ಬೆಂಗಳೂರು: ಅಮೆರಿಕದಲ್ಲಿ ಕೊರೊನಾ ಸೋಂಕಿತರ ಸೇವೆ ಸಲ್ಲಿಸಿ ಮನೆಗೆ ಮರಳಿದ ಮೈಸೂರು ಮೂಲದ ವೈದ್ಯೆ ಉಮಾ ಮಧುಸೂದನ್ ಅವರಿಗೆ ವಿಶೇಷ ಗೌರವ ಸಿಕ್ಕಿದ್ದು, ಈ ಕುರಿತು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಎಸ್‍ವೈ, ಕನ್ನಡ ನಾಡಿನ ಹಿರಿಮೆ ಸಾರುತ್ತಿರುವ ಹೆಣ್ಣುಮಗಳನ್ನು ಅಭಿನಂದಿಸುವುದಾಗಿ ಬರೆದುಕೊಂಡಿದ್ದಾರೆ.
Advertisement
ದೂರದ ಅಮೆರಿಕೆಯಲ್ಲಿ ಕೊರೊನಾ ಪೀಡಿತರಿಗೆ ಚಿಕಿತ್ಸೆ ನೀಡುತ್ತಿರುವ ಮೈಸೂರು ಮೂಲದ ಕನ್ನಡತಿ ಡಾ.ಉಮಾ ಮಧುಸೂದನ್ ಅಲ್ಲಿನ ಜನರ ಹಾಗೂ ಸರಕಾರದ ಮೆಚ್ಚುಗೆಗೆ ಪಾತ್ರರಾಗಿ ‘ಡ್ರೈವ್ ಆಫ್ ಹಾನರ್ ‘ ವಿಶೇಷ ಗೌರವ ಪಡೆದು ಕೊಳ್ಳುತ್ತಿದ್ದಾರೆ.
ಸೇವೆ,ಸಮರ್ಪಣೆ ನಮ್ಮ ಕನ್ನಡನಾಡಿನ ಹಿರಿಮೆ ಎಂದು ಸಾರುತ್ತಿರುವ ಈ ಹೆಣ್ಣು ಮಗಳನ್ನು ಅಭಿನಂದಿಸುವೆ.
— B.S.Yediyurappa (@BSYBJP) April 22, 2020
Advertisement
ಟ್ವೀಟ್ ನಲ್ಲೇನಿದೆ..?
ದೂರದ ಅಮೆರಿಕದಲ್ಲಿ ಕೊರೊನಾ ಪೀಡಿತರಿಗೆ ಚಿಕಿತ್ಸೆ ನೀಡುತ್ತಿರುವ ಮೈಸೂರು ಮೂಲದ ಕನ್ನಡತಿ ಡಾ.ಉಮಾ ಮಧುಸೂದನ್ ಅಲ್ಲಿನ ಜನರ ಹಾಗೂ ಸರಕಾರದ ಮೆಚ್ಚುಗೆಗೆ ಪಾತ್ರರಾಗಿ ‘ಡ್ರೈವ್ ಆಫ್ ಹಾನರ್’ ವಿಶೇಷ ಗೌರವ ಪಡೆದು ಕೊಳ್ಳುತ್ತಿದ್ದಾರೆ. ಸೇವೆ, ಸಮರ್ಪಣೆ ನಮ್ಮ ಕನ್ನಡನಾಡಿನ ಹಿರಿಮೆ ಎಂದು ಸಾರುತ್ತಿರುವ ಈ ಹೆಣ್ಣು ಮಗಳನ್ನು ಅಭಿನಂದಿಸುವೆ.
Advertisement
ಅಮೆರಿಕ ಓಕ್‍ಲ್ಯಾಂಡ್‍ನ ಸೌತ್ ವಿಂಡ್ಸರ್ ಆಸ್ಪತ್ರೆ ಮತ್ತು ಸ್ಥಳೀಯ ಆಡಳಿತ ಡಾ.ಉಮಾ ಮಧುಸೂದನ್ ಅವರಿಗೆ ಡ್ರೈವ್ ಆಫ್ ಹಾನರ್ ಮೂಲಕ ಗೌರವ ಸಲ್ಲಿಸಲಾಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಎಲ್ಲಡೆಯಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.
Advertisement
Dr Uma Madhusudan, an Indian doctor, was saluted in a unique way in front of her house in USA in recognition of her selfless service treating Covid patients pic.twitter.com/Hg62FSwzsP
— Harsh Goenka (@hvgoenka) April 20, 2020
ವಿಡಿಯೋದಲ್ಲೇನಿದೆ..?
ಈ ವಿಡಿಯೋದಲ್ಲಿ ಡಾ.ಉಮಾ ಮಧುಸೂದನ್ ಅವರ ಮನೆಯ ಮುಂದೆ ಕಾರುಗಳಲ್ಲಿ ನೂರಾರು ಜನರು ಸಾಲು ಸಾಲಾಗಿ ಒಂದು ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಹಾಗೇ ಉಮಾ ಅವರು ಕೂಡ ಕೊರೊನಾ ವಿರುದ್ಧ ಹೋರಾಡಿ ಗೆದ್ದವರಿಗೆ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ.
ಮೈಸೂರು ವೈದ್ಯೆಗೆ ಅಮೆರಿಕದಲ್ಲಿ ವಿಶೇಷ ಗೌರವ .
In recognition of her extraordinary service treating Corona patients in South Windsor Hospital, Dr Uma Madhusudan, a Mysore origin doctor honoured this way infront of her house in USA. You can see her recieving salute!! pic.twitter.com/cqfRNXszLv
— Pratap Simha (@mepratap) April 21, 2020
ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಸಮಾಜದ ನಿಜವಾದ ಸೂಪರ್ ಹೀರೋಗಳಾದ ವೈದ್ಯರು, ವೈದ್ಯಕೀಯ ಸಿಬ್ಬಂದಿ ಪಟ್ಟುಬಿಡದೆ ಕೆಲಸ ಮಾಡುತ್ತಿದ್ದಾರೆ. ಪ್ರಪಂಚದಾದ್ಯಂತದ ಅನೇಕರು ಕೊರೊನಾ ವಾರಿಯರ್ಸ್ ಗಳಿಗೆ ಧನ್ಯವಾದ ಅರ್ಪಿಸುತ್ತಿದ್ದಾರೆ.