ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು 2020-21 ಸಾಲಿನ ಬಜೆಟ್ ಮಂಡನೆ ಮಾಡಿದ್ದಾರೆ. ಇಂದು ಬಜೆಟ್ ಓದುವ ಮೂಲಕ ಸಿಎಂ ಹೊಸ ದಾಖಲೆ ಬರೆದಿದ್ದಾರೆ.
ಹೌದು. ಸಿಎಂ ಬಿಎಸ್‍ವೈ ಅವರು ಇಂದು ಅತಿ ಕಡಿಮೆ ಅವಧಿಯಲ್ಲಿ ಬಜೆಟ್ ಓದಿ ಮುಗಿಸಿದ್ದಾರೆ. ಸಿಎಂ ಅವರು 112 ಪುಟಗಳ ಬಜೆಟ್ ಪುಸ್ತಕ ಓದಲು 1 ಗಂಟೆ 40 ನಿಮಿಷಗಳ ಕಾಲ ತೆಗೆದುಕೊಂಡಿದ್ದಾರೆ. ಈ ಮೂಲಕ ರಾಜ್ಯದ ಆಯವ್ಯಯ ಇತಿಹಾಸದಲ್ಲಿ ಅತಿ ಕಡಿಮೆ ಅವಧಿಗೆ ಬಜೆಟ್ ಓದಿದ ಸಿಎಂ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
Advertisement
Advertisement
ಕಳೆದ ವರ್ಷ ಅಂದರೆ 2019ರ ಫೆಬ್ರವರಿ 8ಕ್ಕೆ ಹೆಚ್.ಡಿ ಕುಮಾರಸ್ವಾಮಿ ಅವರು ಬಜೆಟ್ ಮಂಡನೆ ಮಾಡಿದ್ದರು. ಅಂದು ಹೆಚ್‍ಡಿಕೆ ಅವರು 3 ಗಂಟೆ 10 ನಿಮಿಷಗಳ ಕಾಲ ಬಜೆಟ್ ಓದಲು ತೆಗೆದುಕೊಂಡಿದ್ದರು. ಮಧ್ಯಾಹ್ನ 12.35ಕ್ಕೆ ಕುಮಾರಸ್ವಾಮಿಯವರು ಬಜೆಟ್ ಭಾಷಣ ಆರಂಭಿಸಿ 3.40ಕ್ಕೆ ತಮ್ಮ ಬಜೆಟ್ ಭಾಷಣ ಪೂರ್ಣಗೊಳಿಸಿದ್ದರು. ಕುಮಾರಸ್ವಾಮಿ ಅಂದು ಸತತ 3 ಗಂಟೆ 10 ನಿಮಿಷಗಳ ಕಾಲ ನಿಂತುಕೊಂಡೇ ಬಜೆಟ್ ಭಾಷಣ ಓದಿದ್ದರು. ಈ ಹಿನ್ನೆಲೆಯಲ್ಲಿ ಬಜೆಟ್ ಮಂಡನೆ ಪೂರ್ಣಗೊಳ್ಳುತ್ತಿದ್ದಂತೆಯೇ ಹೆಚ್‍ಡಿಕೆ ಬಳಿ ಧಾವಿಸಿದ ಆಡಳಿತ ಪಕ್ಷದ ಶಾಸಕರು ಅಭಿನಂದಿಸಿದ್ದರು.
Advertisement
Advertisement
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅಂದ್ರೆ 2018ರಲ್ಲಿ ಫೆಬ್ರವರಿ 16ಕ್ಕೆ 4 ಗಂಟೆ 10 ನಿಮಿಷ ಬಜೆಟ್ ಓದಲು ತೆಗೆದುಕೊಂಡಿದ್ದರು. ಆ ಸಂದರ್ಭದಲ್ಲಿ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು 2,09,181 ಕೋಟಿ ರೂ.ಗಳ ಗಾತ್ರದ ಬಜೆಟ್ ಮಂಡಿಸಿದ್ದ ಅವರು, ಕಳೆದ ಐದು ವರ್ಷಗಳಲ್ಲಿ ತಮ್ಮ ಸರ್ಕಾರದ ಸಾಧನೆಗಳ ವರದಿ ಒಪ್ಪಿಸಿದ್ದರು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ 6ನೆಯ ಹಾಗೂ ಹಣಕಾಸು ಸಚಿವರಾಗಿ 13ನೇ ಬಜೆಟ್ ಅನ್ನು ಜನತೆಯ ಮುಂದೆ ತೆರೆದಿಟ್ಟಿದ್ದರು.