– ಪವಿತ್ರ ಕಡ್ತಲ
ಬೆಂಗಳೂರು: ಸ್ಟೀಲ್ ಬ್ರಿಡ್ಜ್‍ಗೆ ತಿಲಾಂಜಲಿ ಇಟ್ಟ ಸರ್ಕಾರ ಸುರಂಗ ಮಾರ್ಗಕ್ಕೆ ಕೈ ಹಾಕಿತ್ತು. ಆದ್ರೆ ಸ್ಟೀಲ್‍ಬ್ರಿಡ್ಜ್ ಗೆ ವಿರೋಧ ವ್ಯಕ್ತಪಡಿಸಿದ ಸೇಮ್ ಟೀಮ್ ಈಗ ಸುರಂಗ ಮಾರ್ಗದ ಬಗ್ಗೆಯೂ ಅಪಸ್ವರವೆತ್ತಿದೆ. ಸಚಿವ ಜಾರ್ಜ್ ಅವರ ಸುರಂಗ ಕನಸು ಭಗ್ನವಾಗುತ್ತಾ ಅನ್ನೋ ಅನುಮಾನ ಮೂಡಿದೆ.
Advertisement
Advertisement
ಸ್ಟೀಲ್ ಬ್ರಿಡ್ಜ್ ಗೆ ಜನರಿಂದ ಹಾಗೂ ಸಿಟಿಜನ್ ಫೋರಂನಿಂದ ವ್ಯಾಪಕ ಹೋರಾಟದ ಬಳಿಕ ಸರ್ಕಾರ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಸ್ಟೀಲ್ ಬಿಟ್ಟು ಏಷ್ಯಾದ ಅತಿ ದೊಡ್ಡ ಸುರಂಗ ಮಾರ್ಗವನ್ನು ರಾಜ್ಯಸರ್ಕಾರ ನಗರದ ನಾಲ್ಕು ಕಡೆ ನಿರ್ಮಾಣ ಮಾಡೋದಕ್ಕೆ ಟೊಂಕ ಕಟ್ಟಿ ನಿಂತಿದೆ. ವಿದೇಶಿ ಕಂಪನಿಗಳು ಭೇಟಿ ನೀಡಿವೆ.
Advertisement
Advertisement
ಆದ್ರೇ ಈಗ ಮತ್ತೆ ಸಚಿವರ ಸುರಂಗ ಕನಸಿಗೆ ಸ್ಟೀಲ್ ಬ್ರಿಡ್ಜ್ ಗೆ ಹಸಿರು ಪೀಠದಲ್ಲಿ ದಾವೆ ಹೂಡಿದ್ದ ಸಿಟಿಜನ್ ಫೋರಂ ಹಾಗೂ ನಮ್ಮ ಬೆಂಗಳೂರು ಫೌಂಡೇಷನ್ ಮತ್ತೆ ರೆಡಿಯಾಗಿದೆ. ಸ್ಟೀಲ್ ಬ್ರಿಡ್ಜ್ ಗೆ ಮರ ಹೋಗುತ್ತೆ ಅಂತಾ ವಿರೋಧ ವ್ಯಕ್ತಪಡಿಸಿದ್ರು. ಹಾಗಿದ್ರೆ ಸುರಂಗಕ್ಕೆ ಯಾಕೀ ಅಡ್ಡಿ ಅಂತಾ ಕೇಳಿದ್ರೆ ಹೋರಾಟಗಾರರ ಉತ್ತರಿಸಿದ್ದು ಹೀಗೆ:
1. ಪ್ರಾಜೆಕ್ಟ್ ಶುರುವಾಗುವ ಮುಂಚೆ ಸಾರ್ವಜನಿಕರಿಗೆ ಸಮಗ್ರ ಮಾಹಿತಿಯನ್ನಾದ್ರೂ ನೀಡಬೇಕಾಗಿತ್ತು.
2. ಇಷ್ಟು ದೊಡ್ಡ ಸುರಂಗ ಮಾರ್ಗ ಮಾಡುವ ಕಾರ್ಯಕ್ಷಮತೆ ನಿಜವಾಗಲೂ ಇದ್ಯಾ?
3. ಇಷ್ಟೆಲ್ಲಾ ಖರ್ಚು ಮಾಡಿ ಟ್ರಾಫಿಕ್ ಕಂಟ್ರೋಲ್ ಎಷ್ಟರಮಟ್ಟಿಗೆ ಆಗುತ್ತೆ, ಈ ಬಗ್ಗೆ ಸರ್ಕಾರ ಮೌನವಾಗಿದೆ
4. ಸರ್ಕಾರ ಸಿಎನ್‍ಆರ್ ರಾವ್ ಅಂಡರ್‍ಪಾಸ್‍ಗೆ ಐದು ವರ್ಷ ತೆಗೆದುಕೊಂಡಿದೆ, ಇನ್ನು ಇದು ಹೆಂಗೋ.
5. ಪಬ್ಲಿಕ್ ಟ್ರಾನ್ಸ್ ಪೋರ್ಟ್‍ನ್ನೇ ಹೆಚ್ಚು ಮಾಡಬಹುದು. ಇದ್ರ ಮಧ್ಯೆ ಈ ಪ್ರಾಜೆಕ್ಟ್ ಯಾಕೆ..?
ಒಟ್ಟಿನಲ್ಲಿ ಸರ್ಕಾರ ಸರಿಯಾದ ಮಾಹಿತಿ ನೀಡದೇ ಏಕಾಏಕಿ ಪ್ರಾಜೆಕ್ಟ್ ಅನುಷ್ಟಾನಕ್ಕೆ ಇಳಿದ್ರೆ ಮತ್ತೆ ಸ್ಟೀಲ್ ಬ್ರಿಡ್ಜ್ ಮಾದರಿ ಹೋರಾಟ ನಡೆಸುವ ಎಚ್ಚರಿಕೆಯನ್ನು ಹೋರಾಟಗಾರರು ನೀಡಿದ್ದಾರೆ. ಇದಕ್ಕೆ ಸರ್ಕಾರದ ಉತ್ತರ ಏನು ಇರುತ್ತೋ ಕಾದು ನೋಡಬೇಕು.