ಬೆಂಗಳೂರು: ಈ ವರ್ಷ ಬೆಂಗಳೂರು- ಚೆನ್ನೈ ಎಕ್ಸ್‌ಪ್ರೆಸ್ ವೇ (Bengaluru-Chennai Expressway) ಉದ್ಘಾಟನೆಯಾಗಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಮಾಹಿತಿ ನೀಡಿದ್ದಾರೆ.
ಖಾಸಗಿ ಕಾರ್ಯಕ್ರಮವೊಂದರಲ್ಲಿ ಈ ಕುರಿತು ಮಾತನಾಡಿದ ಅವರು, ಜೂನ್ 2026ಕ್ಕೆ ಎಕ್ಸ್‌ಪ್ರೆಸ್ ವೇ ಕಾಮಗಾರಿ ಮುಗಿಸುವ ಸಾಧ್ಯತೆ ಇದೆ. ಸದ್ಯಕ್ಕೆ 70 ಕಿ.ಮೀ ಎಕ್ಸ್‌ಪ್ರೆಸ್ ವೇ ಪೂರ್ಣಗೊಂಡಿದೆ. ಬೆಂಗಳೂರು ಟು ಚೆನ್ನೈ ಅಂದಾಜು 2 ರಿಂದ 2:30 ಗಂಟೆಯಲ್ಲಿ ತಲುಪಬಹುದು ಎಂದು ತಿಳಿಸಿದರು. ಇದನ್ನೂ ಓದಿ: Belagavi | ಕ್ಷುಲ್ಲಕ ಕಾರಣಕ್ಕೆ ಒಂದೇ ಕೋಮಿನ 2 ಗುಂಪುಗಳ ನಡುವೆ ಘರ್ಷಣೆ – ಸೋಡಾ, ನೀರಿನ ಬಾಟಲಿಯಿಂದ ಹೊಡೆದಾಟ
ದಕ್ಷಿಣ ಭಾರತದ ಅತಿ ದೊಡ್ಡ ಎಕ್ಸ್‌ಪ್ರೆಸ್ ವೇನಲ್ಲಿ ಒಂದಾಗಿರುವ ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್ ವೇ ಕರ್ನಾಟಕ ಭಾಗದಲ್ಲಿ ಸಂಚಾರಕ್ಕೆ ಮುಕ್ತವಾಗಿದೆ. ಈ ಹೆದ್ದಾರಿ ಎರಡು ಪ್ರಮುಖ ನಗರಗಳ ನಡುವೆ ಉತ್ತಮ ಸಂಪರ್ಕ ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆರ್ಥಿಕವಾಗಿ ಎರಡು ನಗರಗಳಿಗೆ ಇದು ಸಹಕಾರಿಯಾಗಲಿದೆ. ಒಟ್ಟು 17,000 ಕೋಟಿಯ ಪ್ರಾಜೆಕ್ಟ್ ಇದಾಗಿದ್ದು, ಒಟ್ಟು 260 ಕಿ.ಮೀ ಉದ್ದದ ರಸ್ತೆ ಇದಾಗಿದೆ. ಇದನ್ನೂ ಓದಿ: ಸರ್ಕಾರ ಗಾಳಿಯೊಂದನ್ನ ಬಿಟ್ಟು ಎಲ್ಲಾ ಬೆಲೆ ಏರಿಕೆ ಮಾಡಿದೆ: ವಿಜಯೇಂದ್ರ ಕಿಡಿ
ಕರ್ನಾಟಕ ಭಾಗದ ಮಾರ್ಗದ ಕೆಲಸಗಳು ಸಂಪೂರ್ಣಗೊಂಡ ಹಿನ್ನೆಲೆ ರಾಜ್ಯದಲ್ಲಿ ಸಂಚಾರ ಮುಕ್ತಗೊಳಿಸಲಾಗಿದೆ. ತಾತ್ಕಾಲಿಕವಾಗಿ ಟೋಲ್ ಇಲ್ಲದೆ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಾರ್ಗಸೂಚಿ ಫಲಕಗಳು, ನಾಮಫಲಕಗಳು, ಡಿಜಿಟಲ್ ಫಲಕಗಳು ಸೇರಿದಂತೆ ರಾಜ್ಯ ಭಾಗದ 71 ಕಿ.ಮೀನ ಸಂಪೂರ್ಣ ಕಾರ್ಯ ಮುಕ್ತಾಯಗೊಂಡ ಹಿನ್ನೆಲೆ ಸಂಚಾರ ಮುಕ್ತಗೊಳಿಸಲಾಗಿದೆ. ಇದನ್ನೂ ಓದಿ: ಪೊಲೀಸರ ಮೇಲೆ ಹಲ್ಲೆ, ಪರಾರಿಗೆ ಯತ್ನ – ದರೋಡೆಕೋರನ ಕಾಲಿಗೆ ಗುಂಡೇಟು