೆಗೆ ಕಳುಹಿಸಿಕೊಟ್ಟು, ಚಿಕಿತ್ಸೆ ಕೊಡಿಸುವುದಾಗಿ ಭರವಸೆ ನೀಡಿದ್ದರು.
ಸಿಎಂ ಅವರ ಕೊಟ್ಟ ಮಾತಿನಂತೆ ಆ ಮಗುವಿಗೆ ಐದು ವರ್ಷ ಉಚಿತವಾಗಿ ಚಿಕಿತ್ಸೆ ಕೊಡಿಸಿದ್ದಾರೆ. ಇದರಿಂದ ಈಗ ಸೃಜನ್ ಗುಣಮುಖನಾಗಿದ್ದಾನೆ. ಅದ್ದರಿಂದ ಇಂದು ಕಿದ್ವಾಯಿ ಆಸ್ಪತ್ರೆಗೆ ಬಂದಿದ್ದ ಸಿಎಂ ಅವರನ್ನು ವೇದಿಕೆ ಮೇಲೆ ಅವರ ತಂದೆಯ ಜೊತೆ ಭೇಟಿ ಮಾಡಿದ ಸೃಜನ್ ಥ್ಯಾಂಕ್ಯೂ ಸಿಎಂ ಅಂಕಲ್, ನನ್ನ ಪ್ರಾಣ ಉಳಿಸಿದ್ರಿ. ನಮಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಕಮ್ಮಿನೇ ಎಂದು ಸಿಎಂ ಕಾಲಿಗೆ ಬಿದ್ದು ನಮಸ್ಕರಿಸಿದ್ದಾನೆ.
ಮಗುವನ್ನು ಕಂಡು ಖುಷಿ ಪಟ್ಟ ಸಿಎಂ, ಈ ರೀತಿಯ ಸೇವೆಗೆ ನಮ್ಮ ಸರ್ಕಾರವೂ ಸಹಕಾರ ನೀಡಲಿದೆ. ವೇದಿಕೆ ಮೇಲೆ ಒಂದು ಮಗು ನನ್ನ ಮಾತನಾಡಿಸಲು ಬಂದಿತ್ತು. ಈಗಷ್ಟೇ ವೇದಿಕೆ ಮೇಲೆ ಮಾತನಾಡಿಸಿದೆ. ಆ ಮಗು ಚಿಕ್ಕವನಿದ್ದಾಗ ನನ್ನ ಬಳಿ ಚಿಕಿತ್ಸೆಗೆ ಸಹಾಯ ಕೇಳಿಕೊಂಡು ಬಂದಿದ್ದರು. ನಾನು ಅವರಿಗೆ ಕಿದ್ವಾಯಿ ಆಸ್ಪತ್ರೆಗೆ ಹೋಗಲು ಹೇಳಿದ್ದೆ. ಈಗ ಆ ಮಗು ಗುಣಮುಖವಾಗಿದೆ ಎಂದು ಹೇಳಿದರು.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]