Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ನಾನು ಈ ರಾಜ್ಯದ ಸಿಎಂ, ವಿಧಾನಸೌಧದಲ್ಲಿ ಕಾರ್ಯಕ್ರಮ ಆಗ್ಬೇಕು – ಆಯುಕ್ತರಿಗೆ ಗದರಿದ್ದಕ್ಕೆ ಭದ್ರತೆ ಎಂದ ಹೆಚ್‌ಡಿಕೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ನಾನು ಈ ರಾಜ್ಯದ ಸಿಎಂ, ವಿಧಾನಸೌಧದಲ್ಲಿ ಕಾರ್ಯಕ್ರಮ ಆಗ್ಬೇಕು – ಆಯುಕ್ತರಿಗೆ ಗದರಿದ್ದಕ್ಕೆ ಭದ್ರತೆ ಎಂದ ಹೆಚ್‌ಡಿಕೆ

Bengaluru City

ನಾನು ಈ ರಾಜ್ಯದ ಸಿಎಂ, ವಿಧಾನಸೌಧದಲ್ಲಿ ಕಾರ್ಯಕ್ರಮ ಆಗ್ಬೇಕು – ಆಯುಕ್ತರಿಗೆ ಗದರಿದ್ದಕ್ಕೆ ಭದ್ರತೆ ಎಂದ ಹೆಚ್‌ಡಿಕೆ

Public TV
Last updated: June 6, 2025 3:24 pm
Public TV
Share
3 Min Read
ashok kumaraswamy Vijayendra
SHARE

– ವಿಧಾನಸೌಧ ಕಾರ್ಯಕ್ರಮಕ್ಕೆ ಆಯುಕ್ತರು ಅನುಮತಿ ಕೊಟ್ಟಿರಲಿಲ್ಲ
– ತೀಟೆ ತೀರಿಸಿಕೊಳ್ಳಲು ಹೋಗಿ ಅಮಾಯಕರು ಬಲಿ
– ಕಾಲ್ತುಳಿತಕ್ಕೆ ಸರ್ಕಾರವೇ ಕಾರಣ

ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತಕ್ಕೆ (Chinnaswamy Stadium Stampede Case) ಸರ್ಕಾರವೇ ನೇರ ಹೊಣೆ ಹೊರಬೇಕು. ಸರ್ಕಾರ ಅನುಮತಿ ನೀಡಿ ಈಗ ಅಧಿಕಾರಿಗಳ ಮೇಲೆ ಎತ್ತಿ ಹಾಕುವ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಸಚಿವ, ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಗಂಭೀರ ಆರೋಪ ಮಾಡಿದ್ದಾರೆ.

ನಗರ ಖಾಸಗಿ ಹೋಟೆಲಿನಲ್ಲಿ ಇಂದು ಎಚ್‌ಡಿ ಕುಮಾರಸ್ವಾಮಿ, ವಿಧಾನಸಭೆಯ ವಿಪಕ್ಷ ನಾಯಕ ಆರ್‌ ಅಶೋಕ್‌ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಕುಮಾರಸ್ವಾಮಿ ಹೇಳಿದ್ದೇನು?
ಆರ್‌ಸಿಬಿ ಗೆದ್ದರೆ ಜೂನ್‌ 4 ರಂದು ಸನ್ಮಾನ ಮಾಡಬೇಕು. ಅದಕ್ಕೆ ಅನುಮತಿ ನೀಡಬೇಕು ಎಂದು ಕೆಎಸ್‌ಸಿಎ (KSCA) ಜೂನ್‌ 3 ರಂದೇ ಕೇಳಿದ ಎಂಬ ವಿಚಾರ ಎಫ್‌ಐಆರ್‌ನಲ್ಲಿ ಇದೆ. ತಂಡಕ್ಕೆ ಸನ್ಮಾನ ಮಾಡಲು ವಿಧಾನಸೌಧದಲ್ಲಿ (Vidhansoudha) ಅನುಮತಿ ಕೊಡಿ ಕೆಎಸ್‌ಸಿಎ ಡಿಪಿಎಆರ್‌ಗೆ ಮನವಿ ಮಾಡಿತ್ತು. ಅಂದರೆ ಎರಡು ಕಡೆ ಕಾರ್ಯಕ್ರಮ ಮೊದಲೇ ನಿರ್ಧಾರವಾಗಿತ್ತು ಎನ್ನುವುದು ದೃಢಪಡುತ್ತದೆ.

“ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಹಾಕಿದಂತೆ!”

ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಇಬ್ಬರೂ ವಿಧಾನಸೌಧದ ಕಾರ್ಯಕ್ರಮ ನಾವೂ ಮಾಡಿದ್ದು, ಚಿನ್ನಸ್ವಾಮಿಯಲ್ಲಿ KSCA ಹಾಗೂ RCB ಅವರು ಮಾಡಿದ್ದರು ಅದು ನಮ್ಮ ಗಮನಕ್ಕೆ ಇರಲಿಲ್ಲ ಎಂದು ಹೇಳಿರುವುದು “ಹಸಿ ಸುಳ್ಳು”.

KSCA ನೇ DPAR ಕಾಯರ್ದರ್ಶಿಗೆ ಬರೆದ ಪತ್ರದಲ್ಲಿ ವಿಧಾನಸೌಧ… pic.twitter.com/iYMd71zIsZ

— Nikhil Kumar (@Nikhil_Kumar_k) June 6, 2025

ಜೂನ್‌ 4 ರಂದು ಸಿಎಂ (CM Siddaramaiah) ಅವರ ರಾಜಕೀಯ ಕಾರ್ಯದರ್ಶಿ ಗೋವಿಂದರಾಜ್‌ ಅವರು ಪೊಲೀಸ್‌ ಆಯುಕ್ತರಿಗೆ ಕರೆ ಮಾಡಿ ವಿಧಾನಸೌಧದ ಕಾರ್ಯಕ್ರಮಕ್ಕೆ ಭದ್ರತೆ ನೀಡಬೇಕು ಎಂದು ಒತ್ತಡ ಹಾಕುತ್ತಾರೆ. ಇದಕ್ಕೆ ಆಯುಕ್ತರು, ಬೆಳಗ್ಗೆಯವರೆಗೆ ಪೊಲೀಸರು ನಿದ್ದೆಗೆಟ್ಟು ಕೆಲಸ ಮಾಡಿದ್ದಾರೆ. ಎರಡು ಮೂರು ಕಡೆ ಕಾರ್ಯಕ್ರಮ ಮಾಡಿದರೆ ಭದ್ರತೆ ನೀಡಲು ಕಷ್ಟವಾಗುತ್ತದೆ. ಒಂದು ಕಡೆ ಕಾರ್ಯಕ್ರಮ ಮಾಡಿ. ವಿಧಾನಸೌಧದ ಕಾರ್ಯಕ್ರಮಕ್ಕೆ ಭದ್ರತೆ ನೀಡಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ.

ಆಯುಕ್ತರ ಪ್ರತಿಕ್ರಿಯೆ ಬಳಿಕ ಗೋವಿಂದರಾಜ್‌ ಅವರು ಸಿಎಂ ಬಳಿಗೆ ಹೋಗುತ್ತಾರೆ. ಸಿಎಂ ಅವರು ಆಯುಕ್ತರನ್ನು ಕರೆಸಿ ನಾನು ಈ ರಾಜ್ಯದ ಸಿಎಂ. ಆದೇಶ ಮಾಡುತ್ತಿದ್ದೇನೆ ಭದ್ರತೆ ಕೊಡಿ ಎಂದು ಸೂಚಿಸುತ್ತಾರೆ. ಅನಿವಾರ್ಯವಾಗಿ ಪೊಲೀಸ್ ಕಮಿಷನರ್ ವಿಧಾನಸೌಧಕ್ಕೆ ಬಿಗಿ ಭದ್ರತೆ ಹಾಕ್ತಾರೆ. ಆದರೆ ಯಾರಿಗೂ ವಿಡಿಯೋ ಕಾನ್ಫರೆನ್ಸ್ ಮೂಲಕ ಸೂಚನೆ ಕೊಟ್ಟಿರುವುದಿಲ್ಲ. ಕಾಟಾಚಾರಕ್ಕೆ ಮೂರ್ನಾಲ್ಕು ತುಕಡಿ ಭದ್ರತೆ ಹಾಕಿರುತ್ತಾರೆ. ವಿಧಾನಸೌಧದಲ್ಲೇ ಕಾರ್ಯಕ್ರಮ ಮಾಡಬೇಕು, ನಾನು ಚಿನ್ನಸ್ವಾಮಿಗೆ ಹೋಗುವುದಿಲ್ಲ ಎಂದು ಸಿಎಂ ಹೇಳಿದ್ದರಿಂದ ಹೆಚ್ಚಿನ ಸಂಖ್ಯೆ ಪೊಲೀಸರನ್ನು ನಿಯೋಜಿಸಲಾಗುತ್ತದೆ.

