ಬೆಂಗಳೂರು: ಸಿಲಿಕಾನ್ ಸಿಟಿ ತಾಯಂದಿರೇ ಎಚ್ಚರ ಯಾಕಂದ್ರೆ ನಿಮಗೇ ಗೊತ್ತಿಲ್ಲದ ಹಾಗೇ ಮನೆ ಮುಂದೆ ಆಟವಾಡುತ್ತಿದ್ದ ಮಕ್ಕಳನ್ನು ಕಳವು ಮಾಡುತ್ತಾರೆ. ಭಿಕ್ಷಾಟನೆ ಮಾಡುವ ಮಹಿಳೆಯರಿಗೂ ಮಾರಾಟ ಮಾಡುತ್ತಾರೆ. ಈ ರೀತಿ ಮಾಡುತ್ತಿದ್ದ ಮಕ್ಕಳ ಕಳ್ಳಿ ಪೊಲೀಸರ ಬಲೆಗೆ ಬಿದ್ದಿದ್ದಾಳೆ.
ಶೇಕಪ್ಪ ಹಾಗೂ ಮಂಜುಳ ದಂಪತಿಯ ಮಹೇಶ್ ಕಳ್ಳತವಾದ ಮಗು. ಕೆ.ಜಿ ಹಳ್ಳಿ ಠಾಣಾವ್ಯಾಪ್ತಿಯಲ್ಲಿ ಮೂರು ವರ್ಷದ ಮಗು ಕಳ್ಳತನ ಮಾಡಿದ ಖರ್ತನಾಕ್ ಕಳ್ಳಿ, ಭಿಕ್ಷಾಟನೆ ಮಾಡುವವರಿಗೆ ಮಾರಾಟ ಮಾಡಿದ್ದಳು. ಬೆಂಗಳೂರಿನ ನಾಗಾವಾರದಲ್ಲಿ ಈ ಘಟನೆ ನಡೆದಿದ್ದು, ಜನವರಿ 21 ರಂದೇ ಈ ಮಗುವನ್ನು ಕಳ್ಳತನ ಮಾಡಿದ್ದಾಳೆ.
ಮಗು ತಂದೆ ಶೇಕಪ್ಪ ಮೂಲತಃ ಯಾದಗಿರಿಯವನಾಗಿದ್ದು, ತನ್ನ ಕುಟುಂಬದ ಜೊತೆಗೆ ಬೆಂಗಳೂರಿನಲ್ಲಿ ವಾಸವಾಗಿದ್ದರು. ಮನೆಯವರು ಕೂಲಿ ಕೆಲಸ ಮಾಡುತ್ತಿದ್ದನ್ನು ನೋಡಿಕೊಂಡ ಖತರ್ನಾಕ್ ಮಹಿಳೆ ಮಗು ಮನೆ ಮುಂದೆ ಆಟವಾಡುವಾಗವ ಕಳ್ಳತನ ಮಾಡಿದ್ದಾಳೆ. ಮಗು ಕಳ್ಳತನ ಮಾಡುತ್ತಿರುವ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಿಸಿಟಿವಿ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ.