ಬೆಂಗಳೂರು: ರಾಜ್ಯ ಸರ್ಕಾರದ ಆದೇಶದ ಮೇರೆಗೆ ಸಿಐಡಿ ವಿಶೇಷ ತನಿಖಾ ತಂಡದಿಂದ ಮಂಗಳೂರು ಗೋಲಿಬಾರ್ ಬಗ್ಗೆ ತನಿಖೆ ಶುರುವಾಗಿದೆ.
ಸಿಐಡಿಯ ಎಸ್‍ಪಿ ರಾಹುಲ್ ಕುಮಾರ್ ಮತ್ತು ಡಿಎಸ್‍ಪಿ ಬಾಲರಾಜ್ ನೇತೃತ್ವದ ತಂಡದಿಂದ ತನಿಖೆ ಪ್ರಾರಂಭವಾಗಿದೆ. ಪೌರತ್ವ ತಿದ್ದುಪಡಿ ವಿರೋಧಿಸಿ ನಡೆದಿದ್ದ ಭಾರಿ ಪ್ರತಿಭಟನೆ ಗಲಭೆಯಾಗಿ ಪರಿವರ್ತನೆಯಾಗಿತ್ತು. ಡಿಸೆಂಬರ್ 19 ರಂದು ಪೊಲೀಸರು ನಡೆಸಿದ್ದ ಗೋಲಿಬಾರ್ ನಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಅಬ್ದುಲ್ ಜಲೀನ್ ಹಾಗೂ ನೌಶೀನ್ ಗೋಲಿಬಾರ್ ನಲ್ಲಿ ಸಾವನ್ನಪ್ಪಿದ್ದರು.
Advertisement
Advertisement
ಸಾವನ್ನಪ್ಪಿದವರನ್ನು ಸೇರಿಸಿ ಆರೋಪಿಗಳನ್ನಾಗಿಸಿ ಒಟ್ಟು 29 ಮಂದಿಯ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿತ್ತು. ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಗೋಲಿಬಾರ್ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಮಂಗಳೂರಿಗೆ ತೆರಳಿದ ಸಿಐಡಿ ತಂಡ, ಗೋಲಿಬಾರ್ ನಡೆದ ಸ್ಥಳ ಹಾಗೂ ಸಿಸಿಟಿವಿ ಸಾಕ್ಷಿಗಳನ್ನು ಈಗ ಕಲೆ ಹಾಕಿ ತನಿಖೆ ಆರಂಭಿಸಿದೆ.