 

ಇದು ಒಂದು ಭಾಗವಾದರೆ ಇನ್ನೊಂದು ಭಾಗ ಕನಕಪುರದ ಡಿಸಿಎಂ ಅವರದ್ದು. ಅವರು ಕನಕಪುರದ ಯಾವುದೋ ಕೇಸ್‌ ಸಂಬಂಧ ಕೋರ್ಟ್‌ಗೆ ಹಾಜರಾಗಿರುತ್ತಾರೆ.  ಈ ವೇಳೆ ಫೋನ್‌ ಮಾಡಿ ಒಬ್ಬರು ಡಿಸಿಎಂ ಅವರ ಗಮನಕ್ಕೆ ವಿಧಾನಸೌಧದ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡುತ್ತಾರೆ. ಆಗ ಡಿಸಿಎಂ ಕೋರ್ಟ್‌ನಿಂದಲೇ ನೇರವಾಗಿ ಹೆಚ್‌ಎಎಲ್‌ಗೆ ಹೋಗಿ ತಂಡಕ್ಕೆ ಸನ್ಮಾನ ಮಾಡುತ್ತಾರೆ. ಅಲ್ಲಿಂದ ಇವರೇ ಆರ್‌ಸಿಬಿ ಧ್ವಜ ಹಿಡಿದುಕೊಂಡು ನಾನೇ ಗೆಲ್ಲಿಸಿ ಬಂದವರ ಹಾಗೆ ಪೋಸ್ಟ್‌ ಕೊಟ್ಟುಕೊಂಡು ಬರುತ್ತಾರೆ.

ವಿಧಾನಸೌಧದಲ್ಲಿ ಶಾಲು ಮೈಸೂರು ಪೇಟಾ ಇಲ್ಲದೇ ಸನ್ಮಾನ ಮಾಡಿದ್ದಾರೆ. ಕೊನೆಗೆ ಶಾಲು ಇಲ್ಲ ಅಂತ ಪರದಾಡಿ ಅದೇನೋ ಶಾಲು ತಂದು ಬೇಕಾಬಿಟ್ಟಿ ಹಾಕಿದ್ದಾರೆ. ಒಬ್ಬ ಶಾಸಕರನ್ನ ಕತ್ತಿಗೆ ಹಾಕಿ ಡಿಸಿಎಂ ಎಳೆಯುವ ಮೂಲಕ ಭದ್ರತಾ ಕೆಲಸ ಸಹ ಮಾಡುತ್ತಾರೆ. ಈ ಕಾರ್ಯಕ್ರಮ ನಡೆಯುವಾಗಲೇ ಅಭಿಮಾನಿಗಳು ಮೃತಪಟ್ಟ ಸುದ್ದಿ ಬರುತ್ತದೆ. ಆಗಲಾದರೂ ಕಾರ್ಯಕ್ರಮ ಮುಂದೂಡುವ ಯೋಚನೆ ಮಾಡಬೇಕಿತ್ತು. 3-4 ಗಂಟೆ ಹೊತ್ತಿಗೆ ಸಾವಿನ ಸುದ್ದಿ ಬಂದರೂ 6 ಗಂಟೆವರೆಗೆ ಕಾರ್ಯಕ್ರಮ ಮಾಡಿದ್ದಾರೆ. ನಂತರ ಕ್ರೀಡಾಂಗಣಕ್ಕೂ ಹೋಗಿ ಟ್ರೋಫಿಗೆ ಮುತ್ತು ಕೊಟ್ಟು ಬಂದಿದ್ದಾರೆ.

ಎರಡು ಕಡೆ ಕಾರ್ಯಕ್ರಮಕ್ಕೆ ಯಾರ ಅನುಮತಿ ಇತ್ತು? ಅಭಿಮಾನಗಳ ಜೀವದ ಜೊತೆ ಸರ್ಕಾರ ಚೆಲ್ಲಾಟ ಆಡಿದೆ. ಇಷ್ಟೆಲ್ಲ ಸಾವು ನೋವಾದರೂ ಸಂಜೆ ಸಿಎಂ ಮೊಮ್ಮಗನ ಜತೆ ಜನಾರ್ದನ ಹೊಟೇಲಿಗೆ ಮಸಾಲೆ ದೋಸೆ ಸವಿಯಲು ಹೋಗಿದ್ದಾರೆ. ಇದು ಸಿಎಂ ಅವರ ಸತ್ಯಮೇವ ಜಯತೆ. ರಾಜ್ಯ ಸರ್ಕಾರಕ್ಕೆ ಮಾನಮರ್ಯಾದೆ ಇದೆಯಾ? ನಿಮ್ಮ ನಿಮ್ಮ ತೀಟೆ ತೀರಿಸಿಕೊಳ್ಳಲು ಅಮಾಯಕರನ್ನು ಬಲಿಕೊಟ್ಟು ಅಧಿಕಾರಿಗಳನ್ನು ಅಮಾನತು ಮಾಡಿದ್ದೀರಿ ಎಂದು ಕುಮಾರಸ್ವಾಮಿ ಆಕ್ರೋಶ ಹೊರಹಾಕಿದರು.

TAGGED:DK Shivakumarhd kumaraswamyrcbsiddaramaiahಆರ್‍ಸಿಬಿಡಿಕೆ ಶಿವಕುಮಾರ್ಸಿದ್ದರಾಮಯ್ಯ
Share This Article
Facebook Whatsapp Whatsapp Telegram

Cinema news

Gilli Kavya 2
ಕಾವ್ಯನ ಅಳಿಸೋಕೆ ಊಟಾ ಬಿಟ್ರಾ ಗಿಲ್ಲಿ – ಭಾವನೆಗೆ ಬೆಲೆ ಇಲ್ಲಾ ಅಂತೀರಾ?
Cinema Latest Sandalwood Top Stories
Kavya Vs Rakshita
ಕಾವ್ಯ Vs ರಕ್ಷಿತಾ| ಅಮಾಯಕಿಯಂತೆ ನಾಟಕ – ರಿಯಲ್‌ ಕನ್ನಿಂಗ್‌ ನೀವು
Cinema Latest Top Stories TV Shows
The Devil
ʻದಿ ಡೆವಿಲ್‌ʼ ರಿಲೀಸ್‌ಗೆ ಕ್ಷಣಗಣನೆ – ಪ್ರೀತಿಯ ಸೆಲೆಬ್ರಿಟಿಸ್‌ಗೆ ಜೈಲಿಂದಲೇ ʻದಾಸʼನ ಸಂದೇಶ; ಪತ್ರದಲ್ಲಿ ಏನಿದೆ?
Cinema Latest Sandalwood Top Stories
Mahakavi Movies 2
ಬರಗೂರರ 25ನೇ ಸಿನಿಮಾ ‘ಮಹಾಕವಿ’ ಶೂಟಿಂಗ್ ಮುಕ್ತಾಯ
Cinema Latest Sandalwood

You Might Also Like

Raichur Coal
Crime

ಕ್ಲೀನಿಂಗ್ ಹೆಸರಲ್ಲಿ ಕಲ್ಲಿದ್ದಲು ಲೂಟಿ – ಪ್ರತಿನಿತ್ಯ 150 ಟನ್ ಸಾಗಾಟ

Public TV
By Public TV
10 minutes ago
Be careful when driving on highways at night
Bengaluru City

ಹೈವೇಗಳಲ್ಲಿ ರಾತ್ರಿ ವಾಹನ ಓಡಿಸೋವಾಗ ಎಚ್ಚರವಾಗಿರಿ – ಗಾಬರಿ ಹುಟ್ಟಿಸುತ್ತೆ ಸರ್ಕಾರಿ ಅಂಕಿ-ಅಂಶಗಳು

Public TV
By Public TV
33 minutes ago
Girl
Latest

ಮುಗುಳ್ನಗೆಯ ಗಿಫ್ಟ್‌ ಹಿಡ್ಕೊಂಡು ಮತ್ತೆ ಮತ್ತೆ ಸಿಗ್ತಾಳೆ ಆ ಅಪರಿಚಿತೆ..!

Public TV
By Public TV
1 hour ago
towing 1
Bengaluru City

ಶೀಘ್ರವೇ ಬೆಂಗಳೂರಿನಲ್ಲಿ ಟೋಯಿಂಗ್‌ ಆರಂಭ!

Public TV
By Public TV
1 hour ago
Haveri Crime
Crime

ಯಾರದ್ದೋ ಜಾಗ ತೋರಿಸಿ ಲಕ್ಷ ಲಕ್ಷ ಪಂಗನಾಮ – ಕಂತೆ ಕಂತೆ ನೋಟು ಕೊಟ್ಟು ಮೋಸ ಹೋದ ಉದ್ಯಮಿ!

Public TV
By Public TV
2 hours ago
Belagavi Session DCM DK Shivakumar Dinner Politics with over 40 MLAs
Belgaum

40ಕ್ಕೂ ಹೆಚ್ಚು ಶಾಸಕರ ಜೊತೆ ಡಿಕೆಶಿ ಡಿನ್ನರ್‌ ಪಾಲಿಟಿಕ್ಸ್‌!

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?